Navagraha- 2: ಜಗ್ಗು ಪ್ಲ್ಯಾನ್- B.. ಕೊಹಿನೂರ್ ವಜ್ರದ ಮೇಲೆ ನವಗ್ರಹಗಳ ವಕ್ರದೃಷ್ಟಿ.. ಏನ್ ಟ್ವಿಸ್ಟ್ ಗುರೂ?

15 ವರ್ಷಗಳ ಹಿಂದೆ ಬಂದ ಕನ್ನಡದ ಆಕ್ಷನ್ ಥ್ರಿಲ್ಲರ್ 'ನವಗ್ರಹ' ಸಿನಿಮಾ ಪ್ರೇಕ್ಷಕರು ಮನಗೆದ್ದಿತ್ತು. ಮೈಸೂರಿನ ದಸರಾ ಅಂಬಾರಿಯನ್ನು ಕದಿಯುವ ಕಥೆ ಗಮನ ಸೆಳೆದಿತ್ತು. ದಿನಕರ್ ತೂಗುದೀಪ್ ನಿರ್ದೇಶನದ ಈ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಖಳನಟರ ಮಕ್ಕಳು ಒಟ್ಟಾಗಿ ನಟಿಸಿದ್ದು ವಿಶೇಷ. ಈ ಚಿತ್ರದ ಕಾನ್ಸೆಪ್ಟ್, ಸಾಂಗ್ಸ್, ಡೈಲಾಗ್ಸ್ ಎಲ್ಲವೂ ಹಿಟ್ ಆಗಿತ್ತು.

'ನವಗ್ರಹ' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ ವಿನೋದ್ ಪ್ರಭಾಕರ್, ಸೃಜನ್ ಲೋಕೇಶ್, ಗಿರಿ ದಿನೇಶ್, ಧರ್ಮ ಕೀರ್ತಿರಾಜ್, ನಾಗೇಂದ್ರ ಅರಸ್, ತರುಣ್ ಸುಧೀರ್, ವರ್ಷ ಹಾಗೂ ಶರ್ಮಿಳಾ ಮಾಂಡ್ರೆ ನಟಿಸಿದ್ದರು. ದರ್ಶನ್ ನೆಗೆಟಿವ್ ರೋಲ್‌ನಲ್ಲಿ ಅಬ್ಬರಿಸಿದ್ದರು. ಬಹಳ ದಿನಗಳಿಂದ 'ನವಗ್ರಹ' ಸಿನಿಮಾ ಸೀಕ್ವೆಲ್‌ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಈಗಾಗಲೇ ಚಿತ್ರದ ಕ್ಲೈಮ್ಯಾಕ್ಸ್ ಮುಕ್ತಾಯವಾಗಿದೆ. ನಾಡದೇವತೆ ಚಾಮುಂಡಿ ತಾಯಿಯ ಅಂಬಾರಿಯನ್ನೇ ಕದಿಯಲು ಹೋದ ಕಳ್ಳರಿಗೆ ತಕ್ಕ ಶಾಸ್ತಿ ಆಗಿದೆ. ಎಲ್ಲರೂ ಸತ್ತು ಹೋಗಿದ್ದಾರೆ. ಹಾಗಾಗಿ ಕಥೆಯನ್ನು ಮುಂದುವರೆಸುವುದು ಕಷ್ಟ.

