twitter
    For Quick Alerts
    ALLOW NOTIFICATIONS  
    For Daily Alerts

    'ಡಿ ಬ್ರದರ್ಸ್' ಪ್ರೀಮಿಯರ್ ಲೀಗ್ ನ ಉದ್ದೇಶವೇನು?

    By Pavithra
    |

    Recommended Video

    ಡಿ ಬ್ರದರ್ಸ್' ಪ್ರೀಮಿಯರ್ ಲೀಗ್ ನ ಹಿಂದಿರುವ ಉದ್ದೇಶ | Filmibeat Kannada

    ಸಿನಿಮಾರಂಗ ಅಂದ ಮೇಲೆ ಅಲ್ಲಿ ಅಭಿಮಾನಿಗಳಿಂದ ಒಳ್ಳೆಯ ಕೆಲಸಗಳು ಆಗುತ್ತಿರುತ್ತವೆ. ಇತ್ತೀಚಿಗಷ್ಟೆ ಕೆಸಿಸಿ ಕಪ್ ಕ್ರಿಕೆಟ್ ಪಂದ್ಯಾವಳಿಯನ್ನ ಯಶಸ್ವಿಯಾಗಿ ನಡೆದಿದೆ. ಈಗ ಡಿಪಿಎಲ್ ಸಮಯ. ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಿಂದ ಪ್ರತಿ ವರ್ಷದಂತೆ ಈ ವರ್ಷವೂ ಡಿ ಬ್ರದರ್ಸ್ ಪ್ರೀಮಿಯರ್ ಲೀಗ್ ಅನ್ನು ಆಯೋಜನೆ ಮಾಡಲಾಗಿದೆ.

    ಸಾಮಾನ್ಯವಾಗಿ ಒಗ್ಗಟ್ಟು ಪ್ರದರ್ಶನ ಮಾಡಲು ಅಥವಾ ಬ್ಯುಸಿ ಲೈಫ್ ನಲ್ಲಿ ಒಂದಿಷ್ಟು ಸಮಯ ಒಟ್ಟಿಗೆ ಕಳೆಯುವ ಉದ್ದೆಶದಿಂದ ಅಥವಾ ಸ್ಟಾರ್ ಗಳ ಹುಟ್ಟುಹಬ್ಬದ ಸಲುವಾಗಿ ಕ್ರಿಕೆಟ್ ಪಂದ್ಯಾವಳಿಗಳನ್ನು ಮಾಡುತ್ತಾರೆ. ಆದರೆ ಡಿ ಬಾಸ್ ಅಭಿಮಾನಿಗಳು ಒಂದು ಒಳ್ಳೆ ಉದ್ದೇಶವನ್ನಿಟ್ಟುಕೊಂಡು ಡಿ ಬ್ರದರ್ಸ್ ಪ್ರೀಮಿಯರ್ ಲೀಗ್ ನಡೆಸುತ್ತಿದ್ದಾರೆ.

    ರಾಧಿಕಾ ಪಂಡಿತ್ ಅವರಿಗೆ ದರ್ಶನ್ ಅಭಿಮಾನಿಗಳ ಮನವಿರಾಧಿಕಾ ಪಂಡಿತ್ ಅವರಿಗೆ ದರ್ಶನ್ ಅಭಿಮಾನಿಗಳ ಮನವಿ

    ಹಾಗಾದರೆ ಡಿ ಬ್ರದರ್ಸ್ ಪ್ರೀಮಿಯರ್ ಲೀಗ್ ನಡೆಯುವುದು ಯಾವಾಗ? ಎಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತದೆ? ಡಿ ಬ್ರದರ್ಸ್ ಪ್ರೀಮಿಯರ್ ಲೀಗ್ ಹಿಂದಿನ ಉದ್ದೇಶವೇನು? ಈ ಎಲ್ಲಾ ವಿಚಾರಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ

    ಶುರುವಾಯ್ತು ಡಿ ಬ್ರದರ್ಸ್ ಪ್ರೀಮಿಯರ್ ಲೀಗ್

    ಶುರುವಾಯ್ತು ಡಿ ಬ್ರದರ್ಸ್ ಪ್ರೀಮಿಯರ್ ಲೀಗ್

    ಚಾಲೆಂಜಿಂಗ್ ಸ್ಟಾರ್ ಅಭಿಮಾನಿ ಬಳಗ 'ಡಿ ಕಂಪನಿ' ವತಿಯಿಂದ ಡಿ ಬ್ರದರ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಶುರುವಾಗಲಿದೆ. ಇದೇ ತಿಂಗಳ ಏರ್ಪಿಲ್ 14 ಮತ್ತು 15 ರಂದು ಬೆಂಗಳೂರಿನಲ್ಲಿ ನಡೆಯುತ್ತಿದೆ.

