ಬೆಂಗಳೂರು ಟು ಮಂಡ್ಯ: ಸುಮಲತಾ ಬೆಂಬಲಿಸಿ ದರ್ಶನ್ ಅಭಿಮಾನಿಗಳ ಬೈಕ್ ಜಾಥ

Recommended Video

Lok Sabha Elections 2019 : ಬೆಂಗಳೂರು ಟು ಮಂಡ್ಯಗೆ ಬೈಕ್ ಜಾಥ ನಡೆಸಲು ತೀರ್ಮಾನಿಸಿದ ದರ್ಶನ ಅಭಿಮಾನಿಗಳು

ರಾಜ್ಯದಲ್ಲಿ ಭಾರಿ ಕುತೂಹಲ ಮೂಡಿಸಿರುವ ಮಂಡ್ಯ ಲೋಕಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಮಲತಾ ಮತ್ತು ಸಿಎಂ ಕುಮಾರಸ್ವಾಮಿ ನಡುವಿನ ವಾಗ್ವಾದಗಳು ಮಂಡ್ಯ ಜನರ ನಿದ್ದೆ ಗೆಡಿಸಿದೆ.

ಸುಮಲತಾ ಅಂಬರೀಶ್ ಅವರಿಗೆ ದರ್ಶನ್ ಮತ್ತು ಯಶ್ ಬೆಂಬಲ ವ್ಯಕ್ತವಾಗುತ್ತಿದ್ದಂತೆ, ಮಂಡ್ಯ ರಾಜಕಾರಣ ಮತ್ತಷ್ಟು ಚುರುಕಾಗಿದೆ. ರಾಜಕೀಯ ಪಕ್ಷಗಳು ಒಟ್ಟಿಗೆ ಸುಮಲತಾ, ದರ್ಶನ್, ಯಶ್ ವಿರುದ್ಧ ತಿರುಗಿ ಬಿದ್ದಿದೆ. ಯಾರು ಏನೇ ಅಂದ್ರು ನಾವು ಮಾತ್ರ ನಿಮ್ಮ ಜೊತೆಗಿದ್ದೀವಿ ಅಂತ ದರ್ಶನ್ ಅಭಿಮಾನಿಗಳು ಈಗ ಮಂಡ್ಯ ಅಖಾಡಕ್ಕೆ ಧುಮುಕುತ್ತಿದ್ದಾರೆ.

ಹೌದು, ಡಿ ಬಾಸ್ ಅಭಿಮಾನಿಗಳು ಸುಮಲತಾ ಅವರ ಪರ ಬೆಂಬಲ ವ್ಯಕ್ತಪಡಿಸಿಲು ಬೃಹತ್ ಬೈಕ್ ಜಾಥ ಹಮ್ಮಿಕೊಂಡಿದ್ದಾರೆ. ಇದೇ ತಿಂಗಳು 31 ರಂದು ಬೆಂಗಳೂರಿನಿಂದ ಮಂಡ್ಯದ ವರೆಗೂ ಬೈಕ್ ಜಾಥ ಮಾಡುವ ಮೂಲಕ ಅಂಬರೀಶ್ ಪತ್ನಿ ಪರ ನಾವಿದ್ದೇವೆ ಎಂದು ತೋರಿಸಲು ಸಜ್ಜಾಗಿದ್ದಾರೆ.

Darshan fans organized bike rally to support sumalatha

ಅಂಬರೀಶ್ ಅವರ ನಿವಾಸ ಬೆಂಗಳೂರಿನ ಜೆ ಪಿ ನಗರದಿಂದ ಬೆಳಗ್ಗೆ 6.30ಕ್ಕೆ ಅಭಿಮಾನಿಗಳು ಬೈಕ್ ಜಾಥ ಹೊರಡಲಿದೆ. ಈ ಜಾಥದಲ್ಲಿ ಪ್ರತಿಯೊಬ್ಬ ದರ್ಶನ್ ಅಭಿಮಾನಿಗಳು ಭಾಗಿಯಾಗಬೇಕೆಂದು ದಚ್ಚು ಅಭಿಮಾನಿ ಸಂಘಗಳು ಮನವಿ ಮಾಡಿಕೊಂಡಿದೆ.

ಹೇಗಾದರು ಮಾಡಿ ಸುಮಲತಾ ಅವರನ್ನು ಗೆಲ್ಲಿಸಬೇಕೆಂದು ಪಣ ತೊಟ್ಟಿರುವ ದರ್ಶನ್ ಅವರಿಗೆ ಇದು ಆನೆ ಬಲ ತಂದಂತಾಗಿದೆ. ಈಗಾಗಲೇ ಮಂಡ್ಯದಲ್ಲಿ ಸುಮಲತಾ ಅವರಿಗೆ ಭಾರಿ ದೊಡ್ಡ ಮಟ್ಟದದ ಬೆಂಬಲ ಸಿಕ್ಕಿದೆ. ಇದೀಗ, ದರ್ಶನ್ ಅಭಿಮಾನಿಗಳ ಬೈಕ್ ಜಾಥದ ಶಕ್ತಿ ಪ್ರದರ್ಶನ ಹೇಗಿರುತ್ತೆ ಎಂಬುದು ಕುತೂಹಲ ಹುಟ್ಟುಹಾಕಿದೆ.

More from Filmibeat

English summary
Kannada actor Darshan fans organized bike rally to support sumalatha in mandya lok sabha election. D Boss bike rally will held on this month 31st from Bangalore to Mandya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X