twitter
    For Quick Alerts
    ALLOW NOTIFICATIONS  
    For Daily Alerts

    ಜನಮೆಚ್ಚುಗೆ ಗಳಿಸುತ್ತಿದೆ ದರ್ಶನ್ ಅಭಿಮಾನಿ ಮಾಡುತ್ತಿರುವ ಜನಸೇವೆ

    |

    ದರ್ಶನ್, ನಟನೆ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಹಾಯ ಬೇಡಿ ಬರುವ ಯಾರನ್ನೂ ನಿರಾಸೆಗೊಳಿಸುವುದಿಲ್ಲ ದರ್ಶನ್.

    Recommended Video

    DBoss ಮೇಲಿನ ಅಭಿಮಾನಕ್ಕೆ ಫ್ಯಾನ್ಸ್ ಮಾಡಿದ್ದೇನು ನೋಡಿ | Filmibeat Kannada

    ತಮ್ಮ ಅಭಿಮಾನದ ನಟನ ಹಾದಿಯನ್ನೇ ಅವರ ಕೆಲವು ಅಭಿಮಾನಿಗಳು ಹಿಡಿದಿದ್ದಾರೆ. ದರ್ಶನ್ ಅಭಿಮಾನಿ ಸಂಘಗಳು ಹಲವು ಸಾಮಾಜಿಕ ಕಾರ್ಯವನ್ನು ಮುಂಚಿನಿಂದಲೂ ಮಾಡುತ್ತಲೇ ಬಂದಿವೆ. ಇದೀಗ ದರ್ಶನ್ ಅಭಿಮಾನಿಯೊಬ್ಬ ಮಾಡುತ್ತಿರುವ ಸಾಮಾಜಿಕ ಕಾರ್ಯ ಜನಮೆಚ್ಚುಗೆ ಗಳಿಸಿದೆ.

    'ರಾಬರ್ಟ್' ಸಿನಿಮಾ ನೋಡಿ ಮಂಗಳಮುಖಿ 'ಪದ್ಮಶ್ರೀ' ಮಂಜಮ್ಮ ಜೋಗತಿ ಹೇಳಿದ್ದೇನು?'ರಾಬರ್ಟ್' ಸಿನಿಮಾ ನೋಡಿ ಮಂಗಳಮುಖಿ 'ಪದ್ಮಶ್ರೀ' ಮಂಜಮ್ಮ ಜೋಗತಿ ಹೇಳಿದ್ದೇನು?

    ಮುರಳಿಧರ ಎಂ ಹೆಸರಿನ ದರ್ಶನ್ ಅಭಿಮಾನಿ ಈ ಸುಡು ಬೇಸಿಗೆ ಸಮಯದಲ್ಲಿ ಜನರಿಗೆ ಉಚಿತ ಕುಡಿಯುವ ನೀರು ಪೂರೈಕೆ ಮಾಡುವ ಕಾರ್ಯಕ್ಕೆ ಕೈಹಾಕಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಬಳಿಯ ನಂಜಾಪುರದಲ್ಲಿ ಕುಡಿಯುವ ನೀರನ್ನು ಟ್ಯಾಂಕರ್‌ ಮೂಲಕ ಉಚಿತವಾಗಿ ಸರಬರಾಜು ಮಾಡುತ್ತಿದ್ದಾರೆ ಈ ದರ್ಶನ್ ಅಭಿಮಾನಿ.

    ದೊಡ್ಡ ಪೋಸ್ಟರ್ ಅಂಟಿಸಿರುವ ಮುರಳೀಧರ

    ದೊಡ್ಡ ಪೋಸ್ಟರ್ ಅಂಟಿಸಿರುವ ಮುರಳೀಧರ

    ನೀರಿನ ಟ್ಯಾಂಕರ್‌ ಮೇಲೆ ದರ್ಶನ್‌ ಅವರ ದೊಡ್ಡ ಚಿತ್ರ ಅಂಟಿಸಿರುವ ಮುರಳೀಧರ, 'ಕಾಡು ಬೆಳೆಸಿ, ನೀರು ಉಳಿಸಿ. ವನ್ಯ ಜೀವಿಗಳನ್ನು ಸಂರಕ್ಷಿಸಿ. ಜೈ ಡಿ ಬಾಸ್' ಎಂದು ಬರೆಸಿದ್ದಾರೆ. ಟ್ಯಾಂಕರ್ ಹಿಂದೆ ಅಂಟಿಸಿರುವ ಪೋಸ್ಟರ್‌ನಲ್ಲಿ ದರ್ಶನ್ ತಂದೆ ತೂಗುದೀಪ ಶ್ರೀನಿವಾಸ್ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ಅವರ ಚಿತ್ರವೂ ಇದೆ.

