Boss Title: ದರ್ಶನ್, ಯಶ್ ಇಬ್ಬರಲ್ಲಿ 'ಬಾಸ್' ಯಾರು? ಸ್ಯಾಂಡಲ್‌ವುಡ್‌ನಲ್ಲಿ ಹೊಸ ಚರ್ಚೆ!
ಸದ್ಯ ಸ್ಯಾಂಡಲ್‌ವುಡ್‌ನಲ್ಲಿ 'ಬಾಸ್' ಟೈಟಲ್ ಬಗ್ಗೆ ಚರ್ಚೆ ಹುಟ್ಟಿ ಕೊಂಡಿದೆ. ಬಾಸ್ ಯಾರು ಎನ್ನುವ ಬಗ್ಗೆ ಅಭಿಮಾನಿಗಳ ನಡುವೆ ದೊಡ್ಡ ಮಟ್ಟದಲ್ಲಿ ಚರ್ಚೆ ಶುರುವಾಗಿದೆ. ಯಶ್ ಮತ್ತು ದರ್ಶನ್ ಅಭಿಮಾನಿಗಳ ಈ ವಾಗ್ವಾದಕ್ಕೆ ಇಳಿದಿದ್ದಾರೆ. ಈಗ ಹೀಗೊಂದು ವಿಚಾರ ಸದ್ದು ಮಾಡೋಕೆ ಕಾರಣ ಏನು ಎನ್ನುವ ಬಗ್ಗೆ ಮುಂದೆ ಓದಿ...
Recommended Video

ಕನ್ನಡ ಚಿತ್ರಂಗದಲ್ಲಿ ಆಗಾಗ ಫ್ಯಾನ್ಸ್ ವಾರ್ ಸದ್ದು ಮಾಡುತ್ತಲೇ ಇರುತ್ತದೆ. ಸ್ಟಾರ್ ನಟರ ಅಭಿಮನಿಗಳು ಒಂದಲ್ಲಾ ಒಂದು ವಿಚಾರಕ್ಕೆ ವಾರ್‌ಗೆ ಇಳಿಯುತ್ತಾ ಇರುತ್ತಾರೆ. ಈಗ ಮತ್ತೆ ಫ್ಯಾನ್ ವಾರ್ ಜೋರಾಗಿದೆ. ನಮ್ಮ ನಟ ಹೆಚ್ಚು, ನಿಮ್ಮ ನಟ ಹೆಚ್ಚು ಎನ್ನುವ ವಾದ, ವಿವಾದ ಶುರುವಾಗಿದೆ. ದರ್ಶನ್ ಮತ್ತು ಯಶ್ ಅಭಿಮಾನಿಗಳು ಈಗ ಫ್ಯಾನ್ಸ್ ವಾರ್‌ಗೆ ಇಳಿದಿದ್ದಾರೆ.
ಇದಕ್ಕೆ ಕಾರಣವಾಗಿರೋ 'ಬಾಸ್' ಟೈಟಲ್.
ಎಲ್ಲಾ ಸ್ಟಾರ್ ನಟರು ತಮ್ಮ ಅಭಿಮಾನಿಗಳಿಗೆ ಬಾಸ್ ಎನ್ನುವುದು ಸಾಮಾನ್ಯ. ಫ್ಯಾನ್ಸ್‌ಗಳು ತಮ್ಮ ನೆಚ್ಚಿನ ನಟರನ್ನು ಸದಾ ಬಾಸ್ ಅಂತಲೇ ಕರೆಯುತ್ತಾರೆ. ಆದರೆ ಈಗ ಚಿತ್ರರಂಗದ ಬಾಸ್ ಯಾರು ಎನ್ನುವ ಬಗ್ಗೆ ಫ್ಯಾನ್ ವಾರ್ ಶುರುವಾಗಿದೆ. ದರ್ಶನ್ ಅಭಿಮಾನಿಗಳು, ಯಶ್ ಅಭಿಮಾನಿಗಳು ತಮ್ಮ ನಟರ ಪರವಾಗಿ ಅಭಿಯಾನ ಶುರು ಮಾಡಿದ್ದಾರೆ.

ಯಶ್ ಹೆಸರಿಗೆ ಬಾಸ್ ಟೈಟಲ್!
'ಕೆಜಿಎಫ್ 2' ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಲಿಸ್ಟ್ ಸೇರಿದೆ. ಮೊದಲ ದಿನದ ಕಲೆಕ್ಷನ್ ಮೂಲಕ ಹೊಸ ಇತಿಹಾಸ ಬರೆದಿದೆ 'ಕೆಜಿಎಫ್'. ಚಿತ್ರದ ಬಗ್ಗೆ, ಯಶ್ ಬಗ್ಗೆ ಪೋಸ್ಟ್‌ಗಳನ್ನು ಹಂಚಿಕೊಂಡ ಯಶ್ ಅಭಿಮಾನಿಗಳು ಯಶ್ ಹೆಸರಿನ ಜೊತೆಗೆ ಬಾಸ್ ಎನ್ನುವ ಟೈಟಲ್ ಸೇರಿದ್ದಾರೆ. ಹೆಚ್ಚು ಜನ ಯಶ್ ಬಾಸ್ ಎನ್ನುವ ಟ್ಯಾಗ್ ಬಳಸಿದ್ದಾರೆ. ಹಾಗಾಗಿ ಖಾಸಗಿ ಮಾಧ್ಯಮವೊಂದು ಸಹ 'ಯಶ್ ಈಗ ಹೊಸ ಬಾಸ್' ಎಂದು ವರದಿ ಮಾಡಿದೆ.

