ಚಿತ್ರದುರ್ಗದ ದರ್ಶನ್ ಅಭಿಮಾನಿಯ ಕೆಲಸಕ್ಕೆ 'ಡಿ' ಭಕ್ತರು ಖುಷಿಯೋ ಖುಷಿ
Recommended Video

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಾಲಿಗೆ ಚಿತ್ರದುರ್ಗ ತುಂಬಾ ವಿಶೇಷವಾಗಿದೆ. ಚಿತ್ರದುರ್ಗದ ಪಾಳೇಗಾರ 'ಮದಕರಿ ನಾಯಕ'ನ ಕುರಿತು ಸಿನಿಮಾ ಮಾಡುವ ವಿಷ್ಯ ಗೊತ್ತಾಗುತ್ತಿದ್ದಂತೆ ಡಿ ಬಾಸ್ ಭಕ್ತರು ಹಬ್ಬ ಆಚರಿಸುತ್ತಿದ್ದಾರೆ. ಅದರಲ್ಲೂ ದುರ್ಗದ ಅಭಿಮಾನಿಗಳಂತೂ ಡಿ ಉತ್ಸವ ಮಾಡುತ್ತಿದ್ದಾರೆ.
ಇತ್ತೀಚಿಗಷ್ಟೆ ಚಿತ್ರದುರ್ಗದ ಮುರುಘಾಮಠಕ್ಕೆ ದರ್ಶನ್ ಭೇಟಿ ನೀಡಿದ್ದರು. ಈ ವೇಳೆ ನೀಡಿದ್ದ ದಾಸನನ್ನ ನೋಡಲು ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಇದು ನಡೆದ ಎರಡ್ಮೂರು ದಿನದಲ್ಲೇ ಈಗ ಚಿತ್ರದುರ್ಗದಲ್ಲಿ ಅಭಿಮಾನಿಯೊಬ್ಬರು ಗಮನ ಸೆಳೆದಿದ್ದಾರೆ.
ತಮ್ಮ ನೆಚ್ಚಿನ ನಟನ ಮೇಲಿನ ಅಭಿಮಾನವನ್ನ ತೋರಿಸಲು ಮೈಮೇಲೆ ಅಚ್ಚೆ, ವಾಹನಗಳ ಮೇಲೆ ಪೋಸ್ಟರ್, ಕತ್ತಲ್ಲಿ ಡಾಲರ್ ಹೀಗೆ ತಾವು ಬಳಸುವ ವಸ್ತುಗಳ ಮೇಲೆ ದರ್ಶನ್ ಅವರನ್ನ ನೋಡುವ ಅಭಿಮಾನಿಗಳಿದ್ದಾರೆ. ಆದ್ರೆ, ಇಲ್ಲೊಬ್ಬ ಅಭಿಮಾನಿ ತಾವು ಕಟ್ಟಿರುವ ಹೊಸ ಮನೆಯಲ್ಲೇ 'ಐರಾವತ'ನನ್ನ ನೆನಪಿಸಿಕೊಂಡಿದ್ದಾರೆ. ಮುಂದೆ ಓದಿ.....

ದರ್ಶನ್ ಹೆಸರಲ್ಲಿ ಮನೆ ಕಟ್ಟಿದ ಅಭಿಮಾನಿ
ಅಭಿಮಾನ ಎನ್ನುವುದು ಹೇಗೆಲ್ಲಾ ಇರುತ್ತೆ ಎನ್ನುವುದಕ್ಕೆ ಇಲ್ಲೊಂದು ವಿಶೇಷ ನಿದರ್ಶನ ಸಿಕ್ಕಿದೆ. ಸ್ವಂತ ಮನೆ ಕಟ್ಟಬೇಕು ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಕನಸು. ಆ ಮನೆ ಕಟ್ಟಿದ ನಂತರ ಆ ಮನೆಗೆ ತಂದೆ-ತಾಯಿ ಅಥವಾ ದೇವರ ಹೆಸರು ಇಡುವುದು ಸಾಮಾನ್ಯ. ಆದ್ರೆ, ಇಲ್ಲೊಬ್ಬ ಅಭಿಮಾನಿ ತಾನು ಕಟ್ಟಿರುವ ಹೊಸ ಮನೆಗೆ ದರ್ಶನ್ ಹೆಸರಿಟ್ಟಿದ್ದಾರೆ.

'ಚಾಲೆಂಜಿಂಗ್ ಸ್ಟಾರ್' ನಿವಾಸ
ಚಿತ್ರದುರ್ಗದ ಯೋಗಿ ಎಂಬುವರು ತಮ್ಮ ಮನೆಗೆ 'ಚಾಲೆಂಜಿಂಗ್ ಸ್ಟಾರ್' ಎಂದು ನಾಮಕರಣ ಮಾಡಿದ್ದರು. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ದರ್ಶನ್ ಅಭಿಮಾನಿಯ ಈ ಅಭಿಮಾನಕ್ಕೆ ಭಕ್ತಗಣ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ.

'ಬಾಸ್' ಮನೆಗೆ ಗೃಹ ಪ್ರವೇಶ
ಇತ್ತೀಚಿಗಷ್ಟೆ ಈ ಮನೆಯ ಗೃಹ ಪ್ರವೇಶ ಕಾರ್ಯಕ್ರಮ ನಡೆದಿದೆ. ಈ ಮನೆ ಗ್ರೌಂಡ್ ಫ್ಲೋರ್ ಮತ್ತು ಫಸ್ಟ್ ಫ್ಲೋರ್ ಹೊಂದಿದೆ. ಯೋಗಿ ಎಂಬುವರು ದರ್ಶನ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ದರ್ಶನ್ ನೆನಪಿಗಾಗಿ ಇಂತಹ ಕೆಲಸ ಮಾಡಿದ್ದಾರೆ.

ಅಭಿಮಾನಿಗೆ ಅಭಿಮಾನಿಗಳಾದ್ರು
ಇನ್ನು ಯೋಗಿ ಅವರ ಈ ಅಭಿಮಾನಕ್ಕೆ ಡಿ ಬಾಸ್ ಭಕ್ತು ಶುಭಾಶಯ ತಿಳಿಸಿ, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಅಭಿಮಾನದ ಬಗ್ಗೆ ನೀವು ಕೂಡ ನಿಮ್ಮ ಅಭಿಪ್ರಾಯವನ್ನ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಬಹುದು.


Click it and Unblock the Notifications











