Don't Miss!
- News
ಕಿಚ್ಚ ಸುದೀಪ್ ಭೇಟಿಯ ಹಿಂದಿನ ಕಾರಣ ಬಹಿರಂಗಪಡಿಸಿದ ಡಿಕೆಶಿ: ಏನದು ಕುತೂಹಲಕರ ಸಂಗತಿ?
- Finance
Infographics: ಬಜೆಟ್ 2023ನಲ್ಲಿ ಕೇಂದ್ರದ ಯೋಜನೆಗಳಿಗೆ ಸಿಕ್ಕ ಅನುದಾನ ಎಷ್ಟು? ವಿವಿರ ಇಲ್ಲಿದೆ
- Automobiles
ಇವಿಗಳ ಅಬ್ಬರ... 2023 ಜನವರಿಯಲ್ಲಿ ಅತಿ ಹೆಚ್ಚು ಮಾರಾಟ ಕಂಡ ಎಲೆಕ್ಟ್ರಿಕ್ ಸ್ಕೂಟರ್ಗಳಿವು!
- Sports
Border-Gavaskar Trophy: ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಈ ವೇಗಿ ಬೌಲಿಂಗ್ ಮಾಡಲ್ಲ; ಪ್ಯಾಟ್ ಕಮ್ಮಿನ್ಸ್
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ನನಗೆ ಹೊಡೆದವರ ಮೇಲೆ FIR ಮಾಡಿಸಿದ್ದೀನಿ":ಅಪ್ಪು ಫ್ಯಾನ್ಸ್ ವಿರುದ್ಧ ದೂರು ದಾಖಲಿಸಿದ ದರ್ಶನ್ ಫ್ಯಾನ್!
ಹೆಚ್ಚು ಕಡಿಮೆ ಕಳೆದೊಂದು ತಿಂಗಳಿಂದ ದರ್ಶನ್ ಫ್ಯಾನ್ಸ್ ಹಾಗೂ ಪುನೀತ್ ಫ್ಯಾನ್ಸ್ ನಡುವೆ ಕಿತ್ತಾಟ ನಡೆಯುತ್ತಲೇ ಇದೆ. ಹೊಸಪೇಟೆಯಲ್ಲಿ ದರ್ಶನ್ ಮೇಲೆ ಚಪ್ಪಲಿ ಎಸೆದ ಪ್ರಕರಣದ ಬಳಿಕ ದರ್ಶನ್ ಹಾಗೂ ಅಪ್ಪು ಅಭಿಮಾನಿಗಳ ನಡುವಿನ ಕಾದಾಟ ಜೋರಾಗಿದೆ.
ಇನ್ನೇನು ಈ ಪ್ರಕರಣ ತಣ್ಣಗಾಯ್ತು ಅನ್ನುವಾಗಲೇ ದರ್ಶನ್ ಅಭಿಮಾನಿ ಎಂದು ಹೇಳಿಕೊಂಡಿದ್ದ ಪ್ರಜ್ವಲ್ ಅನ್ನೋ ಯುವಕ ಅಪ್ಪುಗೆ ಕೆಟ್ಟದಾಗಿ ಬೈದು ವಿಡಿಯೋ ಮಾಡಿದ್ದ. ಆ ವಿಡಿಯೋ ನೋಡಿದ ಬಳಿಕ ಪುನೀತ್ ಫ್ಯಾನ್ಸ್ ಕೆರಳಿ ಕೆಂಡವಾಗಿದ್ದರು. ಈತನನ್ನು ಕರೆದು ಅಪ್ಪು ಸಮಾಧಿ ಮುಂದೆ ಕ್ಷಮೆಯನ್ನೂ ಕೇಳಿದ್ದರು.
ದರ್ಶನ್‌ಗೆ
'ಚಾಲೆಂಜಿಂಗ್
ಸ್ಟಾರ್',
'ಡಿಬಾಸ್'
ಅನ್ನೋ
ಟೈಟಲ್
ಬಂದಿದ್ದು
ಯಾವಾಗ?
