ಅವ್ನು ಯಾರೋ ದರ್ಶನ್ ಮರ್ಡ*ರ್ ಕೇಸ್‌ನಲ್ಲಿ ಇವತ್ತಿಗೂ ಜೈಲಿನಲ್ಲಿದ್ಧಾನೆ ಎಂದ ಲಾಯರ್; ಫ್ಯಾನ್ಸ್ ಕೆಂಡ ಕೆಂಡ

By ಫಿಲ್ಮಿಬೀಟ್ ಡೆಸ್ಕ್

ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್‌ಗೆ ಇನ್ನು ಸಂಕಷ್ಟ ತಪ್ಪಿಲ್ಲ. ಹೈಕೋರ್ಟ್‌ನಲ್ಲಿ ಸಿಕ್ಕಿದ್ದ ಜಾಮೀನು ಸುಪ್ರೀಂ ಕೋರ್ಟ್‌ನಲ್ಲಿ ರದ್ದಾಗಿತ್ತು. ಹಾಗಾಗಿ 10 ತಿಂಗಳ ಕಾಲ ಜೈಲಿನ ಹೊರಗಿದ್ದ ದರ್ಶನ್ ಮತ್ತೆ ಜೈಲು ಸೇರಿದ್ದರು. ಇತ್ತೀಚೆಗೆ ಜಾಮೀನು ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಿತ್ತು. ಮತ್ತೆ ಅದೇ ಸುಪ್ರೀಂ ಕೋರ್ಟ್ ಜಾಮೀನು ಕೊಡುತ್ತಾ ಎನ್ನುವ ಚರ್ಚೆ ನಡೀತಿದೆ. ಈಗಾಗಲೇ ಜಾಮೀನು ಅರ್ಜಿ ವಿಚಾರಣೆ ಆರಂಭವಾಗಿದೆ. ರೇಣುಕಾಸ್ವಾಮಿ ಪ್ರಕರಣದ ಟ್ರಯಲ್ ಹಾಗೂ ಜೈಲಿನಲ್ಲಿ ಯಾವೆಲ್ಲಾ ಸೌಲಭ್ಯ ದರ್ಶನ್‌ಗೆ ನೀಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ಮಾಹಿತಿ ಕೇಳಿ ಅರ್ಜಿ ವಿಚಾರಣೆ ಮುಂದೂಡಿದೆ. ಟ್ರಯಲ್ ತಡವಾಗುತ್ತಿದೆ, ನನ್ನ ಸಿನಿಮಾ ವೃತ್ತಿಜೀವನಕ್ಕೂ ಸಮಸ್ಯೆ ಆಗುತ್ತಿದೆ. ಜೈಲಿನಲ್ಲಿ ಸರಿಯಾದ ಸೌಕರ್ಯ ಸಿಗುತ್ತಿಲ್ಲ, ಹಾಗಾಗಿ ಜಾಮೀನು ನೀಡಿ ಎಂದು ದರ್ಶನ್ ಮನವಿ ಮಾಡಿದ್ದಾರೆ.

Darshan Fans Furious After Nageshwara Rao Poojary s Viral Jail Remark Sparks Outrage

ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನು ಬಗ್ಗೆ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಮೇಲ್ಮನವಿ ಬಗ್ಗೆ ಕಳೆದ ವರ್ಷ ಆಗಸ್ಟ್ 14ರಂದು ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಹಾಗೂ ನ್ಯಾ.ಮಹದೇವನ್ ಅವರಿದ್ದ ದ್ವಿಸದಸ್ಯ ಪೀಠ ವಿಚಾರಣೆ ನಡೆಸಿತ್ತು. ಬಳಿಕ ಜಾಮೀನು ರದ್ದು ಮಾಡಿ ಆದೇಶ ನೀಡಿತ್ತು. ಹೈಕೋರ್ಟ್​ ನೀಡಿದ ಜಾಮೀನಿನಲ್ಲಿ ದೋಷವಿದೆ ಎಂದಿತ್ತು. ಜೈಲಿನಲ್ಲಿ ಆರೋಪಿಗಳಿಗೆ ರಾಜಾತಿಥ್ಯ ನೀಡಲಾಗಿದೆ, ಈ ಬಗ್ಗೆ ಗೊತ್ತಾದ ಕೂಡಲೇ ಜೈಲು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕಿತ್ತು. ಇದೊಂದು ಲ್ಯಾಂಡ್​​ ಮಾರ್ಕ್​ ತೀರ್ಪು, ಅಲ್ಲದೇ ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

ನಟ ದರ್ಶನ್ ಜೈಲಿನಲ್ಲಿರುವ ಬಗ್ಗೆ ಹೈದರಾಬಾದ್ ಮೂಲದ ಅಡ್ವೋಕೇಟ್ ನಾಗೇಶ್ವರ ರಾವ್ ಪೂಜಾರಿ ಎಂಬುವವರು ಮಾತನಾಡಿದ್ದಾರೆ. iDream News ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅವರು ನೀಡಿರುವ ಹೇಳಿಕೆ ವೈರಲ್ ಆಗುತ್ತಿದೆ. ಕಾನೂನಿನಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ. ಆದರೆ ಅದಕ್ಕೆ ಕೊಂಚ ಸಮಯ ಬೇಕಾಗಬಹುದು. ಕೆಲ ಪ್ರಕರಣಗಳಲ್ಲಿ ಬೇಗ ತೀರ್ಪು ಬಂದಿದೆ ಎಂದು ಅವರು ವಿವರಣೆ ನೀಡುವಾಗ ದರ್ಶನ್ ಪ್ರಕರಣದ ಉದಾಹರಣೆ ಕೊಟ್ಟಿದ್ದಾರೆ.

