»   » ಸಾಮಾನ್ಯ ಜನರಿಗೆ ಮಾದರಿಯಾದ 'ಡಿ'ಬಾಸ್ ದರ್ಶನ್ ಹುಡುಗರು

ಸಾಮಾನ್ಯ ಜನರಿಗೆ ಮಾದರಿಯಾದ 'ಡಿ'ಬಾಸ್ ದರ್ಶನ್ ಹುಡುಗರು

Posted By: Pavithra
Subscribe to Filmibeat Kannada

ದರ್ಶನ್ ಅಭಿಮಾನಿಗಳೇ ಹಾಗೆ... ಕೆಲ ದಿನಗಳಿಂದ ಅವರುಗಳು ಮಾಡುತ್ತಿರುವ ಕೆಲಸಗಳು ಜನರಿಗೆ ಮಾದರಿಯಾಗುವಂತಿವೆ. ಅದನ್ನ ನೋಡಿದ ಸಾಮಾನ್ಯ ಜನರು ತಾವುಗಳು ಕೂಡ ಇಂತಹ ಕೆಲಸಗಳನ್ನ ಮಾಡಬೇಕು ಎನ್ನುವ ನಿರ್ಧಾರ ಮಾಡ್ತಿದ್ದಾರೆ.

'ದರ್ಶನ್' ಅವ್ರ ಯಶಸ್ಸನ್ನ ಅರ್ಥ ಪೂರ್ಣವಾಗಿ ಆಚರಣೆ ಮಾಡುವ 'ಡಿ-ಬಾಸ್' ಅಭಿಮಾನಿಗಳು ಕನ್ನಡ ರಾಜ್ಯೋತ್ಸವವನ್ನ ಜನರಿಗೆ ಮಾದರಿಯಾಗುವಂತೆ ಸೆಲೆಬ್ರೇಟ್ ಮಾಡಿದ್ದಾರೆ. ಅಭಿಮಾನಿಗಳಿಗೆ ಈ ಬಾರಿ ದರ್ಶನ್ ಸಹೋದರ ದಿನಕರ್ ಹಾಗೂ ಮ್ಯಾನೇಜರ್ ಮಲ್ಲಿಕಾರ್ಜುನ್ ಕೂಡ ಸಾಥ್ ನೀಡಿದ್ದಾರೆ. ಮುಂದೆ ಓದಿರಿ...

ಅಭಿಮಾನಿಗಳಿಗೆ 'ದಿನಕರ್' ಸಾಥ್

'ಕುರುಕ್ಷೇತ್ರ' ಸಿನಿಮಾ ಸೆಟ್ ನಲ್ಲಿ ಚಾಲೆಂಜಿಂಗ್ ಸ್ಟಾರ್' ಹಾಗೂ ಸಹ ಕಲಾವಿದರು ತಾಯಿ ಭುವನೇಶ್ವರಿ ಫೋಟೋಗೆ ಪೂಜೆ ಸಲ್ಲಿಸುವ ಮೂಲಕ ರಾಜ್ಯೋತ್ಸವವನ್ನ ಆಚರಣೆ ಮಾಡಿದರು. ಇಂದು ಅಭಿಮಾನಿಗಳು ವಿಶೇಷ ಮಕ್ಕಳ ಜೊತೆ ಸೇರಿ ಕನ್ನಡ ಹಬ್ಬವನ್ನ ಸಂಭ್ರಮಿಸಿದ್ದಾರೆ.

