'ಡಿ ಬಾಸ್' ಹಾದಿಯಲ್ಲಿ ಹೆಜ್ಜೆ ಇಟ್ಟ ಅಭಿಮಾನಿಗಳು

By Pavithra

Recommended Video

ಡಿ ಬಾಸ್‌ನ್ನು ಅನುಕರಿಸುತ್ತಿರುವ ಅಭಿಮಾನಿಗಳು..!! | FIlmibeat Kannada

ಅಭಿಮಾನಿಗಳೇ ಹಾಗೆ ತಾವು ಇಷ್ಟ ಪಡುವಂತಹ ಸ್ಟಾರ್ ಗಳು ಹೇಗೆ ನಡೆದುಕೊಳ್ಳುತ್ತಾರೋ ಅದೇ ಹಾದಿಯಲ್ಲಿ ಅವರು ನಡೆಯುತ್ತಾರೆ. ಎಲ್ಲಾ ವಿಚಾರದಲ್ಲಿಯೂ ಅವರನ್ನೇ ಅನುಸರಿಸುತ್ತಾರೆ. ಸದ್ಯ ಈಗ ದರ್ಶನ್ ಅಭಿಮಾನಿಗಳು ದಾಸನನ್ನೇ ಫಾಲೋ ಮಾಡುತ್ತಿದ್ದಾರೆ.

ಇತ್ತೀಚಿಗಷ್ಟೆ ದರ್ಶನ್ ಅರಣ್ಯ ಇಲಾಖೆಯ ರಾಯಭಾರಿ ಆಗಿ ಅರಣ್ಯ ಉಳಿಸಿ ಎನ್ನುವ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಸಿನಿಮಾ ಸ್ಟೈಲ್, ಡೈಲಾಗ್ ಗಳನ್ನು ಮಾತ್ರವಲ್ಲದೆ ಒಳ್ಳೆಯ ಕೆಲಸವನ್ನು ಅಭಿಮಾನಿಗಳು ಅನುಸರಿಸುತ್ತಾರೆ ಎನ್ನುವುದಕ್ಕೆ ಇಲ್ಲೊಂದು ಉತ್ತಮ ಉದಾಹರಣೆ ಇದೆ.

ದರ್ಶನ್ ಅಭಿಮಾನಿಗಳು ಅವರಂತೆಯೇ ವನ ಮಾತೆಯ ರಕ್ಷಣೆಗಾಗಿ ಪಣತೊಟ್ಟಿದ್ದಾರೆ. ವಿಶೇಷ ಸಂದರ್ಭದಲ್ಲಿ ದುಂದು ವೆಚ್ಚಕ್ಕೆ ಬ್ರೇಕ್ ಹಾಕಿ ಮುಂದಿನ ಪೀಳಿಗೆಯ ಒಳಿತಿಗಾಗಿ ಕೆಲಸ ಮಾಡುತ್ತಿದ್ದಾರೆ. ಅರಣ್ಯ ರಕ್ಷಣೆಗಾಗಿ ದಾಸನ ಅಭಿಮಾನಿಗಳು ಮಾಡಿದ ಮಹಾನ್ ಕಾರ್ಯವೇನು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

ಡಿ ಬಾಸ್ ಅಭಿಮಾನಿಗಳಿಂದ ಅರಣ್ಯ ರಕ್ಷಣೆ

ಡಿ ಬಾಸ್ ಅಭಿಮಾನಿಗಳಿಂದ ಅರಣ್ಯ ರಕ್ಷಣೆ

ದರ್ಶನ್ ಅರಣ್ಯ ಇಲಾಖೆಯ ರಾಯಭಾರಿ ಆದ ನಂತರ ಅವರ ಅಭಿಮಾನಿಗಳು ಮುಂದಿನ ಪೀಳಿಗೆಗಾಗಿ ಅರಣ್ಯ ಸಂಪತ್ತನ್ನು ಸಂರಕ್ಷಿಸಲು ಮುಂದಾಗಿದ್ದಾರೆ. ಸಾವಿರಾರು ಗಿಡಗಳನ್ನು ನೆಟ್ಟು ಅನೇಕರಿಗೆ ಸ್ಫೂರ್ತಿ ಆಗಿದ್ದಾರೆ.

