ಮಾಧ್ಯಮದವರ ಮೇಲೆ ಹಲ್ಲೆಗೆ ಯತ್ನಿಸಿದ ದರ್ಶನ್ ಫ್ಯಾನ್ಸ್

By ಹರಾ

ಕಳೆದ ಫೆಬ್ರವರಿ 16, ದರ್ಶನ್ ಹುಟ್ಟುಹಬ್ಬದಂದು ನಡೆದ ರಾದ್ಧಾಂತ ನೆನಪಿದ್ಯಾ. ಪ್ರತಿವರ್ಷದಂತೆ ಈ ವರ್ಷ ಕೂಡ ಸುದ್ದಿ ವಾಹಿನಿಗಳು ದರ್ಶನ್ ಬರ್ತಡೆ ಕವರ್ ಮಾಡುವುದಕ್ಕೆ ರಾಜರಾಜೇಶ್ವರಿನಗರದಲ್ಲಿರುವ ದರ್ಶನ್ ನಿವಾಸಕ್ಕೆ ಆಗಮಿಸಿದ್ದರು.

ಬರ್ತಡೆ ಸಂಭ್ರಮಾಚರಣೆಯನ್ನ ಶೂಟ್ ಮಾಡಿದ ನಂತರ ದರ್ಶನ್ ರವರನ್ನ ಮಾತನಾಡಿಸುವುದಕ್ಕೆ ಖಾಸಗಿ ವಾಹಿನಿಯ ವರದಿಗಾರರೊಬ್ಬರು ಮುಂದಾಗಿದ್ದಾರೆ. ದರ್ಶನ್ ಪ್ರತಿಕ್ರಿಯೆ ನೀಡುವುದಕ್ಕೆ ಮುನ್ನವೇ, ಅಲ್ಲೇ ಇದ್ದ ದರ್ಶನ್ 'ಭಕ್ತ'ರೊಬ್ಬರು ಅಭಿಮಾನ ಪರಾಕಾಷ್ಟೆ ಮೆರೆದ ಪರಿಣಾಮ ಮಾಧ್ಯಮದವರ ಮೇಲೆ ಕಲ್ಲು ತೂರಾಟ ನಡೆದಿತ್ತು. ಖಾಸಗಿ ವಾಹಿನಿಯ ಓ.ಬಿ ವ್ಯಾನ್ ಕೂಡ ಜಖಂಗೊಂಡಿತ್ತು.

darshan

ಇಂತದ್ದೇ ಪ್ರಕರಣ ನೆನಪಿಸುವಂತಹ ಘಟನೆ ಇಂದು ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ನಡೆದಿದೆ. 'Mr.ಐರಾವತ' ಚಿತ್ರದ ಬಿಗ್ ಓಪನ್ನಿಂಗ್ ಕುರಿತು ಸುದ್ದಿ ಮಾಡುವ ಸಲುವಾಗಿ ಎಲ್ಲಾ ಸುದ್ದಿ ವಾಹಿನಿಗಳು ಇಂದು ಬೆಳ್ಳಗೆ 8 ಗಂಟೆಗೆ ಮುಖ್ಯ ಚಿತ್ರಮಂದಿರ ಸಂತೋಷ್ ನಲ್ಲಿ ಹಾಜರಿತ್ತು. [ಹುಟ್ಟುಹಬ್ಬದ ದಿನ ಏನಿದು ರಾದ್ಧಾಂತ ಚಾಲೆಂಜಿಂಗ್ ಸ್ಟಾರ್?]

ಅಷ್ಟೊತ್ತಿಗಾಗಲೇ, ಟಿಕೆಟ್ ಸೋಲ್ಡ್ ಔಟ್ ಆಗಿದ್ರಿಂದ ಕೆಲ ಅಭಿಮಾನಿಗಳು ಥಿಯೇಟರ್ ಮುಂಭಾಗದಲ್ಲಿ ಗದ್ದಲ ಸೃಷ್ಟಿಸಿದ್ದರು. ಇನ್ನೂ ಕೆಲವರು, ತಮ್ಮನ್ನ ಮಾಧ್ಯಮದವರು ಚಿತ್ರೀಕರಿಸಲಿ ಅನ್ನುವ ಕಾರಣಕ್ಕೆ ಸುಖಾ ಸುಮ್ಮನೆ ಕಿರುಚಾಡಿ, ಕುಣಿಯುತ್ತಿದ್ದರು.

santhosh theater

ಇದ್ದಕ್ಕಿದ್ದಂತೆ ಯಾರಿಗೆ ಅದೇನಾಯ್ತೋ ಗೊತ್ತಿಲ್ಲ. ನೋಡನೋಡುತ್ತಿದ್ದಂತೆ ಚಿತ್ರೀಕರಣ ನಡೆಸುತ್ತಿದ್ದ ಖಾಸಗಿ ವಾಹಿನಿ ಸುದ್ದಿ ವಾಹಿನಿ ಕ್ಯಾಮರಾಮ್ಯಾನ್ ಮತ್ತು ವರದಿಗಾರರ ಮೇಲೆ ದರ್ಶನ್ 'ಭಕ್ತರು' ಹಲ್ಲೆಗೆ ಯತ್ನಿಸಿದ್ದಾರೆ. [ಪತ್ರಕರ್ತರನ್ನ ಕಂಡರೆ ದರ್ಶನ್ ಉರಿದು ಬೀಳುವುದೇಕೆ?]

darshan

ತಕ್ಷಣ ಮಧ್ಯ ಪ್ರವೇಶಿಸಿದ ಪೊಲೀಸರು, ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ದರ್ಶನ್ ಅಭಿಮಾನಿಗಳಿಗೆ ಮಾಧ್ಯಮದವರ ಮೇಲೆ ಸಿಟ್ಟು ಅದೇಕೋ..? ಬಲ್ಲವರು ಯಾರು..?

More from Filmibeat

English summary
Kannada Actor Darshan starrer Kannada Movie 'Mr.Airavata' has hit the screens today (October 1st) with much fanfare. Meanwhile, Darshan fans created havoc in Santhosh Theater, Bengaluru and got into trouble with Kannada Media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X