ರಾಜ್ಯೋತ್ಸವ ಆಚರಣೆ ಅಲ್ಲ, ಮಾದರಿ

ಈಗಾಗಲೇ ಸಾಕಷ್ಟು ಬಾರಿ ಅನಾಥಾಶ್ರಮಗಳಿಗೆ ಹೋಗಿ ಅಲ್ಲಿಯ ಮಕ್ಕಳಿಗೆ ಕೈಲಾದ ಸಹಾಯ ಮಾಡುತ್ತಿರುವ ದರ್ಶನ್ ಅಭಿಮಾನಿಗಳು ಈ ಬಾರಿಯೂ ರಾಜ್ಯೋತ್ಸವನ್ನ ವಿಭಿನ್ನವಾಗಿ ಆಚರಣೆ ಮಾಡಲು ಪ್ಲಾನ್ ಮಾಡಿದ್ದಾರೆ. ಅದಕ್ಕಾಗಿಯೇ ಈ ಬಾರಿ ರಾಜ್ಯೋತ್ಸವ ಎಲ್ಲರಿಗೂ ಮಾದರಿ ಆಗಲಿ ಅಂತ ಸಂದೇಶ ಸಾರಿದ್ದಾರೆ.

ಮಲ್ಲೇಶ್ವರಂನಲ್ಲಿ ಬುದ್ಧಿಮಾಂದ್ಯ ಮಕ್ಕಳ ಶಾಲೆ

ಮಾತೃಶ್ರೀ ಮನೋವಿಕಾಸ ಕೇಂದ್ರ, ಮಲ್ಲೇಶ್ವರಂ ನಲ್ಲಿರೋ ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ಸಾಕಷ್ಟು ಬುದ್ದಿಮಾಂದ್ಯ ಮಕ್ಕಳಿಗೆ ಆಶ್ರಯ ನೀಡಲಾಗಿದೆ. ಇಲ್ಲಿಯ ಮಕ್ಕಳಿಗೆ ಇಂದಿನ ಊಟದ ಖರ್ಚಿನ ವ್ಯವಸ್ಥೆಯನ್ನ ದರ್ಶನ್ ಅಭಿಮಾನಿಗಳ ತಂಡ ಮಾಡಿದೆ. ರಾಜ್ಯೋತ್ಸವಕ್ಕಾಗಿ ಖರ್ಚು ಮಾಡುವ ಸಾವಿರಾರು ರೂಪಾಯಿ ಈ ರೀತಿಯಲ್ಲಿ ಸದುಪಯೋಗ ಆಗಲಿ ಅನ್ನೋದು ಅಭಿಮಾನಿಗಳ ಆಶಯ

ಮಕ್ಕಳಿಂದಲೇ ರಾಜ್ಯೋತ್ಸವ

ಮೊದಲಿಗೆ ಸ್ಟೇಜ್ ಪ್ರೋಗ್ರಾಂ ಮಾಡಿದ ಡಿ-ಕಂಪನಿ ಟೀಂ ವಿಶೇಷ ಮಕ್ಕಳಿಂದಲೇ ದೀಪ ಬೆಳಗಿಸಿ ರಾಜ್ಯೋತ್ಸವಕ್ಕೆ ಚಾಲನೆ ನೀಡಿದರು. ನಟ, ನಿರ್ದೇಶಕ ದಿನಕರ್ ಮಾತೃಶ್ರೀ ಮನೋವಿಕಾಸ ಕೇಂದ್ರದಲ್ಲಿರುವ ಪ್ರತಿ ಮಕ್ಕಳ ಆರೋಗ್ಯ ಕ್ಷೇಮ ವಿಚಾರಿಸಿ ಕೆಲ ಸಮಯ ಮಕ್ಕಳ ಜೊತೆ ಕಾಲ ಕಳೆದರು. ರಾಜ್ಯೋತ್ಸವ, ಬರ್ತಡೇ ಹೀಗೆಲ್ಲ ಸುಖಾ ಸುಮ್ಮನೆ ದುಂದು ವೆಚ್ಚ ಮಾಡುವ ಬದಲು ಈ ರೀತಿ ಅರ್ಥಪೂರ್ಣ ಆಚರಣೆಯಿಂದ ಸಾಕಷ್ಟು ಜನರಿಗೆ ಒಳಿತಾಗುತ್ತೆ.

English summary
Darshan fans along with Dinakar Thoogudeepa celebrated Kannada Rajyotsava in a different way.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X