ಮಧ್ಯ ರಾತ್ರಿಯಿಂದನೇ ಶುರು 'ಕುರುಕ್ಷೇತ್ರ' ಅಬ್ಬರ: ಚಿತ್ರ ನೋಡಿದ ಅಭಿಮಾನಿಗಳು ಫುಲ್ ಖುಷ್

Recommended Video

Kurukshetra Movie: ಕುರುಕ್ಷೇತ್ರದ ಫಸ್ಟ್ ಡೇ, ಫಸ್ಟ್ ಶೋ ಬಗ್ಗೆ ಪ್ರೇಕ್ಷಕರು ಏನಂದ್ರು?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೆ ಸಿನಿಮಾ, ಮಹಾಭಾರತದ ಕಥೆ, 3ಡಿ ಎಫೆಕ್ಟ್, ಅದ್ಭುತ ತಾರಾಗಣ ಇರುವ 'ಕುರುಕ್ಷೇತ್ರ' ಇಂದು ಅದ್ದೂರಿಯಾಗಿ ವಿಶ್ವದಾದ್ಯಂತ ತೆರೆಗೆ ಬಂದಿದೆ. ಕನ್ನಡ ಮತ್ತು ತೆಲುಗು ವರ್ಷನ್ ನ ಕುರುಕ್ಷೇತ್ರ ಇಂದು ಗ್ರ್ಯಾಂಡ್ ಆಗಿ ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟಿದೆ.

ಸಾಮಾಜಿಕ ಜಾಲತಾಣದಲ್ಲಿ ಕುರುಕ್ಷೇತ್ರದ ಜಾತ್ರೆ ಸುಮಾರು ತಿಂಗಳುಗಳಿಂದ ನಡೆಯುತ್ತಿತ್ತು. ಇಂದು ದರ್ಶನ್ ಅಭಿಮಾನಿಗಳಿಗಂತು ಹಬ್ಬದ ಸಂಭ್ರಮ. ಇಂದು ಬೆಳ್ಳಂಬೆಳಗ್ಗೆನೆ ಕೆಲವು ಚಿತ್ರಮಂದಿರಗಳಲ್ಲಿ ಕುರುಕ್ಷೇತ್ರ ಪ್ರದರ್ಶನವಾಗುತ್ತಿದೆ. ಆದ್ರೆ ಇದಕ್ಕೂ ಮೊದಲೆ ಒಂದಷ್ಟು ಅಭಿಮಾನಿಗಳು ಮಧ್ಯರಾತ್ರಿಯೆ ಕುರುಕ್ಷೇತ್ರ ನೋಡಿ ಕುಣಿದು ಕುಪ್ಪಳಿಸಿದ್ದಾರೆ.

ಬೆಂಗಳೂರಿನ ಎರಡು ಚಿತ್ರಮಂದಿರಗಳಲ್ಲಿ ಮಧ್ಯರಾತ್ರಿಯೆ ಕುರುಕ್ಷೇತ್ರ ಪ್ರದರ್ಶನವಾಗಿದೆ. ಜೆಪಿ ನಗರದ ಸಿದ್ಧಲಿಂಗೇಶ್ವರ ಮತ್ತು ಸಂಜಯ್ ನಗರದ ವೈಭವ್ ಥಿಯೇಟರ್ ನಲ್ಲಿ ಅಭಿಮಾನಿಗಳು ಮಿಡ್ ನೈಟ್ ಸಿನಿಮಾ ವೀಕ್ಷಿಸಿದ್ದಾರೆ. ದುರ್ಯೋದನನಾಗಿ ಅಬ್ಬರಿಸಿರುವ ದರ್ಶನ್ ನೋಡಿ ಅಭಿಮಾನಿಗಳ ಸಂತಸ ಮುಗಿಲುಮಟ್ಟಿತ್ತು.

Darshan Fans Are Happy After Watching Kurukshetra Film

ಚಿತ್ರ ನೋಡಿದವರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇನ್ನು ಕೆಲವು ಚಿತ್ರಮಂದಿರಗಳಲ್ಲಿ ಇಂದು ಬೆಳಗ್ಗೆ 6 ಗಂಟೆಗೆ ಶೋ ಪ್ರಾರಂಭವಾಗಿದೆ. ಬೆಂಗಳೂರಿನ ಎಲ್ಲಾ ಕಡೆ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಬೆಂಗಳೂರಿನ ಮುಖ್ಯ ಚಿತ್ರಮಂದಿರ ನರ್ತಕಿಯಲ್ಲಿ ಬೆಳಗ್ಗೆ 9.30ಕ್ಕೆ ಮೊದಲ ಶೋ ಪ್ರಾರಂಭವಾಗಲಿದೆ.

More from Filmibeat

English summary
Darshan starrer Kurukshetra movie relase in worldwise. Darshan fans are happy after watching Kurukshetra film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X