ಮತ್ತೊಬ್ಬ ದರ್ಶನ್ ಅಭಿಮಾನಿಯಿಂದ ಅಪ್ಪು ಅವಹೇಳನ: ವಿಡಿಯೋ ವೈರಲ್

ತೆಲುಗು ತಮಿಳು ಚಿತ್ರರಂಗದಲ್ಲಿ ಹೆಚ್ಚಿದ್ದ ಸ್ಟಾರ್ ವಾರ್ಸ್‌, ಫ್ಯಾನ್ಸ್ ವಾರ್ಸ್ ಎಂಬ ಕೆಟ್ಟ ಸಂಸ್ಕೃತಿ ಇತ್ತೀಚೆಗೆ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟಿದೆ. ಅದರಲ್ಲಿಯೂ ಅಗಲಿ ಹೋಗಿರುವ ಪುನೀತ್ ರಾಜ್‌ಕುಮಾರ್ ಬಗ್ಗೆ ಮಾಡಲಾಗುತ್ತಿರುವ ಅವಹೇಳನ ಪುನೀತ್ ಅಭಿಮಾನಿಗಳನ್ನು ಮಾತ್ರವಲ್ಲದೆ, ಮಾನವೀಯತೆ ಬಗ್ಗೆ ನಂಬಿಕೆಯುಳ್ಳವರಿಗೆ ಬೇಸರ ಮೂಡಿಸುತ್ತಿದೆ.

ಇತ್ತೀಚೆಗಷ್ಟೆ ಮೈಸೂರಿನ ಲಿಂಗದೇರು ಕೊಪ್ಪನ ನಿವಾಸಿ ಪುಟ್ಟ ಹೆಸರಿನ ಯುವಕನೊಬ್ಬ ಪುನೀತ್ ರಾಜ್‌ಕುಮಾರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ವಿಡಿಯೋ ಮಾಡಿದ್ದಿದ್ದು ವೈರಲ್ ಆಗಿತ್ತು. ಆ ನಂತರ ಪುನೀತ್ ಅಭಿಮಾನಿಗಳು ಯುವಕನ ಮನೆಯ ಮುಂದೆ ಪ್ರತಿಭಟನೆ ನಡೆಸಿದ ಬಳಿಕ ಯುವಕ ಕ್ಷಮೆ ಕೇಳಿದ್ದಲ್ಲದೆ, ಅಪ್ಪು ಭಾವಚಿತ್ರಕ್ಕೆ ಪೂಜೆ ಸಹ ಮಾಡಿದರು.

ಇದೀಗ ಕೋಲಾರದ ದರ್ಶನ್ ಅಭಿಮಾನಿಯೊಬ್ಬ ಪುನೀತ್ ರಾಜ್‌ಕುಮಾರ್‌ಗೆ ನಿಂದನೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ದರ್ಶನ್ ಹಾಗೂ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ನಡುವೆ ಯಾರು ಗ್ರೇಟ್ ಎಂಬ ಬಗ್ಗೆ ಚರ್ಚೆ ನಡೆವಾಗ ದರ್ಶನ್ ಅಭಿಮಾನಿ, ಪುನೀತ್ ರಾಜ್‌ಕುಮಾರ್ ಅವರನ್ನು ಅವಾಚ್ಯವಾಗಿ ನಿಂದಿಸಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.

ದರ್ಶನ್ ಅಭಿಮಾನಿಯಿಂದ ಅಪ್ಪುಗೆ ಅಪಮಾನ

ದರ್ಶನ್ ಅಭಿಮಾನಿಯಿಂದ ಅಪ್ಪುಗೆ ಅಪಮಾನ

ಕೋಲಾರದ ಎಚ್‌ ಕ್ರಾಸ್ ಬಳಿಯ ಬಿಚ್ಚಗೊಂಡನಹಳ್ಳಿ ಗ್ರಾಮದ ಯುವಕನೊಬ್ಬ ಪುನೀತ್ ರಾಜ್‌ಕುಮಾರ್ ಬಗ್ಗೆ ಮಾತನಾಡುತ್ತಾ ಅವರ ವ್ಯಕ್ತಿತ್ವ ಹೀಗಳೆಯುವ ಪದಗಳನ್ನು ಬಳಸಿದ್ದಾನೆ. ಅದನ್ನು ಪುನೀತ್ ರಾಜ್‌ಕುಮಾರ್ ಅಭಿಮಾನಿ ವಿಡಿಯೋದಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ. 'ರೆಕಾರ್ಡ್ ಮಾಡಿಕೊಂಡು ಯೂಟ್ಯೂಬ್‌ನಲ್ಲಿ ಹಾಕುತ್ತೀಯ? ಹಾಕಿಕೊ' ಎಂದು ಹೇಳುತ್ತಲೇ ಪುನೀತ್ ಬಗ್ಗೆ ಅವಾಚ್ಯವಾಗಿ ಆ ಯುವಕ ಮಾತನಾಡಿದ್ದಾನೆ. 'ದರ್ಶನ್ ಮಾಡಿರುವುದರಲ್ಲಿ ಅರ್ಧದಷ್ಟೂ ಸಹ ಪುನೀತ್ ರಾಜ್‌ಕುಮಾರ್ ಮಾಡಿಲ್ಲ' ಎಂದಿರುವ ದರ್ಶನ್ ಅಭಿಮಾನಿ, ಆ ನಂತರವೂ ಕೆಲವು ಅವಾಚ್ಯ ಮಾತುಗಳನ್ನು ನಿಂದನಾತ್ಮಕ ಮಾತುಗಳನ್ನು ಪುನೀತ್ ರಾಜ್‌ಕುಮಾರ್ ಬಗ್ಗೆ ಆಡಿದ್ದಾನೆ.