    2006 ರಿಂದಲೂ ದರ್ಶನ್ ಅಭಿಮಾನಿ

    2006 ರಿಂದಲೂ ದರ್ಶನ್ ಅಭಿಮಾನಿ

    'ಫಿಲ್ಮೀಬೀಟ್‌' ಜೊತೆ ಮಾತನಾಡಿದ ದರ್ಶನ್ ಅಭಿಮಾನಿ ಮುರಳೀಧರ, 'ನಾನು 2006 ರಿಂದಲೂ ದರ್ಶನ್ ಅವರ ಅಭಿಮಾನಿ. ಅವರ ನಟನೆ, ಸಾಮಾಜಿಕ ಕಾರ್ಯ, ವನ್ಯಜೀವಿಗಳ ಬಗ್ಗೆ ಅವರ ಕಾಳಜಿ ಇವೆಲ್ಲವೂ ನನ್ನ ಮೇಲೆ ಬಹುವಾಗಿ ಪ್ರಭಾವ ಬೀರಿದವು. ಹಾಗಾಗಿ ಅವರ ಹೆಸರಿನಲ್ಲಿ ಏನಾದರೂ ಒಳ್ಳೆಯ ಕೆಲಸ ಮಾಡಬೇಕೆಂಬ ಇಚ್ಛೆಯಿಂದ ಇದೇ ವರ್ಷದ ದರ್ಶನ್ ಹುಟ್ಟುಹಬ್ಬದ ಸಂದರ್ಭ ಉಚಿತವಾಗಿ ನೀರು ವಿತರಿಸುವ ಕಾರ್ಯ ಆರಂಭಿಸಿದೆ' ಎಂದರು.

    'ಬುಲ್ ಬುಲ್' ನೋಡಿ ''ಸಿನಿಮಾ ಡೌಟ್ ಇದೆ'' ಎಂದು ಎಚ್ಚರಿಸಿದ್ದು ಯಾರು?'ಬುಲ್ ಬುಲ್' ನೋಡಿ ''ಸಿನಿಮಾ ಡೌಟ್ ಇದೆ'' ಎಂದು ಎಚ್ಚರಿಸಿದ್ದು ಯಾರು?

    ನಂಜಾಪುರ ಗ್ರಾಮದಲ್ಲಿ ಉಚಿತ ನೀರು ಸರಬರಾಜು

    ನಂಜಾಪುರ ಗ್ರಾಮದಲ್ಲಿ ಉಚಿತ ನೀರು ಸರಬರಾಜು

    ವೈಟ್‌ಫೀಲ್ಡ್‌ ಬಳಿಕ ನಂಜಾಪುರ ಎಂಬ ಹಳ್ಳಿಯಲ್ಲಿ ಮುರಳೀಧರ ಅವರು ನೀರು ಸರಬರಾಜು ಮಾಡುತ್ತಿದ್ದಾರೆ. ಈ ಮೊದಲೂ ಸಹ ಬೇಸಿಗೆ ಸಮಯದಲ್ಲಿ ನೀರು ಸರಬರಾಜು ಮಾಡುತ್ತಿದ್ದ ಮುರಳೀಧರ ಅವರು ಈ ಬಾರಿ ದರ್ಶನ್ ಹುಟ್ಟುಹಬ್ಬದ ಬಳಿಕ ದರ್ಶನ್ ಹೆಸರಿನಲ್ಲಿ ಉಚಿತ ನೀರು ಸರಬರಾಜು ಸೇವೆ ಆರಂಭಿಸಿದ್ದಾರೆ.

    ದರ್ಶನ್ ಸರಳತೆಗೆ ಮಾರು ಹೋದೆ: ಮುರಳೀಧರ

    ದರ್ಶನ್ ಸರಳತೆಗೆ ಮಾರು ಹೋದೆ: ಮುರಳೀಧರ

    ದರ್ಶನ್ ಅವರ ಸರಳತೆ ಬಗ್ಗೆ ಮಾತನಾಡಿದ ಮುರಳೀಧರ, 'ನಾನು 2006 ರಲ್ಲಿ ಕಾರು ಶೋ ರೂಂ ಒಂದರಲ್ಲಿ ಕೆಲಸ ಮಾಡುತ್ತಿದ್ದೆ. ಆಗ ದರ್ಶನ್ ಅವರು ಪತ್ನಿ ವಿಜಯಲಕ್ಷ್ಮಿ ಅವರಿಗಾಗಿ ಕಾರು ಖರೀದಿಸಿದ್ದರು. ನಾನು ಆ ಕಾರಿನ ಸರ್ವಿಸ್ ಇನ್ನಿತರೆ ಕಾರ್ಯಗಳನ್ನು ಮಾಡಿಸಿಕೊಡಲು ಅವರ ಮನೆಗೆ ಆಗಾಗ್ಗೆ ಹೋಗುತ್ತಿದ್ದೆ. ಆಗೆಲ್ಲಾ ದರ್ಶನ್ ಅವರು ಬಹಳ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ವಿಜಯಲಕ್ಷ್ಮಿ ಅವರೂ ಸಹ ನನ್ನನ್ನು ತಮ್ಮನಂತೆ ಕಾಣುತ್ತಿದ್ದರು. ದರ್ಶನ್ ಅವರ ಆ ಸರಳತೆಯೇ ನನ್ನನ್ನು ಅವರ ಅಭಿಮಾನಿ ಆಗುವಂತೆ ಮಾಡಿತು' ಎಂದಿದ್ದಾರೆ ಮುರಳೀಧರ.

    English summary
    Darshan fan Muralidhar M distributing free water in the name of Darshan in his village Nanjapura.
    Sunday, March 28, 2021, 16:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X