Kaatere: ಕುಂಬಿಯನ್ನು ಕುಂಭಕರ್ಣ ನಿದ್ದೆಯಿಂದ ಎಬ್ಬಿಸುತ್ತಿರುವ ಫ್ಯಾನ್ಸ್!: ಕಾಟೇರ ಅಪ್‌ಡೇಟ್‌ಗಾಗಿ ಬಿಗಿಪಟ್ಟು

By ಫಿಲ್ಮಿಬೀಟ್ ಡೆಸ್ಕ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ರಾಕ್‌ಲೈನ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ತರುಣ್ ಸುಧೀರ್ ಈ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಕಳೆದ ವರ್ಷ ವರಮಹಾಲಕ್ಷ್ಮೀ ಹಬ್ಬಕ್ಕೆ ಸಿನಿಮಾ ಸೆಟ್ಟೇರಿತ್ತು. ಬಹುತೇಕ ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯ ಸಾಂಗ್ ಶೂಟಿಂಗ್‌ಗಾಗಿ ಚಿತ್ರತಂಡ ಫ್ಲೈಟ್ ಏರಿದೆ.

ಸೂಪರ್ ಹಿಟ್ 'ರಾಬರ್ಟ್' ಕಾಂಬಿನೇಷನ್‌ನಲ್ಲಿ 'ಕಾಟೇರ' ಸಿನಿಮಾ ಮೂಡಿ ಬರ್ತಿದೆ. ಚಿತ್ರದಲ್ಲಿ 70ರ ದಶಕದ ಕತೆಯನ್ನು ಹೇಳಲಾಗುತ್ತಿದೆ. ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಸಿನಿಮಾ ಕಟ್ಟಿ ಕೊಡಲಾಗುತ್ತಿದೆ. ಚಿತ್ರದಲ್ಲಿ ಹಳ್ಳಿ ಹೈದನಾಗಿ ದರ್ಶನ್ ಅಬ್ಬರಿಸಿದ್ದಾರೆ. ಮಾಲಾಶ್ರೀ ಪುತ್ರಿ ಆರಾಧನಾ ನಾಯಕಿಯಾಗಿ ನಟಿಸಿದ್ದಾರೆ. ಇನ್ನುಳಿದಂತೆ ಜಗಪತಿ ಬಾಬು, ಶ್ರೀನಿವಾಸ್ ಮೂರ್ತಿ, ಬಿರಾದಾರ್, ಶ್ರುತಿ, ಕುಮಾರ್ ಗೋವಿಂದ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಮೋಷನ್ ಪೋಸ್ಟರ್ ಜೊತೆಗೆ ಒಂದೆರಡು ಪೋಸ್ಟರ್ ಬಂದಿದ್ದು ಬಿಟ್ಟರೆ ಸಿನಿಮಾ ಬಗ್ಗೆ ಹೆಚ್ಚಿನ ಅಪ್‌ಡೇಟ್ ಸಿಕ್ಕಿಲ್ಲ.

Darshan Fans Demand Update From Tharun Sudhir About Kaatera

ಗಣೇಶ್ ಹಬ್ಬಕ್ಕೆ 'ಕಾಟೇರ' ಟೀಸರ್ ಬರುತ್ತದೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಬಳಿಕ ದಸರಾ ಹಬ್ಬಕ್ಕೆ ಆ ನಂತರ ರಾಜ್ಯೋತ್ಸವಕ್ಕೆ ಸಿನಿಮಾ ಬಗ್ಗೆ ಏನಾದರೂ ಅಪ್‌ಡೇಟ್ ಸಿಗುತ್ತೆ? ಕೊನೆ ಪಕ್ಷ ಸಣ್ಣ ಟೀಸರ್ ರಿಲೀಸ್ ಆಗುತ್ತದೆ ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಯಾವುದೇ ಅಪ್‌ಡೇಟ್ ಸಿಗಲಿಲ್ಲ. ಇದೀಗ ದೀಪಾವಳಿ ವೇಳೆಗೆ ಸಿನಿಮಾ ಬಗ್ಗೆ ಏನಾದರೂ ಮಾಹಿತಿ ಸಿಗುತ್ತಾ? ಎಂದು ಕಾಯುತ್ತಿದ್ದಾರೆ. ಅಪ್‌ಡೇಟ್ ನೀಡುವಂತೆ ಸೋಶಿಯಲ್ ಮೀಡಿಯಾದಲ್ಲಿ ತರುಣ್‌ ಸುಧೀರ್ ಬಳಿ ಮನವಿ ಮಾಡುತ್ತಿದ್ದಾರೆ.

