Darshan: ನಟ ದರ್ಶನ್ ರಿಲೀಸ್ ಬಗ್ಗೆ ನೈಟಿ ಅಕ್ಕ ಭವಿಷ್ಯ; ಫ್ಯಾನ್ಸ್ ಗರಂ!

By ಎಸ್ ಸುಮಂತ್

ಇತ್ತೀಚಿನ ದಿನಗಳಲ್ಲಿ ರಾಶಿ, ಭವಿಷ್ಯ ಹೇಳುವವರ ಸಂಖ್ಯೆ ಕಡಿಮೆ ಏನು ಇಲ್ಲ. ಹಾಗೇ ಕೇಳುವವರ ಸಂಖ್ಯೆಯೂ ಕಡಿಮೆ ಏನು ಇಲ್ಲ. ಸೆಲೆಬ್ರೆಟಿಗಳ ಜೀವನಲ್ಲಿ ಏನಾದರೂ ಯಡಟ್ಟಾಗಿದ್ದರೆ, ಜಗತ್ತಲ್ಲಿಯೇ ಏನಾದರೂ ಸಮಸ್ಯೆಯಾದರೆ ನೋಡಿ ನಾವೂ ಹೇಳಿದಂತೆ ಆಗಿದೆ ಎಂದು ಮುನ್ನಲೆಗೆ ಬಂದು ಬಿಡುತ್ತಾರೆ. ಅದರಲ್ಲೂ ಸೋಷಿಯಲ್ ಮೀಡಿಯಾ ಸ್ಟ್ರಾಂಗ್ ಆದ‌ ಮೇಲಂತು ವಿಡಿಯೋ ಬೇಗ ವೈರಲ್ ಆಗಿ ಬಿಡುತ್ತವೆ.

ಜೂನ್ 11ರಂದು ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಅರೆಸ್ಟ್ ಆಗಿದ್ದರು. ಬಳಿಕ ಪ್ರಕರಣದ ಗಂಭೀರತೆಯನ್ನು ಪಡೆಯುತ್ತಾ ಹೋಯಿತು. ಪೊಲೀಸರು ಎಲ್ಲಾ ಸಾಕ್ಷ್ಯಗಳನ್ನು ಕಲೆ ಹಾಕುವುದಕ್ಕೆ ಶುರು ಮಾಡಿದರು.

Darshan fans angry with Lady astrologer predictions

ಸತತ ಎರಡು ತಿಂಗಳಿನಿಂದ ದರ್ಶನ್ ಅಂಡ್ ಗ್ಯಾಂಗ್ ಜೈಲಿನಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಜಾಮೀನು ಪಡೆಯುವುದಕ್ಕೂ ಇನ್ನು ಅವಕಾಶವಾಗಿಲ್ಲ. ಹೀಗಿರುವಾಗ ದರ್ಶನ್ ಅವರ ಕೇಸಲ್ಲಿ ಒಬ್ಬೊಬ್ಬರೆ ಭವಿಷ್ಯ ನುಡಿಯುತ್ತಾ, ತನ್ನತ್ತ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಚಂದ್ರಪಾಂಡೆ ಅಮ್ಮಾಜಿ ಅವರು ಕೂಡ ದರ್ಶನ್ ಅವರ ಭವಿಷ್ಯ ನುಡಿದು ಗಮನ ಸೆಳೆದಿದ್ದರು.

ಕಲ್ಲು ಕುಟ್ಟೋ ಮೂಲಕ ಭವಿಷ್ಯ

ಒಬ್ಬೊಬ್ಬರು ಒಂದೊಂದು ರೀತಿಯ ಭವಿಷ್ಯ ಹೇಳುತ್ತಾರೆ. ಕೈ ನೋಡಿ, ಮುಖ ನೋಡಿ, ಜಾತಕ ನೋಡಿ, ಬಂದಂತ ಗಳಿಗೆ ನೋಡಿ ಹೀಗೆ ಅನೇಕ ರೀತಿಯಲ್ಲಿ ಭವಿಷ್ಯ ನುಡಿಯುತ್ತಾರೆ. ಈ ಬಾರಿ ದರ್ಶನ್ ಬಿಡುಗಡೆ ಯಾವಾಗ ಎಂದು ಹೇಳಿರುವ ಮಹಿಳೆ ಕಲ್ಲು ಕುಟ್ಟುವ ಮೂಲಕ ನುಡಿದಿದ್ದಾರೆ.