ಇದಾದ ಕೆಲವು ದಿನಗಳ ಬಳಿಕ ಪ್ರಜ್ವಲ್ ಮತ್ತೊಂದು ವಿಡಿಯೋ ಮಾಡಿದ್ದಾನೆ. ಅಪ್ಪು ಅಭಿಮಾನಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಎಫ್‌ಐಆರ್ ದಾಖಲಾಗಿದೆ ಎಂದು ಹೇಳಿದ್ದಾನೆ. ತೂಗುದೀಪ ಡೈನೆಸ್ಟಿ ಅನ್ನೋ ಯೂಟ್ಯೂಬ್ ಚಾನೆಲ್‌ನಲ್ಲಿ ಈತನ ವಿಡಿಯೋ ಹರಿದಾಡುತ್ತಿದೆ. ಆ ವಿಡಿಯೋ ಸಾರಾಂಶ ಇಲ್ಲಿದೆ.

ಅಪ್ಪು ಫ್ಯಾನ್ಸ್ ಮೇಲೆ FIR?
"ನನಗೆ ಹೊಡೆದವರ ಮೇಲೆ ಎಫ್‌ಐಆರ್ ಮಾಡಿಸಿದ್ದೀನಿ. ಬೇಕಿದ್ದರೆ ಕಾಲ್ ಮಾಡಿ ನಿಮಗೆ ಎಫ್‌ಐಆರ್ ಕಾಪಿ ಕಳಿಸುತ್ತೇನೆ. ಎಫ್‌ಐಆರ್ ಕಾಪಿ ಕಳಿಸೋ ಅಗತ್ಯನೂ ಇಲ್ಲ. ಪೊಲೀಸ್ ಸ್ಟೇಷನ್‌ನಿಂದ ನಿಮಗೆ ಕಾಲ್ ಬರುತ್ತೆ.ಆಗಲೇ ಗೊತ್ತಾಗುತ್ತೆ.20 ಜನ ಬಂದು ನನಗೆ ಹೊಡೆದ್ರಲ್ಲಾ. ನನಗೆ ಕರೆದುಕೊಂಡು ಹೋಗಿ ಸಮಾಧಿ ಹತ್ತಿರ ಹೊಡೆದರಲ್ಲ ಎಲ್ಲರ ಮೇಲೂ ದೂರು ಕೊಟ್ಟಿದ್ದೇನೆ. ನನಗೆ ಯಾರೆಲ್ಲಾ ಮುಟ್ಟಿದ್ದೀರ, ಅವರ ಹೆಸರೆಲ್ಲವನ್ನೂ ಕೊಟ್ಟಿದ್ದೇನೆ." ಎಂದು ದರ್ಶನ್ ಅಭಿಮಾನಿ ಪ್ರಜ್ವಲ್ ಈ ವಿಡಿಯೋದಲ್ಲಿ ಹೇಳಿದ್ದಾನೆ

ನಿಮ್ಮ ಪರಿಸ್ಥಿತಿ ಏನಾಗುತ್ತೆ ನೋಡಿ
"ಇಷ್ಟೇ ಅಲ್ಲ. ಈ ವಿಡಿಯೋ ಬಂದಾದ್ಮೇಲೆ ನಿಮ್ಮ ಪರಿಸ್ಥಿತಿ ಏನಾಗುತ್ತೆ ನೋಡಿ. ನಿಮಗೆ ಮುಂದಿನ ಭೇಟಿ ಎಲ್ಲಿ ಅಂತ ಗೊತ್ತಿರುತ್ತೆ. ಆ ಜಾಗದಲ್ಲೇ ಭೇಟಿ ಮಾಡೋಣ. ಬಂದ್ಬಿಟ್ಟು ಅದೇನು ಮಾತಾಡುತ್ತಿರೋ ಮಾತಾಡಿ. ಅವತ್ತು ನಾವೂ ತೋರಿಸುತ್ತೇವೆ ಏನು ಅಂತ. ನೀವು ನನ್ನ ಹೊಡೆಯೋಕೆ ಅವತ್ತು 20 ಜನ ಬರೋದಲ್ಲ. ಈಗಾಗಲೇ ಮುಂದಿನ ಭೇಟಿ ಏನು ಅಂತ 50 ಪರ್ಸೆಂಟ್ ಗೊತ್ತಾಗಿರುತ್ತೆ.ಅವತ್ತು ಸಿಗುತ್ತೇನೆ" ಎಂದು ವಾರ್ನಿಂಗ್ ಕೊಟ್ಟಿದ್ದಾನೆ.