ಅಭಿಮಾನಿಗಳು ತಮ್ಮದೇ ಶೈಲಿಯಲ್ಲಿ ಬಹಳ ತಮಾಷೆಯಾಗಿ ಮೀಮ್ಸ್ ಕ್ರಿಯೇಟ್ ಮಾಡಿ ತರುಣ್ ಸುಧೀರ್ ಬಳಿ 'ಕಾಟೇರ' ಅಪ್‌ಡೇಟ್ ಕೇಳುತ್ತಿದ್ದಾರೆ. ಪ್ರೀತಿಯಿಂದ ವಾರ್ನಿಂಗ್ ಕೊಡುತ್ತಿದ್ದಾರೆ. ಬೇಗ ಅಪ್‌ಡೇಟ್ ಕೊಡಿ ಎಂದು ಮನವಿ ಮಾಡುತ್ತಿದ್ದಾರೆ. ರಾಮಾಯಣದ ಕುಂಭಕರ್ಣನ ವೀಡಿಯೋ ತುಣುಕಿನಲ್ಲಿ ಕುಂಭಕರ್ಣನ ಮುಖಕ್ಕೆ ತರುಣ್ ಸುಧೀರ್ ಮುಖ ಅಂಟಿಸಿ ಬೇಗ ಎದ್ದೇಳಿ ಅಪ್‌ಡೇಟ್ ಕೊಡಿ ಎಂದು ಮನವಿ ಮಾಡುತ್ತಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇತ್ತೀಚೆಗೆ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಹುಟ್ಟುಹಬ್ಬಕ್ಕೆ ತರುಣ್ ಸುಧೀರ್ ಟ್ವೀಟ್ ಮಾಡಿ ಶುಭಕೋರಿದ್ದರು. ಈ ಪೋಸ್ಟ್‌ಗೂ ಕಾಮೆಂಟ್ ಬಾಕ್ಸ್‌ನಲ್ಲಿ 'ಕಾಟೇರ' ಅಪ್‌ಡೇಟ್ ಕೊಡಿ ಎಂದು ಕೇಳಿದ್ದರು. ದೀಪಾವಳಿಗೆ ಟೀಸರ್ ರಿಲೀಸ್ ಮಾಡದೇ ಇದ್ದರೆ ನಿಮ್ಮ ಮನೆಗೆ ಬಂದು ಲಕ್ಷ್ಮೀ ಪಟಾಕಿ, ಆಟಂ ಬಾಂಬ್ ಹಾಕಿ ಬಿಡ್ತೀನಿ ಎಂದು ಅಭಿಮಾನಿಯೊಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದ್ದರು. ಅಂದಹಾಗೆ ಆನಂದ್ ಆಡಿಯೋ ಸಂಸ್ಥೆ ಚಿತ್ರದ ಆಡಿಯೋ ರೈಟ್ಸ್ ಕೊಂಡುಕೊಂಡಿದೆ. ಶೀಘ್ರದಲ್ಲೇ ಸಿನಿಮಾ ಸಾಂಗ್ಸ್ ರಿಲೀಸ್ ಆಗುವ ಸಾಧ್ಯತೆಯಿದೆ.

ಫಿಲ್ಮಿಬಿಟ್‌ಗೆ ಇತ್ತೀಚೆಗೆ ಪ್ರತಿಕ್ರಿಯೆ ನೀಡಿದ್ದ ತರುಣ್ ಸುಧೀರ್, "ಕಾಟೇರ ಚಿತ್ರದ ಟಾಕಿ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಒಂದು ಸಾಂಗ್ ಶೂಟಿಂಗ್ ಮಾತ್ರ ಬಾಕಿಯಿದೆ. ಟೀಸರ್ ಕಟ್ ಮಾಡುವ ಕೆಲಸ ಕೂಡ ನಡೀತಿದೆ. ಆದಷ್ಟು ಬೇಗ ಆ ಬಗ್ಗೆ ಮಾಹಿತಿ ಸಿಗುತ್ತದೆ" ಎಂದು ಹೇಳಿದ್ದರು.

'ಕಾಟೇರ'ಗೂ ಮುನ್ನ ಈ ವಾರ ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಿರುವ 'ಗರಡಿ' ಸಿನಿಮಾ ರಿಲೀಸ್ ಆಗುತ್ತಿದೆ. ಯೋಗರಾಜ್‌ ಭಟ್ ನಿರ್ದೇಶನದ ಈ ಚಿತ್ರವನ್ನು ಬಿ. ಸಿ ಪಾಟೀಲ್ ನಿರ್ಮಿಸಿ ನಟಿಸಿದ್ದಾರೆ. ಯಶಸ್ ಸೂರ್ಯ ನಾಯಕನಾಗಿ ನಟಿಸಿದ್ದು ನಾಯಕನ ಸಹೋದರನ ಪಾತ್ರದಲ್ಲಿ ದರ್ಶನ್ ಅಬ್ಬರಿಸಿದ್ದಾರೆ. ಈಗಾಗಲೇ 'ಗರಡಿ' ಟ್ರೈಲರ್, ಸಾಂಗ್ಸ್ ಹಿಟ್ ಆಗಿದೆ. ಇನ್ನು ದರ್ಶನ್ ಹಾಗೂ ಮಿಲನಾ ಪ್ರಕಾಶ್ ಕಾಂಬಿನೇಷನ್‌ನಲ್ಲಿ 'ಡೆವಿಲ್' ಸಿನಿಮಾ ಮುಹೂರ್ತ ನೆರವೇರಿದೆ. ಸರಳವಾಗಿ ಪೂಜೆ ನೆರವೇರಿಸಿ ಚಿತ್ರಕ್ಕೆ ಚಾಲನೆ ಕೊಡಲಾಗಿದೆ. 'ಕಾಟೇರ' ಸಿನಿಮಾ ಮುಗಿದ ಮೇಲೆ 'ಡೆವಿಲ್' ಚಿತ್ರೀಕರಣ ಎಂದು ನಿರ್ದೇಶಕರು ಹೇಳಿದ್ದಾರೆ.

More from Filmibeat

English summary
Darshan Fans demond Kaatera Update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X