Darshan Birthday CDP : ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಯಿತು 'ಬಾಸ್ ಆಫ್ ಕೆಎಫ್ಐ' ಕಾಮನ್ ಡಿಪಿ!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬವನ್ನು ಆಚರಿಸಲು ದರ್ಶನ್ ಅಭಿಮಾನಿಗಳು ಕಾಯುತ್ತಿದ್ದಾರೆ. ಇದೇ ತಿಂಗಳ 16ರಂದು ಬಾಕ್ಸ್ ಆಫೀಸ್ ಸುಲ್ತಾನ್ 46ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಸದ್ಯ ದರ್ಶನ್ ನಟನೆಯ ಕ್ರಾಂತಿ ಚಿತ್ರ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿದ್ದು, ಹುಟ್ಟುಹಬ್ಬದ ದಿನದಂದು ರಿವೀಲ್ ಆಗಲಿರುವ ದರ್ಶನ್ ಹಾಗೂ ತರುಣ್ ಸುಧೀರ್ ಕಾಂಬಿನೇಶನ್‌ನ ಸಿನಿಮಾದ ಟೈಟಲ್‌ಗೆ ಫ್ಯಾನ್ಸ್ ಕಾದು ಕುಳಿತಿದ್ದಾರೆ.
ಇನ್ನು ಪ್ರತಿ ವರ್ಷದಂತೆ ಈ ವರ್ಷವೂ ಸಹ ದರ್ಶನ್ ಹುಟ್ಟಹಬ್ಬಕ್ಕಾಗಿ ಅವರ ಅಭಿಮಾನಿಗಳು ವಿಶೇಷ ಕಾಮನ್ ಡಿಪಿ ಎಡಿಟ್ ಮಾಡಿ ಬಿಡುಗಡೆ ಮಾಡಿದ್ದಾರೆ. ದರ್ಶನ್ ಅಭಿನಯದ ಹಲವು ಸಿನಿಮಾಗಳ ಫೋಟೊಗಳನ್ನು ಬಳಸಿ ಈ ಪೋಸ್ಟರ್ ಅನ್ನು ಡಿಸೈನ್ ಮಾಡಲಾಗಿದ್ದು, ಅಲ್ಲಲ್ಲಿ ಜನರ ಗುಂಪಿನ ಚಿತ್ರಗಳನ್ನೂ ಸಹ ಬಳಸಲಾಗಿದೆ.
ಹ್ಯಾಪಿ ಬರ್ತ್‌ಡೇ ಬಾಸ್ ಆಫ್ ಕೆಎಫ್ಐ ಡಿ ಬಾಸ್ ಎಂದು ಕಾಮನ್ ಡಿಸ್‌ಪ್ಲೇ ಪಿಕ್ಚರ್‌ನಲ್ಲಿ ಬರೆಯಲಾಗಿದ್ದು, ಕೆಳಭಾಗದಲ್ಲಿ ಬಾಸ್ ಪರ್ವ, ಸುಲ್ತಾನ್ ಸಂಭ್ರಮ ಎಂದು ಬರೆಯಲಾಗಿದೆ. ಇನ್ನು ಡಿಪಿಯಲ್ಲಿ ಹಲವು ಬಾವುಟಗಳನ್ನೂ ಸಹ ಬಳಸಲಾಗಿದ್ದು, ಈ ಬಾವುಟಗಳ ಮೇಲೆ ಡಿ ಎಂದು ಬರೆಯಲಾಗಿದೆ.

ಈ ಕಾಮನ್ ಡಿಸ್‌ಪ್ಲೇ ಪಿಕ್ಚರ್ ಅನ್ನು ಎಲ್ಲಾ ದರ್ಶನ್ ಅಭಿಮಾನಿಗಳು ತಮ್ಮ ಫೇಸ್‌ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್ ಹಾಗೂ ವಾಟ್ಸಪ್ ಡಿಪಿಗಳಿಗೆ ಅಪ್‌ಲೋಡ್ ಮಾಡುವ ಮೂಲಕ ಸಂಭ್ರಮಿಸಲಿದ್ದಾರೆ. ಇನ್ನು ದರ್ಶನ್ ಈ ವರ್ಷ ಹುಟ್ಟುಹಬ್ಬಕ್ಕೆ ಹಾರ, ಕೇಕ್ ತಂದು ದುಂದುವೆಚ್ಚ ಮಾಡುವ ಬದಲು ಅಡುಗೆ ಮಾಡಲು ಬೇಕಾಗುವ ಸಾಮಗ್ರಿಗಳನ್ನು ತನ್ನಿ, ಅದನ್ನು ಅಗತ್ಯ ಇರುವವರಿಗೆ ತಲುಪಿಸಿ ಸಹಾಯ ಮಾಡೋಣ ಎಂದು ಮನವಿ ಮಾಡಿದ್ದು, ನೆಚ್ಚಿನ ನಟನ ಮನವಿಯಂತೆ ಅಭಿಮಾನಿಗಳೂ ಸಹ ಅಕ್ಕಿ ಮೂಟೆ, ಅಡುಗೆ ಎಣ್ಣೆ ಸೇರಿದಂತೆ ಹಲವು ಸಾಮಗ್ರಿಗಳನ್ನು ದರ್ಶನ್ ಅವರ ಮನೆಗೆ ಕೊಂಡೊಯ್ದಿದ್ದಾರೆ.


Click it and Unblock the Notifications