ಕಾನೂನಿನಲ್ಲಿ ಕಂಡಿತ ನ್ಯಾಯ ಸಿಗುತ್ತದೆ. ಆದರೆ ಕೋರ್ಟ್ ಭಾಷೆ, ಕೋರ್ಟ್ ಪ್ರಾಸೆಸ್ ಅರ್ಥ ಮಾಡಿಕೊಳ್ಳಬೇಕು. ಕೋರ್ಟ್ ಅನ್ನು ನಾವು ಅರ್ಥ ಮಾಡಿಕೊಂಡ್ರೆ, ಕೋರ್ಟ್ ನಮ್ಮನ್ನು ಅರ್ಥ ಮಾಡಿಕೊಳ್ಳುತ್ತದೆ. ಕೋರ್ಟ್ ಬಗ್ಗೆ ಗೊತ್ತಿಲ್ಲದೇ ದೂಷಿಸುವುದು ಸರಿಯಲ್ಲ. ನ್ಯಾಯ ಸಿಗದೇ ಈ ವ್ಯವಸ್ಥೆ ಇಷ್ಟು ವರ್ಷದಿಂದ ಇದ್ಯಾ? ಕರ್ನಾಟಕದಲ್ಲಿ ದೇವೆಗೌಡರ ಮೊಮ್ಮಗ, ರೇವಣ್ಣ ಅವರ ಮಗನಿಗೆ ಒಂದೇ ವರ್ಷದಲ್ಲಿ ಶಿಕ್ಷೆ ವಿಧಿಸಲಾಯಿತು ಎಂದು ಅಡ್ವೋಕೇಟ್ ನಾಗೇಶ್ವರ ರಾವ್ ಪೂಜಾರಿ ಹೇಳಿದ್ದಾರೆ.

ಮಾತು ಮುಂದುವರೆಸಿರುವ ನಾಗೇಶ್ವರ ರಾವ್ ಪೂಜಾರಿ "ಅವನ್ಯಾರೋ ಕನ್ನಡ ಸಿನಿಮಾ ನಟ ಇದ್ದಾನೆ ದರ್ಶನ್ ಅಂತ.. ಇವತ್ತಿಗೂ ಮರ್ಡ*ರ್ ಕೇಸ್‌ನಲ್ಲಿ ಜೈಲಿನಲ್ಲಿ ಇದ್ದಾನೆ.. ಹೊರಗೆ ಬಿಡ್ತಾರಾ?? ಇಲ್ವಲ್ಲ.. ನ್ಯಾಯ ಸಿಗಲ್ಲ ಅಂತ ಅಲ್ಲ.. ಅದರ ಪ್ರಕ್ರಿಯೆ ಹೇಗಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಪ್ರಕ್ರಿಯೆ ಗೊತ್ತಾಗದೇ ವಕೀಲರು, ಕೋರ್ಟ್ ಅನ್ನು ದೂಷಿಸಬೇಡಿ" ಎಂದಿದ್ದಾರೆ.

ನಾಗೇಶ್ವರ ರಾವ್ ಪೂಜಾರಿ ಹೇಳಿಕೆ ವೀಡಿಯೋ ವೈರಲ್ ಆಗ್ತಿದೆ. ಏಕ ವಚನದಲ್ಲಿ ದರ್ಶನ್ ಬಗ್ಗೆ ಮಾತನಾಡಿದ್ದಾರೆ. ಉದಾಹರಣೆ ಕೊಡಲು ಬೇರೆ ಯಾರು ಸಿಗಲಿಲ್ವಾ? ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದು ಆಗಾಗ್ಗೆ ಸಂದರ್ಶನಗಳಲ್ಲಿ ಭಾಗಿ ಆಗಿ ಅಡ್ವೋಕೇಟ್ ನಾಗೇಶ್ವರ ರಾವ್ ಕಾನೂನು ವಿಚಾರಗಳಿಗೆ ಸಂಬಂಧಿಸಿದಂತೆ ಸಲಹೆ, ಸೂಚನೆ ನೀಡುತ್ತಾರೆ. ಇತ್ತೀಚೆಗೆ ಅವರು ತೆಲುಗು ಚಿತ್ರರಂಗದಲ್ಲಿ ಕೂಡ ಗುರ್ತಿಸಿಕೊಳ್ಳುತ್ತಿದ್ದಾರೆ. 'ರಾಜು ವೆಡ್ಸ್ ರಂಬಾಯಿ' ಎಂಬ ಚಿತ್ರವನ್ನು ಸಮರ್ಪಿಸುತ್ತಿದ್ದಾರೆ.

Read more about: darshan sandalwood case
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X