»   » ದರ್ಶನ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಕೊಟ್ಟ ಸ್ಪೆಷಲ್ ಉಡುಗೊರೆ ಇದು

ದರ್ಶನ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಕೊಟ್ಟ ಸ್ಪೆಷಲ್ ಉಡುಗೊರೆ ಇದು

Posted By:
Subscribe to Filmibeat Kannada
ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಇಂದು (ಫೆಬ್ರವರಿ 16) ಹುಟ್ಟುಹಬ್ಬದ ಸಂಭ್ರಮ. 41ನೇ ವಸಂತಕ್ಕೆ ಕಾಲಿಟ್ಟಿರುವ 'ದಾಸ'ನ ಬರ್ತ್ ಡೇಗೆ ಅವರ ಅಭಿಮಾನಿಗಳು ವಿಭಿನ್ನವಾದ ಉಡುಗೊರೆಗಳನ್ನ ನೀಡಿ ಖುಷಿ ಪಟ್ಟಿದ್ದಾರೆ. ದರ್ಶನ್, ಪ್ರಾಣಿ ಪ್ರಿಯರೆಂದು ಪುಟ್ಟ ಹಸು, ಮೊಲವನ್ನ ಕೆಲವರು ಗಿಫ್ಟ್ ಆಗಿ ಕೊಟ್ಟಿದ್ರೆ, ಮತ್ತೆ ಕೆಲವರು ದರ್ಶನ್ ಅವರ ಫೋಟೋಗಳನ್ನ ಉಡುಗೊರೆಯಾಗಿ ನೀಡಿದ್ದಾರೆ.[ಒಂದು ದಿನ ಮುಂಚೆನೇ 'ಕುಚಿಕು ಗೆಳಯ'ನಿಗೆ ವಿಶ್ ಮಾಡಿದ ಸುದೀಪ್]

ಆದ್ರೆ, ಇಲ್ಲೊಂದು ಅಭಿಮಾನಿಗಳ ತಂಡ, 'ಚಕ್ರವರ್ತಿ'ಗಾಗಿ ಒಂದು ಸ್ಪೆಷಲ್ ಸಾಂಗ್ ಮಾಡಿ ಅರ್ಪಸಿದ್ದಾರೆ. ದರ್ಶನ್ ಅವರ ಹುಟ್ಟುಹಬ್ಬದ ಪ್ರಯುಕ್ತ 'ಸನ್ ಆಫ್ ತೂಗುದೀಪ' ಎಂಬ ವಿಶೇಷ ಹಾಡನ್ನ ಸಂಯೋಜನೆ ಮಾಡಿದ್ದು, ವಿಶೇಷವಾಗಿ ಜಗ್ಗುದಾದನ ಹುಟ್ಟುಹಬ್ಬವನ್ನ ಆಚರಿಸಿದ್ದಾರೆ.[ಮಧ್ಯರಾತ್ರಿ 'ಚಕ್ರವರ್ತಿ'ಯ ಬರ್ತ್ ಡೇ ಸೆಲೆಬ್ರೇಷನ್: ದರ್ಶನ್ ಮನೆ ಮುಂದೆ ಜಾತ್ರೆ]

ಚಂದನ್ ಕುಮಾರ್ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ಗಾಯಕ ಟಿಪ್ಪು ಅವರ ಕಂಠದಲ್ಲಿ ಮೂಡಿಬಂದಿದೆ. ವಿಲಿಯಮ್ ಡ್ರೂಥ್ ಎಂಬುವರು ಈ ಹಾಡಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಆನಂದ್ ಆಡಿಯೋ ಮೂಲಕ ರಿಲೀಸ್ ಮಾಡಲಾಗಿದೆ.

''ಹೀ ಈಸ್ ದ ಮಾಸ್, ಹೀ ಈಸ್ ದ ಕ್ಲಾಸ್....
ಹೀ ಈಸ್ ದ ರೆಬೆಲ್, ಪಕ್ಕಾನೇ ಲೋಕಲ್......
ಮ್ಯಾನ್ ಈಸ್ ದ ಫರ್ಫೆಕ್ಟ್, ಆರಡಿ ಬುಲೆಟ್, ಸ್ಪೀಡಲ್ಲಿ ರಾಕೆಟ್
ಯಾರೋ ಇವನು, ಯಾರೋ ಇವನು
ಪ್ರೀತಿಗೆ ಸೈಲೆಂಟ್, ಲುಕ್ ಲ್ಲಿ ವೈಲೆಂಟ್, ಸ್ಟಾರ್ ಆಫ್ ದಿ ಟ್ಯಾಲೆಂಟ್
ಕರುನಾಡ ಮಗನು ಮಗನು....
ಪಂಟರ್ರು......,
ಸೋಲ್ಜರ್ರು.....
ತಗಲಾಕ್ಕೊಂಡ್ರೆ ಡೇಂಜರ್ರು....
ಫ್ಯೂಚರ್ರು....
ಟೈಮಲ್ಲೂ.....
ಇವರದ್ದನೇ ದರ್ಬಾರ್ರು.....
'ಸನ್ ಆಫ್ ತೂಗುದೀಪ'......'ಸನ್ ಆಫ್ ತೂಗುದೀಪ'......

ಈ ಹಾಡನ್ನ ಕೆಳಗೆ ನೀಡಲಾಗಿದೆ......

English summary
Darshan Fans Made Special Song For Darshan's 40th Birthday. A Song Lyrics by Chandan kumar, Compose by william druth.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X