ಮೀನ ರಾಶಿಯ ಭವಿಷ್ಯ ಹೇಳಿದ ಮಹಿಳೆ

ಮಹಿಳೆ ಮುಂದೆ ಇರುವ ವ್ಯಕ್ತಿಯೊಬ್ಬರು ದರ್ಶನ್ ಬಗ್ಗೆ ಪ್ರಶ್ನೆ ಕೇಳುತ್ತಾರೆ. ದರ್ಶನ್ ಯಾವಾಗ ರಿಲೀಸ್ ಆಗ್ತಾರೆ ಎಂದು. ಆಗ ಕಲ್ಲು ಕುಟ್ಟುತ್ತಾ, ದರ್ಶನ್ ಅವರ ರಾಶಿಯನ್ನು ಹೇಳುತ್ತಾರೆ. 'ಅವನದ್ದು ಮೀನರಾಶಿ. ಗ್ರಹಗತಿಗಳು ಸರಿ ಇಲ್ಲ. ಇನ್ನು ಒಂದೂವರೆ ತಿಂಗಳ ಒಳಗೆ ಬರ್ತಾನೆ' ಎಂದಿದ್ದಾರೆ. ಆದರೆ ದರ್ಶನ್ ಅವರದ್ದು ರಾಶಿ ಮೀನರಾಶಿಯೇ ಅಲ್ಲ. ಮಕರ ರಾಶಿ, ಶ್ರವಣ ನಕ್ಷತ್ರವಾಗಿದೆ.

ಶಾರದಾಂಭೆ ದೇಗುಲದಲ್ಲಿ ಭವಿಷ್ಯ

ಈ ಭವಿಷ್ಯ ನುಡಿದಿರುವುದು ಬೆಂಗಳೂರಿನ ಶಾರದಾಂಭೆ ದೇಗುಲದಲ್ಲಿ ಎಂದು ಹೇಳಲಾಗುತ್ತಿದೆ. ಭವಿಷ್ಯ ನುಡಿದವರು ಅರ್ಚಕರೊಬ್ಬರ ಮಗಳು ಎನ್ನಲಾಗಿದೆ. ಬೆಂಗಳೂರಿನ ಬಾಪೂಜಿ ನಗರದಲ್ಲಿದೆ ಎಂದು ಕಾಮೆಂಟ್ಸ್ ಬರುತ್ತಿದೆ. ದರ್ಶನ್ ಅವರ ಬಿಡುಗಡೆಯ ಬಗ್ಗೆ ಕೇಳಿದ ಪ್ರಶ್ನೆಗೆ ಅವರ ಗ್ರಹಗತಿ, ಮನೆ ವಾಸ್ತು ಸರಿ ಇಲ್ಲ ಎಂಬಿತ್ಯಾದಿ ಭವಿಷ್ಯ ನುಡಿದಿದ್ದಾರೆ.

ಡಿ ಬಾಸ್ ಫ್ಯಾನ್ಸ್ ನಿಂದ ಬೇಸರ

ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ದರ್ಶನ್ ಅಭಿಮಾನಿಗಳಿಗೆ ಬೇಸರ ಹಾಗೂ ಕೋಪ ಎರಡು ಆಗಿದೆ. ಕಮೆಂಟ್ ಮೂಲಕವೇ ಆ ಆಕ್ರೋಶ ಹೊರ ಹಾಕಿದ್ದಾರೆ. ಇಲಿಗೆ ಪ್ರಾಣ ಸಂಕಟವಾದರೆ ಬೆಕ್ಕಿಗೆ ಚೆಲ್ಲಾಟವಾಗಿದೆ ಎಂದು ಒಬ್ಬರು ಕಮೆಂಟ್ ಹಾಕಿದ್ದಾರೆ. ಅಲ್ಲಿ ದರ್ಶನ್ ಆ ಸ್ಥಿತಿಯಲ್ಲಿರುವುದು ಕುಟುಂಬಕ್ಕೆ, ಫ್ಯಾನ್ಸ್ ಗೆ ದುಃಖದ ಸಂಗತಿಯಾಗಿದ್ದರೆ, ಈ ರೀತಿ ಭವಿಷ್ಯದ ಶೋಕಿಗೆ ದರ್ಶನ್ ಅವರ ಹೆಸರೇಕೆ ಎಂದೇ ಆಕ್ರೋಶ ಹೊರ ಹಾಕಿದ್ದಾರೆ. ಇನ್ನು ಒಂದಷ್ಟು ಜನ ದರ್ಶನ್ ಅವರ ರಾಶಿಯನ್ನೇ ತಪ್ಪಾಗಿ ಹೇಳಿದ್ದಕ್ಕೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇನ್ನಷ್ಟು ಜನ ನೈಟಿ ಹಾಕೊಂಡಿರೋ ಅಕ್ಕನಿಗೆ ಒಂದ್ ಪ್ಲೇಟ್ ಕಬಾಬ್ ಕೊಡ್ರೋ ಅಂತ 'ಯಜಮಾನ' ಸಿನಿಮಾದ ಡೈಲಾಗ್ ಹೊಡೆದಿದ್ದಾರೆ.

More from Filmibeat

English summary
Lady astrologer prediction on Darshan release from jail, video goes viral
Read more about: darshan sandalwood sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X