ಅಭಿಮಾನಿಗಳಗದಿಂದ ಗಿಡ ನೆಡುವ ಕಾರ್ಯಕ್ರಮ

ಅಭಿಮಾನಿಗಳಗದಿಂದ ಗಿಡ ನೆಡುವ ಕಾರ್ಯಕ್ರಮ

ದರ್ಶನ್ ಅವರ ಅಭಿಮಾನಿ ಬಳಗ ಕಟ್ಟಿಕೊಂಡಿರುವ ಡಿ ಕಂಪನಿ ಇತ್ತೀಚಿಗಷ್ಟೆ ಏಳು ವರ್ಷ ಪೂರೈಸಿದೆ. ಇದೇ ಸಂದರ್ಭದಲ್ಲಿ ಅಭಿಮಾನಿಗಳು ಬೆಂಗಳೂರು ಸೇರಿದಂತೆ 11 ಸ್ಥಳಗಳಲ್ಲಿ ತಲಾ ನೂರು ಗಿಡಗಳನ್ನು ನೆಟ್ಟು ಸಂಭ್ರಮವನ್ನು ಆಚರಣೆ ಮಾಡಿದ್ದಾರೆ.

ಅಭಿಮಾನಿಗಳು ಮಾಡಿದ ವನ ಮಹೋತ್ಸವ

ಅಭಿಮಾನಿಗಳು ಮಾಡಿದ ವನ ಮಹೋತ್ಸವ

ಹಾಸನ್, ಮಂಡ್ಯ, ಶಿವಮೊಗ್ಗ, ದಾವಣಗೆರೆ, ಕುಣಿಗಲ್, ಕೆಂಗೇರಿ, ದೊಡ್ಡಬಳ್ಳಾಪುರ, ನೆಲಮಂಗಲ, ಹುಬ್ಬಳ್ಳಿ, ಎಲೆಕ್ಟ್ರಾನಿಕ್ ಸಿಟಿ, ತಿಪಟೂರು ಹಾಗೂ ಬೆಂಗಳೂರಿನಲ್ಲಿರುವ 'ಡಿ ಕಂಪನಿ'ಯ ಸದಸ್ಯರು ಗಿಡಗಳನ್ನು ನೆಟ್ಟು ವನ ಮಹೋತ್ಸವ ಆಚರಣೆ ಮಾಡಿದ್ದಾರೆ.

ದರ್ಶನ್ ರಿಂದ ಸ್ಫೂರ್ತಿ ಪಡೆದುಕೊಂಡ ಫ್ಯಾನ್ಸ್

ದರ್ಶನ್ ರಿಂದ ಸ್ಫೂರ್ತಿ ಪಡೆದುಕೊಂಡ ಫ್ಯಾನ್ಸ್

ಪ್ರಕೃತಿ ನಮಗೆ ಸಾಕಷ್ಟು ನೀಡಿದೆ. ಅದನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಕರ್ತವ್ಯ ನಮ್ಮದು. ಎನ್ನುವ ಉದ್ದೇಶವನ್ನಿಟ್ಟುಕೊಂಡು ದರ್ಶನ್ ಅವರ ಫಾರ್ಮ್ ಹೌಸ್ ನಲ್ಲಿ 1800 ವಿವಿಧ ಬಗೆಯ ಗಿಡಗಳನ್ನು ನೆಟ್ಟಿದ್ದಾರೆ. ಅದರಂತೆಯೇ ಅಭಿಮಾನಿಗಳು ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

More from Filmibeat

English summary
Kannada actor Darshan fans have organized a planting program in the backdrop of Fan Club completed 7 years. Fans have planted more than a thousand plants in 11 places of the state.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X