For Quick Alerts
  ALLOW NOTIFICATIONS  
  For Daily Alerts

  ಸ್ವಿಗ್ಗಿ ಡೆಲಿವರಿ ಬಾಯ್ಸ್ ಗೆ ಬಿರಿಯಾನಿ ಹಂಚಿದ ಡಿ ಬಾಸ್ ಫ್ಯಾನ್ಸ್

  |

  ಕಿಲ್ಲರ್ ಕೊರೊನಾ ವೈರಸ್ ಹಾವಳಿಯ ನಡುವೆಯೂ ಕೆಲಸ ಮಾಡುತ್ತಿರುವ ಸ್ವಿಗ್ಗಿ ಡೆಲಿವರಿ ಬಾಯ್ಸ್ ಗೆ ಚಾಲೆಂಜಿಂಗ್ ಸ್ಟಾರ್ ಬಿರಿಯನಿ ವಿತರಿಸಿದ್ದಾರೆ. ಹೋಟೆಲ್ ಗಳಲ್ಲಿ ಪಾರ್ಸೆಲ್ ಗೆ ಮಾತ್ರ ಅನುಮತಿ ಇದ್ದು, ಡೆಲಿವರಿ ಹುಡುಗರು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ.

  ಅಂದು ವೇಶ್ಯೆ ಯಾಗಿದ್ದವಳು ಇಂದು ಬಾಲಿವುಡ್ ನಲ್ಲಿ ಸೂಪರ್ ಸ್ಟಾರ್..? | Shagufta Rafique

  ಲಾಕ್ ಡೌನ್ ಆದ ನಂತರ ಹೋಟೆಲ್ ನಿಂದ ಜನರಿಗೆ ಬೇಕಾದ ಹೋಟೆಲ್ ನಿಂದ ಪಾರ್ಸೆಲ್ ಹೊತ್ತೊಯ್ಯುತ್ತ ಸ್ವಿಗ್ಗಿ ಬಾಯ್ಸ್ ಕಷ್ಟಪಟ್ಟು ದುಡಿಯುತ್ತಿದ್ದಾರೆ. ಇವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನೆರವಾಗಿದ್ದಾರೆ. ಅಭಿಮಾನಿಗಳ ಮೂಲಕ ದರ್ಶನ್, ಮೈಸೂರಿನ ಸ್ವಿಗ್ಗಿ ಹುಡುಗರಿಗೆ ಬಿರಿಯಾನಿ ವಿತರಣೆ ಮಾಡಿದ್ದಾರೆ.

  'ರಾಬರ್ಟ್' ಸಿನಿಮಾಕ್ಕೆ ಕೋಟಿ-ಕೋಟಿ ಆಫರ್: ಡೀಲ್ ಬೇಡವೆಂದ ನಿರ್ಮಾಪಕ'ರಾಬರ್ಟ್' ಸಿನಿಮಾಕ್ಕೆ ಕೋಟಿ-ಕೋಟಿ ಆಫರ್: ಡೀಲ್ ಬೇಡವೆಂದ ನಿರ್ಮಾಪಕ

  ಈ ಬಗ್ಗೆ ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬಿರಿಯಾನಿ ವಿತರಿಸುತ್ತಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಜೊತೆಗೆ ದರ್ಶನ್ ಬಗ್ಗೆ ಅಭಿಮಾನಿಗಳು ಹಾಡಿಹೊಗಳಿ ಪೋಸ್ಟ್ ಮಾಡಿದ್ದಾರೆ.

  "ಯಾರೆತ್ತಾ ಮಗನೋ, ನಮಗಾಗಿ ಬಂದನು, ಮೇಲು ಕೀಳು ಗೊತ್ತೇಯಿಲ್ಲ ಬಡವನು ಗೆಳೆಯನೆ ಶ್ರೀಮಂತಿಕೆ ತಲೆಗತ್ತಿಲ್ಲ ಹತ್ತೂರ ಒಡೆಯಾನೆ" ಬಾಸ್. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇಂದು ಮೈಸೂರಿನಲ್ಲಿ Swiggy Delivery ಹುಡುಗರಿಗೆ ನಾಗಣ್ಣ ಅವರ ಕಡೆಯಿಂದ ಬಿರಿಯಾನಿ ವಿತರಿಸಿದರು" ಎಂದು ಬರೆದುಕೊಂಡಿದ್ದಾರೆ.

  ಲಾಕ್ ಡೌನ್ ಆದಾಗಿಂದನೂ ದರ್ಶನ್ ಅಭಿಮಾನಿಗಳು, ಊಟ ವಿಲ್ಲದೆ ಪರದಾಡುತ್ತಿರುವರಿಗೆ ಆಹಾರ ನೀಡುತ್ತಿದ್ದಾರೆ. ಆಹಾರ ಕಿಟ್ ಸೇರಿದಂತೆ ಅವಶ್ಯಕ ವಸ್ತುಗಳನ್ನು ಒದಗಿಸುತ್ತಿದ್ದಾರೆ. ದರ್ಶನ್ ಅಭಿಮಾನಿಗಳ ಕೆಲಸಕ್ಕೆ ಎಲ್ಲರ ಮೆಚ್ಚುಗೆಯೂ ವ್ಯಕ್ತವಾಗಿದೆ.

  English summary
  Acto Darshan fans distributed Biriyani to swiggy delivery boys.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X