ರಾಜ್ಯದ ಮೂಲೆ ಮೂಲೆಗೂ ದವಸ ಧಾನ್ಯ ಹಂಚಿದ ದಾಸ
Recommended Video

ಈ ಬಾರಿಯ ದರ್ಶನ್ ಹುಟ್ಟುಹಬ್ಬ ಬಹಳ ವಿಶೇಷ ಮತ್ತು ಮೆಚ್ಚುವಂತಿತ್ತು. ಕೇಕ್, ಹಾರ, ಪಟಾಕಿ, ಕಟೌಟ್, ಪೋಸ್ಟರ್ ಹೀಗೆ ದುಡ್ಡು ಖರ್ಚು ಮಾಡಿ, ಬಹಳಷ್ಟು ಹಣ, ಶ್ರಮ ವ್ಯರ್ಥ ಮಾಡುತ್ತಿದ್ದ ಅಭಿಮಾನಿಗಳಲ್ಲಿ ದಾಸ ವಿಶೇಷವಾದ ಮನವಿ ಮಾಡಿಕೊಂಡಿದ್ದರು.
ದರ್ಶನ್ ಮನವಿಗೆ ಬೆಲೆಕೊಟ್ಟ ಅಭಿಮಾನಿ ಬಳಗ ತಮ್ಮ ನೆಚ್ಚಿನ ನಟನ ಬರ್ತಡೇಗೆ ಶುಭ ಕೋರಲು, ಅಕ್ಕಿ, ಬೇಳೆ, ಸಕ್ಕರೆ ಹೀಗೆ ವಿಧವಿಧವಾದ ದವಸ ಧಾನ್ಯಗಳನ್ನ ಉಡುಗೊರೆಯಾಗಿ ನೀಡಿದರು.
ನಂತರ ಅದನ್ನ ಅನಾಥಶ್ರಾಮಗಳಿಗೆ ಮತ್ತು ಸಿದ್ಧಗಂಗ ಮಠಕ್ಕೆ ಹಂಚುವ ಕೆಲಸವನ್ನ ಮಾಡ್ತೀನಿ ಎಂದು ಸ್ವತಃ ದರ್ಶನ್ ಹೇಳಿದ್ದರು. ಡಿ ಬಾಸ್ ಹೇಳಿದಂತೆ ಸಂಗ್ರಹವಾದ ದವಸ ಧಾನ್ಯವನ್ನ ರಾಜ್ಯದ ಮೂಲೆ ಮೂಲೆಗೂ ಹಂಚಿದ್ದಾರೆ. ಹಾಗಿದ್ರೆ, ದಾಸನ ಮನೆಯಿಂದ ಯಾವ ಯಾವ ಸ್ಥಳಕ್ಕೆ ದವಸ ಧಾನ್ಯ ಹಂಚಿಕೆಯಾಗಿದೆ ಎಂಬ ವಿವರ ಇಲ್ಲಿದೆ ನೋಡಿ.

ರಾಜ್ಯದ ಮೂಲೆ ಮೂಲೆಗೂ ದಾಸನ ದಾಸೋಹ
ಕರ್ನಾಟದ ರಾಜ್ಯ ಬಹುತೇಕ ಎಲ್ಲ ಜಿಲ್ಲೆಗೂ ದರ್ಶನ್ ಅವರ ಮನೆಯಿಂದ ದವಸ ಧಾನ್ಯಗಳು ಹಂಚಿಕೆಯಾಗಿದೆ. ಪ್ರತಿಯೊಂದು ಅನಾಥಾಶ್ರಮ ಅಥವಾ ವೃದ್ಧಾಶ್ರಮಗಳಿಗೆ ಅಗತ್ಯವಾಗುವಷ್ಟು ದವಸ ಧಾನ್ಯ ನೀಡಲಾಗಿದೆ. ಆಯಾ ಜಿಲ್ಲೆ ಅಥವಾ ಆಯಾ ನಗರದ ಅಭಿಮಾನಿ ಸಂಘಗಳು ಈ ಕೆಲಸವನ್ನ ಮಾಡಿದ್ದಾರೆ.

60ಕ್ಕೂ ಹೆಚ್ಚು ಸಂಸ್ಥೆಗಳಿಗೆ ಅಭಿಮಾನಿ ಉಡುಗೊರೆ
ಸದ್ಯದ ದರ್ಶನ್ ಅವರ ಅಭಿಮಾನಿ ಸಂಘ ಡಿ ಕಂಪನಿ ತಮ್ಮ ಅಧಿಕೃತ ಫೇಸ್ ಬುಕ್ ನಲ್ಲಿ ಪ್ರಕಟ ಮಾಡಿರುವ ಮಾಹಿತಿಯ ಪ್ರಕಾರ, ಸುಮಾರು 60ಕ್ಕೂ ಹೆಚ್ಚು ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳಿಗೆ ದವಸ ಧಾನ್ಯ ತಲುಪಿದೆ. ಯಾವ ಊರಿನ, ಯಾವ ಸಂಸ್ಥೆ ಎಂಬ ವಿವರದ ಜೊತೆಗೆ ಫೋನ್ ನಂಬರ್ ಕೂಡ ಪ್ರಕಟಿಸಿದ್ದಾರೆ.

ಸಿದ್ಧಗಂಗಾ ಮಠಕ್ಕೂ ತಲುಪಿದೆ
ವಿಶೇಷವಾಗಿ ನೋಡುವುದಾರೇ ತುಮಕೂರಿನ ಸಿದ್ಧಗಂಗಾ ಮಠಕ್ಕೂ ದರ್ಶನ್ ಅವರ ಅಭಿಮಾನಿಗಳ ಪರವಾಗಿ ದವಸ ಧಾನ್ಯ ತಲುಪಿದೆ. ಸಿದ್ಧಗಂಗಾ ಮಠದ ಅನ್ನ ದಾಸೋಹಕ್ಕೆ ಡಿ ಬಾಸ್ ಅಭಿಮಾನಿಗಳು ಕಳುಹಿಸಿ ಕೊಟ್ಟಿರುವ ಅಕ್ಕಿ, ಬೇಳೆ, ಸಕ್ಕರೆಯೂ ಸೇರಿದೆ.

ಇಂತಹ ಕೆಲಸ ಆಗಬೇಕು
ಸಾಮಾನ್ಯವಾಗಿ ಸ್ಟಾರ್ ನಟರ ಹುಟ್ಟುಹಬ್ಬಗಳಂದ್ರೆ ಕೆಜಿಗಟ್ಟಲೇ ಕೇಕ್ ತಂದು, ನಂತರ ಅದನ್ನ ತಿನ್ನದೇ ಬಿಸಾಡುವುದನ್ನ ನೋಡಿದ್ದೇವೆ. ದುಬಾರಿ ಬೆಲೆಯಲ್ಲಿ ಹಾರ ತಂದು ಅದನ್ನ ಮರುದಿನ ಕಾರ್ಪರೇಷನ್ ಅವರ ಕಸದ ತೊಟ್ಟಿಗೆ ಹಾಕಿರುವುದನ್ನ ನೋಡಿದ್ದೇವೆ. ಅದರ ಬದಲು ಇಂತಹದೊಂದು ಕೆಲಸ ಆದಾಗ ನಿಜಕ್ಕೂ ಅದರಿಂದ ಮತ್ತಷ್ಟು ಜನರಿಗೆ ಸಹಾಯವಾಗುತ್ತೆ. ಇದು ಇನ್ನಷ್ಟು ಆಗಬೇಕು.


Click it and Unblock the Notifications