Darshan- Navagraha2-animation-film

ದಿನಕರ್ ತೂಗುದೀಪ್ ಅಂಡ್ ಟೀಮ್ ಕೂಡ 'ನವಗ್ರಹ' ಸೀಕ್ವೆಲ್‌ ಮಾಡುವ ಆಲೋಚನೆಯಲ್ಲಿ ಇದ್ದಂತೆ ಇಲ್ಲ. ಆದರೆ ಬಸವರಾಜ್ ಎಂಬ ದರ್ಶನ್ ಅಭಿಮಾನಿಯೊಬ್ಬರು ತಮ್ಮದೇ ಕಲ್ಪನೆಯಲ್ಲಿ 'ನವಗ್ರಹ'-2 ಸಿನಿಮಾ ಮಾಡಿ ಮುಗಿಸಿದ್ದಾರೆ. ಇದನ್ನು ಈಗಾಗಲೇ ರಿಲೀಸ್ ಕೂಡ ಮಾಡಿಬಿಟ್ಟಿದ್ದಾರೆ. ಅಚ್ಚರಿ ಎನಿಸಿದರೂ ಇದು ಸತ್ಯ. ಈ ಬಗ್ಗೆ ಮುಂದೆ ಓದಿ.

'ನವಗ್ರಹ'-2 ಆನಿಮೇಷನ್ ಸಿನಿಮಾ

ಅಭಿಮಾನಿಯೊಬ್ಬರು ತಮ್ಮದೇ ಕಲ್ಪನೆಯಲ್ಲಿ 'ನವಗ್ರಹ'-2 ಕಥೆ ಮಾಡಿದ್ದಾರೆ. ಆನಿಮೇಷನ್ ಮೂಲಕ ಎಲ್ಲಾ ಪಾತ್ರಗಳನ್ನು ರೀ ಕ್ರಿಯೇಟ್ ಮಾಡಿ ಕಥೆಯನ್ನು ಮುಂದುವರೆಸಿದ್ದಾರೆ. ಈ ಆನಿಮೇಷನ್ ಚಿತ್ರವನ್ನು ಯೂಟ್ಯೂಬ್‌ನಲ್ಲಿ ರಿಲೀಸ್ ಮಾಡಿದ್ದಾರೆ. ಎಸಿಪಿ ಭಗತ್ ಹಾಗೂ ವಿಕ್ಕಿ ಸೇರಿ ಅಂಬಾರಿಯನ್ನು ವಾಪಸ್ ತಂದು ಜಂಬುಸವಾರಿ ನಡೆಯುವ ಸನ್ನಿವೇಶದೊಂದು 'ನವಗ್ರಹ' ಸಿನಿಮಾ ಮುಗಿದ್ದಿತ್ತು. ಆದರೆ ಅಲ್ಲಿಂದಲೇ ಕೆ ಆರಂಭವಾಗುತ್ತದೆ. ಅವರಿಬ್ಬರು ತಂದಿರೋದು ಕೂಡ ನಿಜವಾದ ಅಂಬಾರಿ ಅಲ್ಲ, ಜಗ್ಗು ಪ್ಯ್ಲ್ಯಾನ್ B ಮಾಡಿ ಅಂಬಾರಿ ಸಾಗಿಸಿದ್ದಾನೆ ಎಂದು ಕಥೆ ಮುಂದುವರೆಯುತ್ತದೆ.

Darshan- Navagraha2-animation-film

ಅಂಬಾರಿ ವಾಪಸ್ ತಂದ ನವಗ್ರಹಗಳು

ಹಣಕ್ಕಾಗಿ ಅಂಬಾರಿ ಕದ್ದ ಜಗ್ಗು ಅಂಡ್ ಟೀಂ ಅದನ್ನು ಮಾರಾಟ ಮಾಡುತ್ತಾರೆ. ಬಳಿಕ ಅದು ಭಯೋತ್ಪಾದಕರ ಕೈ ಸೇರುತ್ತದೆ ಎಂದು ತಿಳಿದು, ತಮ್ಮ ತಪ್ಪಿನ ಅರಿವಾಗಿ ಮತ್ತೆ ಅಂಬಾರಿಯನ್ನು ತಂದು ಒಪ್ಪಿಸುತ್ತಾರೆ. ಹೀಗೆ ಬಸವರಾಜ್ ಕಥೆಯನ್ನು ಹೆಣೆದಿದ್ದು ದರ್ಶನ್ ಅಭಿಮಾನಿಗಳು ಈ ಆನಿಮೇಷನ್ ಸಿನಿಮಾ ನೋಡಿ ಖುಷಿಯಾಗಿದ್ದಾರೆ. ಸದ್ಯ ಈ ಆನಿಮೇಷನ್ ಸಿನಿಮಾ ಮಾಡಿರುವ ಬಸವರಾಜ್ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕೋಹಿನೂರ್ ವಜ್ರದ ಮೇಲೆ ಕಣ್ಣು

