»   » ಜೀ ಕನ್ನಡ ವಿರುದ್ಧ ಕೆಂಗಣ್ಣು ಕಾರುತ್ತಿರುವ ದರ್ಶನ್ ಅಭಿಮಾನಿಗಳು! ಯಾಕ್ಗೊತ್ತಾ.?

ಜೀ ಕನ್ನಡ ವಿರುದ್ಧ ಕೆಂಗಣ್ಣು ಕಾರುತ್ತಿರುವ ದರ್ಶನ್ ಅಭಿಮಾನಿಗಳು! ಯಾಕ್ಗೊತ್ತಾ.?

Posted By:
Subscribe to Filmibeat Kannada

ಕನ್ನಡ ನಾಡು ಹೆಮ್ಮೆ ಪಡುವ ಕನ್ನಡಿಗರಿಗೆ 'ಹೆಮ್ಮೆಯ ಕನ್ನಡಿಗ' ಪ್ರಶಸ್ತಿ ನೀಡಿ, ಗೌರವಿಸುವ ಕೆಲಸವನ್ನ ಜೀ ಕನ್ನಡ ವಾಹಿನಿ ಮಾಡಿದೆ.

ಐದು ರೂಪಾಯಿ ಡಾಕ್ಟರ್ ಎಂದೇ ಜನಜನಿತರಾಗಿರುವ ಮಂಡ್ಯದ ಡಾ.ಎಸ್.ಸಿ.ಶಂಕರೇ ಗೌಡ ಅವರಿಗೆ 'ಹೆಮ್ಮೆಯ ವೈದ್ಯ', ತಮ್ಮ ಮಾತುಗಳಿಂದಲೇ ಎಲ್ಲರಿಗೂ ಸ್ಫೂರ್ತಿ ತುಂಬುವ ರಮೇಶ್ ಅರವಿಂದ್ ಅವರಿಗೆ 'ಹೆಮ್ಮೆಯ ಸ್ಫೂರ್ತಿ', ರಶ್ಮಿಕಾ ಮಂದಣ್ಣ ಅವರಿಗೆ 'ಹೆಮ್ಮೆಯ ನಾಯಕ ನಟಿ', ಅರ್ಜುನ್ ಜನ್ಯ ಅವರಿಗೆ 'ಹೆಮ್ಮೆಯ ಸಂಗೀತಗಾರ', ವೇದ ಕೃಷ್ಣಮೂರ್ತಿ ಹಾಗೂ ರಾಜೇಶ್ವರಿ ಗಾಯಕ್ವಾಡ್ ಅವರುಗಳಿಗೆ 'ಹೆಮ್ಮೆಯ ಕ್ರೀಡಾಪಟು', ರಾಜ್.ಬಿ.ಶೆಟ್ಟಿ ಅವರಿಗೆ 'ಹೆಮ್ಮೆಯ ಹೊಸ ಪ್ರತಿಭೆ', ವಿಶ್ವೇಶ್ವರ ಭಟ್ ಅವರಿಗೆ 'ಹೆಮ್ಮೆಯ ಪತ್ರಕರ್ತ' ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರಿಗೆ ಜೀ ಕನ್ನಡ ವಾಹಿನಿ 'ಹೆಮ್ಮೆಯ ಕನ್ನಡಿಗ' ಪ್ರಶಸ್ತಿ ನೀಡಿ ಪುರಸ್ಕರಿಸಿದೆ.

ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿರುವುದರ ಬಗ್ಗೆ ಕನ್ನಡಿಗರಿಗೆ ಹೆಮ್ಮೆ ಇದೆ. ಆದ್ರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಮಾತ್ರ ಕೊಂಚ ಬೇಸರ ಇದೆ. ಯಾಕಂದ್ರೆ, ಕಳೆದ ವರ್ಷ 'ದಾಸ' ದರ್ಶನ್ ಲಂಡನ್ ನಲ್ಲಿ ಒಂದು ಮಹೋನ್ನತ ಗೌರವಕ್ಕೆ ಪಾತ್ರರಾಗಿದ್ದರು.