    ಅಭಿಮಾನಿಗಳಿಗಾಗಿ ಕ್ರಿಕೆಟ್ ಪಂದ್ಯಾವಳಿ

    ಅಭಿಮಾನಿಗಳಿಗಾಗಿ ಕ್ರಿಕೆಟ್ ಪಂದ್ಯಾವಳಿ

    ಕಳೆದ ನಾಲ್ಕು ವರ್ಷದಿಂದ ದರ್ಶನ್ ಅಭಿಮಾನಿ ಬಳಗವಾದ ಡಿ ಕಂಪನಿಯಿಂದ ಡಿ ಬ್ರದರ್ಸ್ ಪ್ರೀಮಿಯರ್ ಲೀಗ್ ನಡೆಸಿಕೊಂಡು ಬರಲಾಗುತ್ತಿದೆ. ರಾಜ್ಯದಲ್ಲಿರುವ ಎಲ್ಲಾ ದರ್ಶನ್ ಅಭಿಮಾನಿಗಳನ್ನ ತಂಡವನ್ನಾಗಿ ಮಾಡಿ ಕ್ರಿಕೆಟ್ ನಲ್ಲಿ ಭಾಗಿ ಮಾಡಿಕೊಳ್ಳಲಾಗುತ್ತದೆ.

    ಜಿಲ್ಲೆಗಳಿಂದ ಬರಲಿದೆ ತಂಡಗಳು

    ಜಿಲ್ಲೆಗಳಿಂದ ಬರಲಿದೆ ತಂಡಗಳು

    ದಾವಣಗೆರೆ, ಮೈಸೂರು, ಹಾಸನ್, ಕುಣಿಗಲ್, ಮಂಡ್ಯ, ಶಿವಮೊಗ್ಗ, ಕೆಂಗೇರಿ, ನೆಲಮಂಗಲ, ಹುಬ್ಬಳಿ, ತಿಪಟೂರು ಹೀಗೆ ಹತ್ತು ತಂಡಗಳಾಗಿ ಮಾಡಿಕೊಂಡು ಎರಡು ದಿನಗಳು ಅಭಿಮಾನಿಗಳು ಮೈದಾನಕ್ಕೆ ಇಳಿದು ಕ್ರಿಕೆಟ್ ಆಡಲಿದ್ದಾರೆ.

    ಬಂದ ಹಣ ಅನಾಥಾಶ್ರಮಕ್ಕೆ ಕೊಡುಗೆ

    ಬಂದ ಹಣ ಅನಾಥಾಶ್ರಮಕ್ಕೆ ಕೊಡುಗೆ

    ಡಿ ಬ್ರದರ್ಸ್ ಪ್ರೀಮಿಯರ್ ಲೀಗ್ ನಿಂದ ಬಂದ ಹಣದಲ್ಲಿ ಒಂದಿಷ್ಟು ಭಾಗ ಆಯ್ಕೆ ಮಾಡಿದ ಅನಾಥಾಶ್ರಮಕ್ಕೆ ನೀಡುತ್ತಾ ಬಂದಿದ್ದಾರೆ ದರ್ಶನ್ ಅಭಿಮಾನಿಗಳು. ಇದಕ್ಕೆ ಯಾವುದೇ ಫ್ಯಾನ್ಸ್ ವಾರ್ ಹಣಪಟ್ಟಿ ಕಟ್ಟುವುದು ಬೇಡ ಎನ್ನುವುದು ಅಭಿಮಾನಿಗಳ ಮನವಿ .

    ಇನ್ಮುಂದೆ ದರ್ಶನ್ ಕಾಲ್ ಶೀಟ್ ನಲ್ಲಿ ಮೊದಲ ಆದ್ಯತೆ ಇವರಿಗೆಇನ್ಮುಂದೆ ದರ್ಶನ್ ಕಾಲ್ ಶೀಟ್ ನಲ್ಲಿ ಮೊದಲ ಆದ್ಯತೆ ಇವರಿಗೆ

    English summary
    Kannada actor Darshan fans have come up with a Cricket League named D Brothers Premier League. This Cricket league will be held on April 14th and 15th in Bangalore. Darshan's fans will be part of this Cricket League.
    Monday, April 9, 2018, 13:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X