ವಾದ ಮಾಡಿರುವ ಪುನೀತ್ ಅಭಿಮಾನಿ

ವಾದ ಮಾಡಿರುವ ಪುನೀತ್ ಅಭಿಮಾನಿ

ವಿಡಿಯೋ ರೆಕಾರ್ಡ್ ಮಾಡಿಕೊಂಡಿರುವ ಪುನೀತ್ ರಾಜ್‌ಕುಮಾರ್ ಅಭಿಮಾನಿ ಸಹ, ದರ್ಶನ್‌ಗಿಂತಲೂ ಹೆಚ್ಚು ಸೇವೆಯನ್ನು ಪುನೀತ್ ರಾಜ್‌ಕುಮಾರ್ ಮಾಡಿದ್ದಾರೆ. ದರ್ಶನ್ ಸ್ವತಃ ತನ್ನ ಬಳಿ ಸಹಾಯ ಮಾಡಲು ಹೆಚ್ಚು ಹಣವಿಲ್ಲ ಎಂದು ಹೇಳಿಕೊಂಡಿದ್ದರು, ಆದರೆ ಪುನೀತ್ ಕೋಟ್ಯಂತರ ರುಪಾಯಿ ಹಣವನ್ನು ಸಮಾಜ ಸೇವೆಗೆ ಮುಡಿಪಾಗಿ ಇಟ್ಟಿದ್ದರು ಎಂದಿದ್ದಾರೆ.

ಪ್ರಶ್ನೆ ಮಾಡಿರುವ ದರ್ಶನ್ ಅಭಿಮಾನಿ

ಪ್ರಶ್ನೆ ಮಾಡಿರುವ ದರ್ಶನ್ ಅಭಿಮಾನಿ

'ಸತ್ತ ಮೇಲೆ ಎಲ್ಲರೂ ಒಳ್ಳೆಯವರೇ, ಸತ್ತ ಬಳಿಕ ಅವನನ್ನು ಹೊಗಳ್ತಾ ಇದ್ದಾರೆ' ಎಂದು ಆತ ಒಳ್ಳೆಯ ಮನುಷ್ಯ ಅಲ್ಲ ಎನ್ನುತ್ತಾನೆ. ಆದ ಪುನೀತ್ ರಾಜ್‌ಕುಮಾರ್ ಅಭಿಮಾನಿ, ಆತನ ಕೆಟ್ಟತನ ನಿನಗೆ ಹೇಗೆ ಗೊತ್ತು, ನೀನು ಹೋಗಿದ್ಯಾ? ನೋಡಿದ್ಯಾ ಎಂದು ಪ್ರಶ್ನೆ ಮಾಡಿದ್ದಾನೆ. ಕೊನೆಗೆ ಪುನೀತ್ ಅಭಿಮಾನಿ ವಿಡಿಯೋ ಮಾಡುತ್ತಿರುವುದನ್ನು ಗಮನಿಸಿ. ನೀನು ವಿಡಿಯೋ ಮಾಡುವುದನ್ನು ನಿಲ್ಲಿಸು ಎಂದು ಹೇಳುತ್ತಾ, ಬಳಿ ಬಂದು ಮೊಬೈಲ್ ಆಫ್ ಮಾಡಿಸಿದ್ದಾನೆ.

ವಿಡಿಯೋ ಬಗ್ಗೆ ಅಸಮಾಧಾನ

ವಿಡಿಯೋ ಬಗ್ಗೆ ಅಸಮಾಧಾನ

ವಿಡಿಯೋದಲ್ಲಿ ದರ್ಶನ್ ಅಭಿಮಾನಿ, ಪುನೀತ್ ರಾಜ್‌ಕುಮಾರ್ ಅನ್ನು ಅವಾಚ್ಯ ಪದಗಳನ್ನು ಬಳಸಿ ಮಾತನಾಡಿರುವುದು ಸ್ಪಷ್ಟ. ಪುನೀತ್ ರಾಜ್‌ಕುಮಾರ್ ಅಭಿಮಾನಿ, ದರ್ಶನ್‌ಗಿಂತಲೂ ಪುನೀತ್ ಹೆಚ್ಚು ಸೇವೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಆದರೆ ದರ್ಶನ್ ಬಗ್ಗೆ ಅವಾಚ್ಯವಾಗಿ ಮಾತನಾಡಿರುವುದು ವಿಡಿಯೋದಲ್ಲಿ ದಾಖಲಾಗಿಲ್ಲ. ಈ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದರ್ಶನ್ ಅಭಿಮಾನಿಯ ಅತಿರೇಕದ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

More from Filmibeat

English summary
Actor Darshan's fan from Kolar district insults Karnataka Ratna Puneeth Rajkumar. Appu fan records video and shared it on social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X