For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿಗಳ ತಲೆಕೆಡಿಸಿದೆ ಡಿ ಬಾಸ್ ಓಪನ್ ಚಾಲೆಂಜ್ : ಇಲ್ಲಿದೆ ತರಹೇವಾರಿ ಕಮೆಂಟ್ಸ್

  |
  ದಚ್ಚು ಯಾರಿಗೆ ಚಾಲೆಂಜ್ ಹಾಕಿರಬಹುದು ?

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಬೆಳ್ಳಂಬೆಳಗ್ಗೆಯೆ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ. ಡಿ ಬಾಸ್ ದಿಢೀರನೆ ಹಾಕಿರುವ ಚಾಲೆಂಜ್ ನೋಡಿ ಅಭಿಮಾನಿಗಳಿಗೆ ಒಮ್ಮೆ ಶಾಕ್ ಆಗಿದೆ. ಅಲ್ಲದೆ ದಚ್ಚು ಯಾರಿಗೆ ಚಾಲೆಂಜ್ ಹಾಕಿರಬಹುದು ಎನ್ನುವ ಕುತೂಹಲ ಕೂಡ ಹೆಚ್ಚಾಗಿದೆ.

  ಚಕ್ರವತ್ರಿ ಇನ್ನೊಬ್ಬನಟನಿಗೆ ಓಪನ್ ಚಾಲೆಂಜ್ ಎಂದು ಬರೆದುಕೊಳ್ಳುತ್ತಿದ್ದಂತೆ. ಸಾಮಾಜಿ ಜಾಲತಾಣದಲ್ಲಿ ತರಹೇವಾರಿ ಕಮೆಂಟ್ಸ್ ಗಳ ಸುರಿಮಳೆಯೆ ಹರಿದುಬರುತ್ತಿವೆ. ದರ್ಶನ್ ಹಾಕಿರುವ ಚಾಲೆಂಜ್ ಯಾರಿಗೆ ಇರಬಹುದು ಎಂದು ನೆಟ್ಟಿಗರು ನಾನಾರೀತಿಯಾಗಿ ವರ್ಣಿಸುತ್ತಿದ್ದಾರೆ

  ಅಂದ್ಹಾಗೆ ದರ್ಶನ್ ಸುಖ ಸುಮ್ಮನೆ ಟ್ವೀಟ್ ಗಳನ್ನು ಮಾಡುವುದಿಲ್ಲ. ತೀರಾ ಅಗತ್ಯವಿದ್ದಾಗ ಮಾತ್ರ ದಚ್ಚು ಸಾಮಾಜಿಕ ಜಾಲತಾಣ ಬಳಸುತ್ತಾರೆ. ಹಾಗಾಗಿ ದರ್ಶನ್ ಪೋಸ್ಟ್ ಈಗ ಬಾರಿ ಕುತೂಹಲ ಮೂಡಿಸಿದೆ. ಯಾರಿಗೆ ದರ್ಶನ್ ಚಾಲೆಂಜ್ ಹಾಕುತ್ತಿದ್ದಾರೆ ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಅಂದ್ಹಾಗೆ ಈ ವಿಚಾರವಾಗಿ ನೆಟ್ಟಿಗರಿಂದ ಬಂದ ಕಮೆಂಟ್ಸ್ ಗಳ ಏನು? ಮುಂದೆ ಓದಿ..

  ಯಾರ್ಗೋ ಶನಿ ಹೆಗಲು ಏರಿರಬೇಕು

  ಯಾರ್ಗೋ ಶನಿ ಹೆಗಲು ಏರಿರಬೇಕು

  "ಬೆಳಗ್ಗೆ ಬೆಳಗ್ಗೆನೆ ನನ್ ಬಾಸ್ ಈತರ ಪೋಸ್ಟ್ ಮಾಡಿದ್ದಾರೆ ಅಂದ್ರೆ ಯಾರಿಗೋ ಶನಿ ಹೆಗಲು ಏರಿರಬೇಕು ಅಂತ ಕಾಣ್ಸುತ್ತೆ. ಸುನಾಮಿ ಅಲೆಗಳು ಸೈಲೆಂಟ್ ಇದೆ ಅಂತ ಮುಟ್ಟೊ ಧೈರ್ಯ ಮಾಡಿದ್ದಾರೆ. ಒಂದು ಸಲಿ ಅದರ ಅಲೆಗಳ ರಬಸ ನೋಡ್ಲಿ ಗೊತ್ತಾಗುತ್ತೆ. ಚಾಲೆಂಜಿಂಗ್ ಸ್ಟಾರ್ ಓಪನ್ ಚಾಲೆಂಜ್ ಮಾಡ್ತಿದ್ದಾರೆ, ನಾವ್ ರೆಡಿ, ನೀವು ರೆಡಿನಾ" ಎಂದು ಅಭಿಮಾನಿಯೊಬ್ಬರು ಕಮೆಂಟ್ಸ್ ಮಾಡಿದ್ದಾರೆ.

