For Quick Alerts
  ALLOW NOTIFICATIONS  
  For Daily Alerts

  ಚಾಲೆಂಜಿಂಗ್ ಸ್ಟಾರ್ ಆಶೀರ್ವಾದದಲ್ಲಿ ನಡೆಯಲಿದೆ ಮದುವೆ

  By Pavithra
  |
  ದರ್ಶನ್ ಆಶೀರ್ವಾದದಲ್ಲಿ ಒಂದಾಗ್ತಿದೆ ಈ ಜೋಡಿ | Filmibeat Kannada

  ಇತ್ತೀಚಿನ ದಿನಗಳಲ್ಲಿ ಮದುವೆಗಿಂತಲೂ ಮದುವೆಗಾಗಿ ಮಾಡಿಸುವ ಆಮಂತ್ರಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಎಲ್ಲರ ಗಮನ ಸೆಳೆಯಬೇಕು. ಆಮಂತ್ರಣ ಪತ್ರ ಕೈಗೆ ಕೊಟ್ಟ ತಕ್ಷಣ ಏನೋ ಸ್ಪೆಷಲ್ ಆಗಿದೆ ಎನ್ನಿಸಬೇಕು ಎನ್ನುವುದು ಪ್ರತಿಯೊಬ್ಬರಲ್ಲೂ ಇರುತ್ತೆ. ಅದಕ್ಕಾಗಿಯೇ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಯೊಬ್ಬರು ದರ್ಶನ್ ಆಶೀರ್ವಾದದಲ್ಲಿ ಮದುವೆ ಆಗಲು ಸಜ್ಜಾಗಿದ್ದಾರೆ.

  ಹೌದು ಶಿವರಾಮ್ ಎನ್ನುವವರು ತಮ್ಮ ಮದುವೆ ಕಾರ್ಡ್ ನಲ್ಲಿ ದರ್ಶನ್ ಅವರ ಫೋಟೋಗಳನ್ನ ಹಾಕಿಸುವುದರ ಜೊತೆಯಲ್ಲಿ ಆರಂಭದಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಆಶೀರ್ವಾದದೊಂದಿಗೆ ಎಂದು ಬರೆಸಿ ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನ ಸ್ಪೆಷಲ್ ಎನ್ನಿಸುವಂತೆ ಮಾಡಿದ್ದಾರೆ.

  ಸಿಎಂ ಪರವಾಗಿ ಪ್ರಚಾರಕ್ಕಿಳಿದ್ರು ಚಾಲೆಂಜಿಂಗ್ ಸ್ಟಾರ್ ಸಿಎಂ ಪರವಾಗಿ ಪ್ರಚಾರಕ್ಕಿಳಿದ್ರು ಚಾಲೆಂಜಿಂಗ್ ಸ್ಟಾರ್

  ಉತ್ತರಹಳ್ಳಿಯ ಕೋಡಿಪಾಳ್ಯ ನಲ್ಲಿ ಶಿವರಾಮ್ ಹಾಗೂ ವನಜಾಕ್ಷಿ ಅವರ ಮದುವೆ ಮುಂದಿನವಾರ ನಡೆಯುತ್ತಿದೆ. ದರ್ಶನ್ ಅಭಿಮಾನಿಯಾಗಿರುವುದರಿಂದ ಈ ರೀತಿಯ ವಿಭಿನ್ನವಾಗಿ ಮದುವೆ ಆಮಂತ್ರಣವನ್ನ ಪ್ರಿಂಟ್ ಮಾಡಿಸಲಾಗಿದೆ.

  ಈ ಹಿಂದೆ ಮಯಸೂರಿನ ಅಭಿಮಾನಿಯೊಬ್ಬರು ಇದೇ ರೀತಿಯಲ್ಲಿ ಮದುವೆ ಕಾರ್ಡ್ ಮಾಡಿಸಿದ್ದರು. ದರ್ಶನ್ ಅವರ ಇಡೀ ಕುಟುಂಬದ ಫೋಟೋಗಳನ್ನ ಬಳಸಿಕೊಂಡು ಆಮಂತ್ರಣ ಪತ್ರಿಕೆಯನ್ನ ಮಾಡಿಸಿದ್ದರು. ಇತ್ತಿಚಿನ ದಿನಗಳಲ್ಲಿ ಸ್ಟಾರ್ ಗಳ ಫೋಟೋಗಳನ್ನ ಬಳಸಿಕೊಂಡು ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನ ಡಿಸೈನ್ ಮಾಡಿಸುವುದು ಟ್ರೆಂಡ್ ಆಗುತ್ತಿದೆ.

  English summary
  Darshan fan has printed the his wedding invitation magazine using Kannada actor Darshan photos

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X