'20 ನಿಮಿಷ ವಿಡಿಯೋ ನೋಡಿದ್ರೆ ಹೀಗೆ ಮಾಡುತ್ತಿರಲಿಲ್ಲ'
"ನಾನು ಮಾತಾಡಿದ್ದೀನಿ. ನಮ್ಮ ಬಾಸ್ ಬಗ್ಗೆ ಕೆಟ್ಟಕೆಟ್ಟದಾಗಿ ಮಾತಾಡಿದ್ದರು. ನಾನು ವಿಡಿಯೋಗಳನ್ನು ಬಿಡಬಹುದು. ಆ ಮೂರು ನಾಲ್ಕು ಜನ ಇದ್ದಾರಲ್ಲ ಅವರಿಗೆ ಅಪ್ಪು ಫ್ಯಾನ್ಸ್ ನೀವೇ ಹೋಗಿ ಹೊಡೀತಿರ.ನಾನೊಂದು ಮೂವತ್ತು ಸೆಕೆಂಡ್ ವಿಡಿಯೋ ಮಾಡಿದ್ದಕ್ಕೆ ಟ್ರೋಲ್ ಮಾಡಿದ್ರಲ್ಲ. ಆ ಮೂವತ್ತು ಸೆಕೆಂಡ್‌ಗಿಂತ ಮುಂಚೆ ಮಾತಾಡಿದ 20 ನಿಮಿಷದ ವಿಡಿಯೋ ನೋಡಿದ್ದೀರಾ ನೀವು. ಅದನ್ನು ನೋಡಿದ್ದರೆ ಯಾರೂ ಹೀಗೆ ಮಾಡುತ್ತಿರಲಿಲ್ಲ ನನಗೆ. 20 ನಿಮಿಷ ವಿಡಿಯೋವನ್ನು ನೀವು ಕೇಳಿಕೊಳ್ಳಬೇಕಿತ್ತು." ಎಂದಿದ್ದಾನೆ.

'ನನ್ನ ತಪ್ಪೇನಿತ್ತು?'
"ನನ್ನ
ತಪ್ಪೇನಿತ್ತು
ಅದರಲ್ಲಿ..
ಅಪ್ಪು
ಸರ್‌ಗೆ
ಬೈದಿದ್ದೆ.
ನಾನು
ಸಾರಿ
ಕೇಳಿದೆ.
ಅದು
ಕೇಳಿದ
ಮೇಲೂ
ನೀವು
ಹುಡುಕಿಕೊಂಡು
ಬಂದು
ಸಾರಿ
ಕೇಳಿಸುತ್ತೀರಾ
ಕೇಳಿಸಿ.
ಕರೆದುಕೊಂಡು
ಹೋಗಿ
ಸಾರಿ
ಕೇಳಿಸಿ
ಕೈ
ಬಿಟ್ಟುಬಿಡಬೇಕು.ಕರೆದುಕೊಂಡು
ಹೋಗಿ
ಹೊಡೆಯೋದಂತೆ
ಯಾಕೆ
ಮಾಡಬೇಕು.ನೀವು
ಎಲ್ಲಿವರೆಗೂ
ನಮ್ಮ
ಬಾಸ್
ಬಗ್ಗೆ
ಮಾತಾಡುತ್ತೀರೋ
ಅಲ್ಲಿವರೆಗೂ
ಉರಿಸುತ್ತಲೇ
ಇರುತ್ತೇವೆ."
ಎಂದು
ಪ್ರಜ್ವಲ್
ವಿಡಿಯೋದಲ್ಲಿ
ಹೇಳಿದ್ದಾನೆ.