  ಇಬ್ಬರ ಮೇಲೆ ಮಾತ್ರ ಮನಸ್ತಾಪ

  ಇಬ್ಬರ ಮೇಲೆ ಮಾತ್ರ ಮನಸ್ತಾಪ

  "ಸರ್ ನಿಮಗೆ ಸಧ್ಯಕ್ಕೆ ಇರೋದು ಇಬ್ಬರ ಮೇಲೆ ಮನಸ್ತಾಪ. ಅದೂ ಕಿಚ್ಚ ಸುದೀಪ್ ಸರ್ ಮತ್ತೂ ಈ ರಾಜ್ಯದ ಮುಖ್ಯ ಮಂತ್ರಿಯವರ ಮಗ ಪಕ್ಕ. ಸೋ ದೊಡ್ಡದೂ ಮಾಡ್ಕೊಬೇಡಿ, ಆಡ್ಕೋಳ್ಳರ ಮುಂದೆ ಜಾರದಂತೆ ನೋಡಿಕೊಳ್ಳಿ ಡಿ ಬಾಸ್ ಸರ್" ಎಂದು ಮನವಿ ಮಾಡಿಕೊಂಡಿದ್ದಾರೆ.

  ಎಡಗಡೆ ಎದ್ದಿದ್ದಾರೆ ಅಂತ ಕಾಣುತ್ತೆ

  ಎಡಗಡೆ ಎದ್ದಿದ್ದಾರೆ ಅಂತ ಕಾಣುತ್ತೆ

  "ಅದು ಯಾವ ಸ್ಟಾರ್ ಇವತ್ತು ಎಡಗಡೆ ಎದ್ದಿದ್ದಾರೆ. ಗ್ರಹಣ ಬೇರೆ ಇದೆ. ಹುಷಾರಾಗಿ ಇರಿ ಮುಂದೆ ಇರುವುದು ನಮ್ಮ ಡಿ ಬಾಸ್"

  ಅತಿ ಕಠಿಣ ಚಾಲೆಂಜ್ ನೀಡಿ

  ಅತಿ ಕಠಿಣ ಚಾಲೆಂಜ್ ನೀಡಿ

  "ಬಾಸ್ ನೀವು ಏನೇ ಮಾಡಿದರು ಸರಿಯಾಗೆ ಇರುತ್ತೆ. ನಿಮ್ ಹಿಂದೇ ನಾವು ಇದ್ದೇವೆ. ಅದೂ ಯಾರೇ ಆಗಲಿ ಅತಿ ಕಠಿಣ ಚಾಲೆಂಜ್ ನೀಡಿ" ಎಂದು ದರ್ಶನ್ ಚಾಲೆಂಜ್ ಗೆ ಅಭಿಮಾನಿಗಳು ಸಾಥ್ ನೀಡುತ್ತಿದ್ದಾರೆ.

  ಇವತ್ತು ಅಮವಾಸ್ಯೆ ಬೇರೆ

  ಇವತ್ತು ಅಮವಾಸ್ಯೆ ಬೇರೆ

  ಇವತ್ತು ಅಮವಾಸ್ಯೆ ಬೇರೆ ದರ್ಶನ್ ಕಡೆಯಿಂದ ಯಾರಿಗೆ ಗ್ರಹಚಾರ ಕಾದಿದೆಯು ಗೊತ್ತಿಲ್ಲ ಎನ್ನುವ ಕಮೆಂಟ್ಸ್ ಗಳು ಹರಿದುಬರುತ್ತಿವೆ. ಅಷ್ಟೆಯಲ್ಲ ಸಾಕಷ್ಟು ಮಂದಿ ಫೇಸ್ ಬುಕ್ ಲೈವ್ ಗಾಗಿ ಕಾಯುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ.

  English summary
  Darshan Fans are more Curious about actor Darshan open challenge for another celebrity post. Fans are commenting about Darshan post.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X