ಅಭಿಮಾನಿಗಳ ಅಭಿಮಾನಕ್ಕೆ 'ಡಿ ಬಾಸ್' ಶರಣಾಗಲೇ ಬೇಕು
Recommended Video

ಕಲಾವಿದರು ಅಂದ ಮೇಲೆ ಅವರಿಗೆ ಅಭಿಮಾನಿಗಳಿ ಇರಬೇಕು. ಸಿನಿಮಾ ಪ್ರೇಕ್ಷಕರು ಅಭಿಮಾನಿಗಳು ಇಲ್ಲದೇ ಯಾರು ಸ್ಟಾರ್ ಪಟ್ಟ ಪಡೆದುಕೊಳ್ಳಲು ಸಾಧ್ಯವಿಲ್ಲ. ತನ್ನ ನೆಚ್ಚಿನ ಸ್ಟಾರ್ ಸಿನಿಮಾ ಬಿಡುಗಡೆ ಆಯ್ತು ಅಂದರೆ ಮಧ್ಯರಾತ್ರಿಯಿಂದಲೇ ಥಿಯೇಟರ್ ಸಿಂಗಾರ ಮಾಡುವುದು. ಚಿತ್ರಮಂದಿರ ಬಳಿ ಗಲಾಟೆ ಆಗದಂತೆ ನೋಡಿಕೊಳ್ಳುವುದು ಇವೆಲ್ಲವೂ ಅಭಿಮಾನಿಗಳದ್ದೇ ಜವಾಬ್ದಾರಿ.
ಇನ್ನು ಹುಟ್ಟುಹಬ್ಬ ಬಂತು ಅಂದರೆ ಸಾಕು ವಿಶೇಷವಾದ ಕೇಕ್ ಮಾಡಿಸುವುದು, ಅನಾಥರಿಗೆ, ಬಡವರಿಗೆ ಉಪಯುಕ್ತ ವಸ್ತುಗಳನ್ನ ಕೊಡಿಸುವುದು . ಫ್ಯಾನ್ಸ್ ಕ್ಲಬ್ ಪ್ರಾರಂಭ ಮಾಡಿ ಒಂದೇ ರೀತಿ ಬಟ್ಟೆ ಧರಿಸಿ ಸ್ಟಾರ್ ಗಳ ಗಮನ ಸೆಳೆಯುವುದು. ಅವರ ಹೆಸರಿನಲ್ಲಿ ಹಚ್ಚೆ ಹಾಕಿಸಿಕೊಳ್ಳುವುದು ಹೇಗೆ ಇನ್ನೂ ಹತ್ತು ಹಲವು ರೀತಿಯಲ್ಲಿ ತಮ್ಮ ಅಭಿಮಾನವನ್ನ ವ್ಯಕ್ತ ಪಡಿಸುತ್ತಾರೆ.
ಅಭಿಮಾನಿಗಳು ಬದಲಾಗಿದ್ದಾರೆ, ಅವರ ಯೋಚನೆಗಳು ಬದಲಾಗಿವೆ. ಇತ್ತಿಚಿಗಷ್ಟೇ ಎಟಿಎಂ ಕಾರ್ಡ್ ನಲ್ಲಿ ಸ್ಟಾರ್ ಗಳ ಫೋಟೋಗಳನ್ನ ಹಾಕಿಸಿಕೊಂಡಿರುವ ಸ್ಟೋರಿಯನ್ನ ಇದೇ ಫಿಲ್ಮಿ ಬೀಟ್ ನಲ್ಲಿ ಓದಿದ್ದೀರಿ. ಆದರೆ ಅಭಿಮಾನಿಯೊಬ್ಬರು ತಮ್ಮ ಮನೆ ಮದುವೆ ಆಮಂತ್ರಣದ ಪತ್ರಿಕೆ ತುಂಬಾ ದರ್ಶನ್ ಅವರ ಫ್ಯಾಮಿಲಿ ಫೋಟೋಗಳನ್ನ ಹಾಕಿ ಸಿಂಗಾರ ಮಾಡಿಸಿದ್ದಾರೆ. ಯಾರು ಆತ? ಯಾಕೆ ಈ ನಿರ್ಧಾರ? ಹೇಗಿದೆ ತೂಗುದೀಪ ಫ್ಯಾಮಿಲಿ ಇರುವ ಮದುವೆ ಆಮಂತ್ರಣ ಪತ್ರಿಕೆ. ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ.

ಮದುವೆ ಆಮಂತ್ರಣ ಪತ್ರಿಕೆಯಲ್ಲಿ ದರ್ಶನ್
ಮೈಸೂರಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಶೀರ್ವಾದದಲ್ಲಿ ಮದುವೆಯೊಂದು ನಡೆಯುತ್ತಿದೆ. ದರ್ಶನ್ ತೂಗುದೀಪ ಅಭಿಮಾನಿ ಬಳಗದವರ ಮನೆ ಮದುವೆಗೆ ದರ್ಶನ್ ಕುಟುಂಬಸ್ಥರ ಫೋಟೊಗಳನ್ನ ಬಳಸಿ ಮದುವೆಯ ಆಮಂತ್ರಣ ಪತ್ರಿಕೆಯನ್ನ ಸಿದ್ದ ಮಾಡಿಸಿದ್ದಾರೆ..

ತೂಗುದೀಪ ಕುಟುಂಬದ ಹೆಸರು
ಮೈಸೂರಿನ ಅಭಿಮಾನಿಗಳು ಈ ರೀತಿಯ ವಿಭಿನ್ನ ಆಲೋಚನೆಯನ್ನ ಮಾಡಿದ್ದಾರೆ. ಆಮಂತ್ರಣ ಪತ್ರಿಕೆಯಲ್ಲಿ ಫೋಟೋಗಳು ಮಾತ್ರವಲ್ಲದೆ ತೂಗುದೀಪ ಕುಟುಂಬದ ಎಲ್ಲರ ಹೆಸರನ್ನೂ ಸೇರಿಸಲಾಗಿದೆ.

ದುರ್ಯೋಧನನ ಆಶೀರ್ವಾದ
ಮದುವೆ ಆಮಂತ್ರಣ ಪತ್ರಿಕೆಯ ಪ್ರಮುಖ ಆಕರ್ಷಣೆ ಅಂದರೆ ದುರ್ಯೋಧನ ವೇಷದಲ್ಲಿರುವ ದರ್ಶನ್ ಅವರ ಭಾವಚಿತ್ರ. ಈ ಮೂಲಕ ಚಿತ್ರದ ಪ್ರಚಾರಕ್ಕೂ ಅನುಕೂಲವಾಗುತ್ತದೆ.

ಸಿ ನಾಗೇಂದ್ರ ಅವರಿಂದ ಆಮಂತ್ರಣ
ಮೈಸೂರಿನ ಸುನೀಲ್ ಹಾಗೂ ನಯನ ಫೆಬ್ರವರಿ 7 ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕೆ ಆರ್ ನಗರದ ದೇವೇಗೌಡರ ಸಮುದಾಯ ಭವನದಲ್ಲಿ ಮದುವೆ ನಡೆಯುತ್ತಿದ್ದು ಇವರಿಬ್ಬರ ವಿವಾಹಕ್ಕೆ ಈ ವಿಭಿನ್ನ ರೀತಿಯ ಆಮಂತ್ರಣ ಪತ್ರಿಕೆಯನ್ನ ಮಾಡಿಸಲಾಗಿದೆ.


Click it and Unblock the Notifications