ಬಹು ಸಮಯದಿಂದ ದರ್ಶನ್ ಅನ್ನು ಬಾಸ್ ಎನ್ನಲಾಗುತ್ತಿತ್ತು
ಆದರೆ ಬಹಳ ಹಿಂದಿನಿಂದಲೂ ಹೆಚ್ಚಾಗಿ ಬಾಸ್ ಎನ್ನುವ ಟೈಟಲ್ ಬಳಕೆ ಆಗಿದ್ದು ನಟ ದರ್ಶನ್ ಹೆಸರಿನ ಜೊತೆಗೆ. ಇನ್ನು ಗೂಗಲ್ ಕೂಡ ಭಾರತೀಯ ಚಿತ್ರರಂಗದ ಬಾಸ್ ದರ್ಶನ್ ಎಂದು ಹೇಳುತ್ತಿದೆ. ಈಗಲೂ ಗೂಗಲ್‌ನಲ್ಲಿ ಭಾರತೀಯ ಚಿತ್ರರಂಗದ ಬಾಸ್ ಯಾರು?, ಕರ್ನಾಟಕ ಚಿತ್ರರಂಗದ ಬಾಸ್ ಯಾರು, ವರ್ಲ್ಡ್ ಚಿತ್ರರಂಗಕ್ಕೆ ಬಾಸ್ ಯಾರು ಎಂದು ಪ್ರಶ್ನೆ ಮಾಡಿದ್ರೆ. ಅದು ಕನ್ನಡದ ನಟ ದರ್ಶನ್ ಹೆಸರನ್ನು, ದರ್ಶನ್ ಪ್ರೋಪೈಲ್ ತೋರಿಸುತ್ತದೆ. ದರ್ಶನ್ ಕುರಿತ ಸುದ್ದಿಗಳು ಕಾಣ ಸಿಗುತ್ತವೆ.
ದರ್ಶನ್ ಪರ ಅಭಿಮಾನಿಗಳ ಅಭಿಯಾನ!
ಈ ವಿಚಾರಕ್ಕೆ ಈಗ ನಟ ದರ್ಶನ್ ಅಭಿಮಾನಿಗಳು ಎಂಟ್ರಿ ಕೊಟ್ಟಿದ್ದಾರೆ. ಯಶ್ ಬಾಸ್ ಎನ್ನುವ ಟೈಟಲ್ ವೈರಲ್ ಆಗುತ್ತಿದೆ ಎನ್ನುವ ವಿಚಾರ ಬಂದಾಗ, ದರ್ಶನ್ ಅಭಿಮಾನಿಗಳು ಅಖಾಡಕ್ಕೆ ಇಳಿದಿದ್ದಾರೆ. ಬಾಸ್ ಅಂದರೆ ಅದು ಕೇವಲ ದರ್ಶನ್ ಮಾತ್ರ ಎನ್ನುವುದರ ಜೊತೆಗೆ ಸಾಕಷ್ಟು ಕಮೆಂಟ್‌ಗಳನ್ನು ಮಾಡಿದ್ದಾರೆ. ಡಿ ಬಾಸ್ ಎನ್ನುವ ಅಭಿಯಾನವನ್ನು ಶುರು ಮಾಡಿದ್ದಾರೆ.

ಯಶ್ 'ಬಾಸ್ 'ಪೋಸ್ಟರ್ ಟ್ರೋಲ್!
ದರ್ಶನ್ ಅಭಿಮಾನಗಳು ಈಗ ಹೊಸ ಅಭಿಮಾನ ಶುರು ಮಾಡಿದ್ದಾರೆ. ಡಿ ಬಾಸ್ ಎನ್ನುವ ಹೆಸರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗುತ್ತಿದೆ. ಈ ವಿಚಾರವಾಗಿ ಯಶ್ ಬಾಸ್ ಎನ್ನುವ ಹೆಸರು ಟ್ರೋಲ್ ಆಗುತ್ತಿದೆ. ಇಬ್ಬರ ಅಭಿಮಾನಿಗಳು ತಮ್ಮ ನೆಚ್ಚಿನ ನಟರಿಗೆ ಸಾಥ್ ನೀಡುತ್ತಾ, ಅವ್ರೇ ಬಾಸ್ ಎನ್ನುತ್ತಾ ಇದ್ದಾರೆ.



Click it and Unblock the Notifications