ಬ್ರಿಟನ್ ಪಾರ್ಲಿಮೆಂಟ್ ನಲ್ಲಿ 'ಗ್ಲೋಬಲ್ ಇಂಟಿಗ್ರಿಟಿ ಅವಾರ್ಡ್'ನ ದರ್ಶನ್ ಮುಡಿಗೇರಿಸಿಕೊಂಡಿದ್ದರು. ಲಂಡನ್ ನಲ್ಲಿ ಈ ವಿಶೇಷವಾದ ಪುರಸ್ಕಾರಕ್ಕೆ ಕನ್ನಡ ನಟ ಭಾಜನರಾಗಿರುವುದು ಕನ್ನಡ ಚಿತ್ರರಂಗದ ಹಿರಿಮೆಗೆ ಮತ್ತೊಂದು ಗರಿ ಸಿಕ್ಕಿದ ಹಾಗೆ.

ಬ್ರಿಟನ್ ಪಾರ್ಲಿಮೆಂಟ್ ನಲ್ಲಿ ಕನ್ನಡದ ಕೀರ್ತಿ ಪತಾಕೆ ಹಾರಿಸಿದ ದರ್ಶನ್ ಗೆ 'ಹೆಮ್ಮೆಯ ಕನ್ನಡಿಗ' ಪ್ರಶಸ್ತಿ ನೀಡದ ಬಗ್ಗೆ ದರ್ಶನ್ ಅಭಿಮಾನಿಗಳಲ್ಲಿ ಸದ್ಯ ಬೇಸರ ಮೂಡಿದೆ. ಹೀಗಾಗಿ ಜೀ ಕನ್ನಡ ವಿರುದ್ಧ ದರ್ಶನ್ ಫ್ಯಾನ್ಸ್ ಕೆಂಗಣ್ಣು ಕಾರುತ್ತಿದ್ದಾರೆ.

ದರ್ಶನ್ ಗೆ 'ಹೆಮ್ಮೆಯ ಕನ್ನಡಿಗ' ಪ್ರಶಸ್ತಿ ಕೊಡದ ಜೀ ಕನ್ನಡ ವಾಹಿನಿ ವಿರುದ್ಧ 'ಡಿ ಬಾಸ್' ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಗರಂ ಆಗಿದ್ದಾರೆ. ಬೇಕಾದ್ರೆ, ನೀವೇ ಕೆಲ ಕಾಮೆಂಟ್ ಗಳನ್ನು ನೋಡ್ಕೊಂಡ್ ಬನ್ನಿ....

ಜೀ ಕನ್ನಡ ವಾಹಿನಿಗೆ ಮರೆತು ಹೋಯ್ತಾ.?

''ಲಂಡನ್ ಪಾರ್ಲಿಮೆಂಟ್ ನಲ್ಲಿ ಗ್ಲೋಬಲ್ ಇಂಟಿಗ್ರಿಟಿ ಅವಾರ್ಡ್ ಪಡೆದ ದರ್ಶನ್ ಅವರನ್ನ 'ಹೆಮ್ಮೆಯ ಕನ್ನಡಿಗ' ಅಂತ ಗೌರವಿಸಲು ಜೀ ಕನ್ನಡ ವಾಹಿನಿ ಮರೆತು ಹೋಯಿತೇ.?'' ಎಂಬ ಪ್ರಶ್ನೆಯನ್ನ ಡಿ ಬಾಸ್ ಫ್ಯಾನ್ಸ್ ಕೇಳ್ತಿದ್ದಾರೆ.

(ಚಿತ್ರಕೃಪೆ: ಟ್ರೋಲ್ ಕನ್ನಡ ಮೂವೀಸ್)

'ಲಂಡನ್'ನಲ್ಲಿ ನಟ ದರ್ಶನ್ ಗೆ ಮಹೋನ್ನತ ಪ್ರಶಸ್ತಿ.!

ಬಂಗಾರ ಯಾವುದು ಕಾಗೆ ಬಂಗಾರ ಯಾವುದು.?