ಅಂಬಾರಿಯನ್ನು ವಾಪಸ್ ತಂದಕೊಟ್ಟ ಜಗ್ಗು ಅಂಡ್ ಟೀಮ್ ಈ ದೇಶಕ್ಕಾಗಿ ಏನಾದರೂ ಮಾಡಬೇಕು ಎಂದು ಪಣ ತೊಡುತ್ತಾರೆ. ನಮ್ಮ ದೇಶದಿಂದ ಹೊರದೇಶಕ್ಕೆ ಹೋದ ಅಮೂಲ್ಯ ವಸ್ತುಗಳನ್ನು ತೆಗೆದುಕೊಂಡು ಬರುವ ಪ್ರಯತ್ನಕ್ಕೆ ಕೈ ಹಾಕುತ್ತಿದ್ದಾರೆ. ಹೀಗೆ 'ನವಗ್ರಹ- 2' ಅಂತ್ಯವಾಗುತ್ತದೆ. ಆ ಮೂಲಕ 'ನವಗ್ರಹ' ಚಿತ್ರದ ಮತ್ತೊಂದು ಸೀಕ್ವೆಲ್‌ಗೂ ಕಥೆ ಕೊಂಡೊಯ್ಯುವಂತೆ ಆನಿಮೇಷನ್ ಚಿತ್ರದಲ್ಲಿ ತೋರಿಸಲಾಗಿದೆ.

TRP Rating: 'ಕ್ರಾಂತಿ' Vs 'ಕಬ್ಜ': ಜಿದ್ದಾ ಜಿದ್ದಿನ ಪೈಪೋಟಿಯಲ್ಲಿ ಗೆದ್ದಿದ್ಯಾರು?

'ರಾಯಲ್' ಚಿತ್ರದಲ್ಲಿ ದಿನಕರ್ ಬ್ಯುಸಿ

'ಲೈಫ್ ಜೊತೆ ಒಂದ್ ಸೆಲ್ಫಿ' ಸಿನಿಮಾ ಬಳಿಕ ಪುನೀತ್ ರಾಜ್‌ಕುಮಾರ್ ನಟನೆಯ ಚಿತ್ರಕ್ಕೆ ದಿನಕರ್ ತೂಗುದೀಪ್ ಆಕ್ಷನ್ ಕಟ್ ಹೇಳಬೇಕಿತ್ತು. ಆದರೆ ಅಪ್ಪು ಅಗಲಿಕೆಯ ಹಿನ್ನೆಲೆಯಲ್ಲಿ ಆ ಸಿನಿಮಾ ನಿಂತು ಹೋಯಿತು. ಸದ್ಯ 'ರಾಯಲ್' ಎನ್ನುವ ಚಿತ್ರ ಕೈಗೆತ್ತಿಕೊಂಡಿದ್ದಾರೆ. ಜಯಣ್ಣ ಮತ್ತು ಭೋಗೇಂದ್ರ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ವಿರಾಟ್ ಚಿತ್ರದಲ್ಲಿ ಹೀರೊ ಆಗಿ ನಟಿಸ್ತಿದ್ದಾರೆ. ಮತ್ತೊಂದು ಕಡೆ ದರ್ಶನ್ 'ಕಾಟೇರ' ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. 'ಗರಡಿ' ಚಿತ್ರದಲ್ಲೂ ಮುಖ್ಯವಾದ ಪಾತ್ರದಲ್ಲಿ ನಟಿಸಿದ್ದಾರೆ.

More from Filmibeat

English summary
Darshan Fan-made Navagraha- 2 animation movie Goes Viral. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X