For Quick Alerts
  ALLOW NOTIFICATIONS  
  For Daily Alerts

  ಡಿ ಬಾಸ್ ಹಬ್ಬಕ್ಕೆ 100 ದಿನಗಳ ಮುಂಚೆಯೇ ಅಭಿಮಾನಿಗಳ ಸಿದ್ಧತೆ: ಟ್ವಿಟ್ಟರ್ ನಲ್ಲಿ ಟ್ರೆಂಡ್

  |

  ಸ್ಯಾಂಡಲ್ ವುಡ್ ನ ಡಿ ಬಾಸ್, ಅಭಿಮಾನಿಗಳ ಪ್ರೀತಿಯ ದಾಸ ದರ್ಶನ್ ಹುಟ್ಟುಹಬ್ಬಕ್ಕೆ ಇನ್ನೂ 100 ದಿನಗಳಿವೆ. ಆಗಲೇ ಅಭಿಮಾನಿಗಳ ಸಂಭ್ರಮ ಶುರುವಾಗಿದೆ. ಡಿ ಬಾಸ್ ಫ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಹುಟ್ಟುಹಬ್ಬವನ್ನು ಈಗಿನಿಂದನೆ ಟ್ರೆಂಡ್ ಮಾಡುತ್ತಿದ್ದಾರೆ.

  ಹೌದು, ದರ್ಶನ್ ಅಭಿಮಾನಿಗಳು ಈಗಾಗಲೇ ಹುಟ್ಟುಹಬ್ಬದ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಸುಲ್ತಾನ್ ಸಂಭ್ರಮ, ಬಾಸ್ ಪರ್ವ ಎಂದು ಪೋಸ್ಟರ್ ಮಾಡಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಾರೆ. ಅಂದ್ಹಾಗೆ ಡಿ ಬಾಸ್ ಹುಟ್ಟುಹಬ್ಬ ಫೆಬ್ರವರಿ 16ಕ್ಕೆ. ಆದರೆ ಈಗಲೇ ಟ್ರೆಂಡ್ ಮಾಡಲು ಶುರುಮಾಡಿದ್ದಾರೆ.

  'ರಾಬರ್ಟ್' ಬಿಡುಗಡೆ ಬಗ್ಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ನಿರ್ಧಾರವೇನು?

  ಅಭಿಮಾನಿಗಳು ನವೆಂಬರ್ ತಿಂಗಳಿಂದ ಅತೀ ದೊಡ್ಡ ಮಟ್ಟದಲ್ಲಿ ಟ್ರೆಂಡ್ ಕ್ರಿಯೆಟ್ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಟ್ವಿಟ್ಟರ್ ನಲ್ಲಿ 100 ದಿನಗಳ ಟ್ರೆಂಡ್ ಕ್ರಿಯೆಟ್ ಮಾಡುವ ಮೂಲಕ ಡಿ ಬಾಸ್ ಹುಟ್ಟುಹಬ್ಬಕ್ಕೆ ಚಾಲನೆ ಕೊಡಲಿದ್ದಾರೆ. ನವೆಂಬರ್ 7 ಮತ್ತು 8ರಂದು ಸಂಜೆ 6 ಗಂಟೆಗೆ ಟ್ರೆಂಡ್ ಪ್ರಾರಂಭ ಮಾಡುವುದಾಗಿ ಅನೌನ್ಸ್ ಮಾಡಿದ್ದಾರೆ.

  ಸೇಲ್ಸ್ ಮೆನ್ ಆಗಿ ಜಂಟಲ್ ಮೆನ್ ಚಿತ್ರದಲ್ಲಿ ಪ್ರಜ್ವಲ್ ಮಿಂಚಿದ್ದು ಹೀಗೆ | Filmibeat Kannada

  ದರ್ಶನ್ ಹುಟ್ಟುಹಬ್ಬದ ಟ್ರೆಂಡ್ ಗೆ ಸಿದ್ಧರಾಗಿ ಎಂದು ಅಭಿಮಾನಿಗಳು ಕರೆಕೊಟ್ಟಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳ ಬಳಗ ಹೊಂದಿರುವ ನಟ ದರ್ಶನ್. ಪ್ರತೀ ವರ್ಷ ದರ್ಶನ್ ಹುಟ್ಟಹಬ್ಬದ ಮುಂಚಿತವಾಗಿಯೇ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಹಬ್ಬ ಆಚರಣೆ ಮಾಡುತ್ತಿರುತ್ತಾರೆ. ಈ ವರ್ಷ ಸಹ ಈಗಲೇ ಪ್ರಾರಂಭ ಮಾಡಿದ್ದಾರೆ.

  English summary
  Darshan Fans are get ready to trending on Twitter 100 days before for Darshan's birthday from November.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X