'ಯಜಮಾನ' ಸಿನಿಮಾ ಸ್ಫೂರ್ತಿ: 'ನಂದಿ ಬ್ರಾಂಡ್' ಶುರು ಮಾಡಿದ ಅಭಿಮಾನಿ
Recommended Video
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾ ರಿಲೀಸ್ ಆಗಿ ಅನೇಕ ತಿಂಗಳೆ ಆಗಿದೆ. ಚಿತ್ರದಲ್ಲಿ ಕಾರ್ಪೋರೇಟ್ ಜಗತ್ತಿಗೆ ಕಟ್ಟುಬಿದ್ದು ದೇಸಿ ಪ್ರೋಡಕ್ಟ್ ಹೇಗೆ ನಾಶವಾಗುತ್ತಿದೆ. ಕಾಳದಂಧೆಯಿಂದ ಗ್ರಾಮಗಳಲ್ಲಿ ಪರಂಪರಾಗತ ವೃತ್ತಿ ಹೇಗೆ ಮೂಲೆ ಸರಿಯುತ್ತಿದೆ ಎನ್ನುವುದನ್ನು ಅನಾವರಣ ಮಾಡಲಾಗಿದೆ.
ಸಾಂಪ್ರದಾಯಕವಾಗಿ ತಯಾರಾಗುವ ನಂದಿ ಬ್ರಾಂಡ್ ಎಣ್ಣೆಯನ್ನು ಉಳಿಸಿಕೊಳ್ಳಲು ನಾಯಕ ಹೇಗೆ ಹೊರಾಡುತ್ತಾನೆ ಎನ್ನುವುದೇ ಸಿನಿಮಾ. ನಂದಿ ಎನ್ನುವ ಎಣ್ಣೆ ಸಿನಿಮಾಗಿ ಸೃಷ್ಟಿಸಿದ ಒಂದು ಬ್ರಾಂಡ್. ಸಿನಿಮಾದ ನಂತರ ಈ ನಂದಿ ಬ್ರಾಂಡ್ ತುಂಬ ಫೇಮಸ್ ಆಗಿದೆ. ಎಷ್ಟರ ಮಟ್ಟಿಗೆ ಎಂದರೆ ಅಭಿಮಾನಿಯೊಬ್ಬ ನಂದಿ ಹೆಸರಿನಲ್ಲಿ ಎಣ್ಣೆ ಬ್ರಾಂಡ್ ಶುರು ಮಾಡಿದ್ದಾರೆ.
'ಯಜಮಾನ' ಸಿನಿಮಾ ಪ್ರೇರಣೆಯಿಂದ ಹುಬ್ಬಳ್ಳಿಯಲ್ಲಿ ದರ್ಶನ್ ಅಭಿಮಾನಿಯೊಬ್ಬ ನಂದಿ ಹೆಸರಿನಲ್ಲಿ ಎಣ್ಣೆ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಎಣ್ಣೆ ಡಬ್ಬಗಳ ಮೇಲೆ ಸಿನಿಮಾದಲ್ಲಿ ತೋರಿಸಿದ ಹಾಗೆಯೆ ಡಿಸೈನ್ ಮಾಡಿಸಿ ಮಾರಾಟ ಮಾಡುತ್ತಿದ್ದಾರೆ. 'ಯಜಮಾನ' ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡುವ ಜೊತೆಗೆ ನೂರು ದಿನಗಳು ಯಶಸ್ವಿ ಪ್ರದರ್ಶನ ಕಂಡಿತ್ತು.

ಸಿನಿಮಾ ಕೇವಲ ಮನರಂಜನೆಗಾಗಿ ಮಾತ್ರ ಅಲ್ಲದೆ ಅನೇಕರ ಜೀವನವನ್ನೆ ಬದಲಾಯಿಸಿದೆ. ಡಾ.ರಾಜ್ ಕುಮಾರ್ ಅಭಿನಯದ ಬಂಗಾರದ ಮನುಷ್ಯ, ಶಂಕರ್ ನಾಗ್ ಪೊಲೀಸ್ ಪಾತ್ರದ ಸಿನಿಮಾಗಳು, ರಾಜಕುಮಾರ ಹೀಗೆ ಸಾಕಷ್ಟು ಸಿನಿಮಾಗಳು ನೋಡುಗರ ಮೇಲೆ ಪ್ರಭಾವ ಬೀರಿವೆ. ಈಗ ದರ್ಶನ್ ಅಭಿನಯದ ಯಜಮಾನ ಸಿನಿಮಾ ಕೂಡ ಅನೇಕ ಅಭಿಮಾನಿಗಳಿಗೆ ಪ್ರೇರಣೆಯಾಗಿದೆ.


Click it and Unblock the Notifications