''ಕೆಲವರ ಕಣ್ಣಿಗೆ ರೋಗ ಬಂದಿದೆ. ಬಂಗಾರ ಯಾವುದು, ಕಾಗೆ ಬಂಗಾರ ಯಾವುದು ಅಂತ ಗೊತ್ತಾಗ್ತಾ ಇಲ್ಲ'' ಎಂದು ಜೀ ಕನ್ನಡ ವಾಹಿನಿಗೆ ದರ್ಶನ್ ಫ್ಯಾನ್ಸ್ ಲೇವಡಿ ಮಾಡುತ್ತಿದ್ದಾರೆ.

'ಲಂಡನ್'ನಲ್ಲಿ ದರ್ಶನ್ ಪಡೆದ ಪ್ರಶಸ್ತಿ ಬಗ್ಗೆ ಇದ್ದ ಗೊಂದಲಕ್ಕೆ ಉತ್ತರ.!

ನಿಜವಾದ ಕನ್ನಡಿಗ

''ಕರ್ನಾಟಕ ಹಾಗೂ ಕನ್ನಡ ಚಿತ್ರರಂಗಕ್ಕೆ ಹೆಮ್ಮೆ ತಂದ ದರ್ಶನ್ ನಿಜವಾದ 'ಹೆಮ್ಮೆಯ ಕನ್ನಡಿಗ'' ಎಂದು ದರ್ಶನ್ ಫ್ಯಾನ್ಸ್ ಟ್ವೀಟ್ ಮಾಡಿದ್ದಾರೆ.

ಇಡೀ ದೇಶಕ್ಕೆ ಹೆಮ್ಮೆಯ ವಿಷಯ

''ದರ್ಶನ್ ಗೆ ಬ್ರಿಟಿಷ್ ಪಾರ್ಲಿಮೆಂಟ್ ನಲ್ಲಿ 'ಗ್ಲೋಬಲ್ ಇಂಟಿಗ್ರಿಟಿ ಅವಾರ್ಡ್' ಕೊಟ್ಟು ಸನ್ಮಾನ ಮಾಡಲಾಗಿದೆ. ಇದು ನಮ್ಮ ಕನ್ನಡಕ್ಕೆ ಮಾತ್ರ ಅಲ್ಲ. ಇಡೀ ಭಾರತ ದೇಶಕ್ಕೆ ಹೆಮ್ಮೆಯ ವಿಷಯ. ಅಂಥದ್ರಲ್ಲಿ ನೀವು ಆ ವಿಷಯದ ಬಗ್ಗೆ ಕಿಂಚಿತ್ತು ತಲೆಕೆಡಿಸಿಕೊಳ್ಳದೆ, ಹೆಮ್ಮೆಯ ಕನ್ನಡಿಗ ಅಂತ ಪ್ರೋಗ್ರಾಮ್ ಮಾಡಿದ್ದೀರಾ'' ಅಂತ ಫೇಸ್ ಬುಕ್ ನಲ್ಲಿ ಡಿ ಬಾಸ್ ಫ್ಯಾನ್ಸ್ ಕಿಡಿಕಾರುತ್ತಿದ್ದಾರೆ.

ಅರ್ಹತೆ ಇತ್ತು

''ಹೆಮ್ಮೆಯ ಕನ್ನಡಿಗ' ಪ್ರಶಸ್ತಿ ಸ್ವೀಕರಿಸಲು ದರ್ಶನ್ ಗೆ ಅರ್ಹತೆ ಇತ್ತು'' ಎಂಬುದೇ ಹಲವರ ವಾದ ಆಗಿದೆ.

ನೀವೇನಂತೀರಿ.?

ದರ್ಶನ್ ಗೆ 'ಹೆಮ್ಮೆಯ ಕನ್ನಡಿಗ' ಪ್ರಶಸ್ತಿ ಕೊಡಬೇಕಿತ್ತಾ.? ಇದಕ್ಕೆ ನೀವೇನಂತೀರಿ.? ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ, ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

English summary
Challenging Star Darshan fans have taken Social Media Platform to express their displeasure against Zee Kannada Channel for not felicitating Darshan with 'Hemmeya Kannadiga' Award.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X