ಯಶ್ 'ಬಾಸ್' ಎಂದ ಪವನ್ ಒಡೆಯರ್ ವಿರುದ್ಧ ಮುಗಿಬಿದ್ದ ಡಿ ಬಾಸ್ ಅಭಿಮಾನಿಗಳು
ಸ್ಯಾಂಡಲ್ ವುಡ್ ನಲ್ಲಿ 'ಬಾಸ್' ಪದ ಆಗಾಗ ಚರ್ಚೆ ಮತ್ತು ವಿವಾದದ ಕೇಂದ್ರವಾಗಿರುತ್ತೆ. ಅಭಿಮಾನಿಗಳು ಅವರವರ ನೆಚ್ಚಿನ ನಟರನ್ನು ಬಾಸ್ ಎಂದು ಕರೆಯುತ್ತಾರೆ. ಆದರೆ ಕೆಲವೊಮ್ಮೆ ಕಲಾವಿದರು ಮತ್ತು ನಿರ್ದೇಶಕರು ಬಾಸ್ ಎನ್ನುವ ಪದ ಬಳಸಿ ಪೇಚಿಗೆ ಸಿಲುಕುತ್ತಾರೆ. ಬಾಸ್ ಪದದ ವಿಚಾರವಾಗಿ ಅನೇಕ ಬಾರಿ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ವಾರ್ ನಡೆದಿದೆ.
Recommended Video
ಈಗ ಮತ್ತೆ ಬಾಸ್ ಪದ ವಿವಾದದ ಕೇಂದ್ರವಾಗಿದ್ದು, ನಿರ್ದೇಶಕ ಪವನ್ ಒಡೆಯರ್ ವಿರುದ್ಧ ದರ್ಶನ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಇತ್ತೀಚಿಗೆ ಪವನ್ ಒಡೆಯರ್ ಯಶ್ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಮಾಡಿದ್ದಾರೆ. ಪೋಸ್ಟ್ ನಲ್ಲಿ ಯಶ್ ಗೆ ಬಾಸ್ ಎಂದು ಉಲ್ಲೇಖ ಮಾಡಿರುವುದು ದರ್ಶನ್ ಅಭಿಮಾನಿಗಳನ್ನು ಕೆರಳಿಸಿದೆ. ಹಾಗಾಗಿ ಪವನ್ ವಿರುದ್ಧ ದರ್ಶನ್ ಅಭಿಮಾನಿಗಳು ಕೆಂಡಕಾರುತ್ತಿದ್ದಾರೆ. ಅಭಿಮಾನಿಗಳು ಅವಾಚ್ಯ ಶಬ್ದಗಳನ್ನು ಬಳಸಿ ಕೆಟ್ಟದಾಗಿ ಟ್ರೋಲ್ ಮಾಡಿ ಕಾಮೆಂಟ್ ಮಾಡುತ್ತಿದ್ದಾರೆ. ಮುಂದೆ ಓದಿ..

ಪವನ್ ಒಡೆಯರ್ ಪೋಸ್ಟ್ ನಲ್ಲಿ ಏನಿದೆ?
ವೈದ್ಯಕೀಯ ಶಿಕ್ಷಣ ಇಲಾಖೆ ವತಿಯಿಂದ ನಿರ್ಮಾಣವಾಗ್ತಿರೊ ಕೊರೊನಾ ಅಭಿಯಾನದ ಹಾಡನ್ನು ನಿರ್ಮಿಸುವ ಜವಾಬ್ದಾರಿ ನಿರ್ದೇಶಕ ಪವನ್ ಒಡೆಯರ್ ಹೊತ್ತುಕೊಂಡಿದ್ದಾರೆ. ಈ ಅಭಿಯಾನದಲ್ಲಿ ರಾಕಿಂಗ್ ಸ್ಟಾರ್ ಯಶ್ ಕೂಡ ಸೇರಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪವನ್ "ಸಾಮಾಜಿಕ ಅಂತರ ಕಾಯ್ದುಕೊಂಡು ಚಿತ್ರೀಕರಣ ಮಾಡಿದ್ದೀವಿ. ಲವ್ ಯು ಬಂಗಾರ ಸಹೋದರ ಬಾಸ್ ಎಂದು ಹೆಮ್ಮೆ ಪಡುತ್ತಾರೆ" ಎಂದು ಬರೆದುಕೊಂಡಿದ್ದಾರೆ.

ರೊಚ್ಚಿಗೆದ್ದ ಡಿ ಬಾಸ್ ಫ್ಯಾನ್ಸ್
"ಸ್ಯಾಂಡಲ್ ವುಡ್ ನಲ್ಲಿ ಬಾಸ್ ಎಂದು ಕರೆಯುವುದು ಒಬ್ಬರನ್ನೆ, ಅದೂ ಡಿ ಬಾಸ್ ಮಾತ್ರ" ಎಂದು ದರ್ಶನ್ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಅಲ್ಲದೆ ನಿರ್ದೇಶಕ ಪವನ್ ಒಡೆಯರ್ ಮತ್ತು ಯಶ್ ವಿರುದ್ಧ ಅವಾಚ್ಯ ಪದಗಳನ್ನು ಬಳಸಿ ಕೆಟ್ಟದಾಗಿ ಟ್ರೋಲ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುತ್ತಿದೆ.

ಬಕೆಟ್ ಹಿಡಿಯುವುದನ್ನು ಬಿಡಿ
ಪವನ್ ಒಡೆಯರ್ ಗೆ ದರ್ಶನ್ ಅಭಿಮಾನಿಗಳು ಬಕೆಟ್ ಹಿಡಿಯುವುದನ್ನು ಮೊದಲು ಬಿಡಿ ಎಂದು ಹೇಳುತ್ತಿದ್ದಾರೆ. ಬಕೆಟ್ ಹಿಡಿದ್ರೆ ಕೊನೆಗೆ ಬಕೆಟ್ ಮಾತ್ರ ಗತಿ ಎನ್ನುತ್ತಿದ್ದಾರೆ. ಅಲ್ಲದೆ ಸ್ಯಾಂಡಲ್ ವುಡ್ ನ ಫ್ಲಾಪ್ ನಿರ್ದೇಶಕ ಎಂದು ಪವನ್ ಅವರನ್ನು ಜರಿಯುತ್ತಿದ್ದಾರೆ.

ಯಶ್ ಬಾಸ್ ವರ್ಸಸ್ ಡಿ ಬಾಸ್
ದರ್ಶನ್ ಅಭಿಮಾನಿಗಳು ರೊಚ್ಚಿಗೇಳುತ್ತಿದ್ದಂತೆ ಯಶ್ ಅಭಿಮಾನಿಗಳು ಸಹ ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಇಬ್ಬರು ಚಿತ್ರಗಳ ಕಲೆಕ್ಷನ್, ಇಬ್ಬರ ಖ್ಯಾತಿ ಸೇರಿದಂತೆ ನಾನಾವಿಚಾರಗಳನ್ನು ಮುಂದಿಟ್ಟುಕೊಂಡು ಕೆಟ್ಟ ಪದಗಳನ್ನು ಬಳಸಿ ತೀರಾ ಕೆಳಮಟ್ಟದ ಟ್ರೋಲ್ ಮಾಡಿ ಕಾಮೆಂಟ್ ಬಾಕ್ಸ್ ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇಬ್ಬರು ಸ್ಟಾರ್ ನಟರ ಅಭಿಮಾನಿಗಳ ವಾರ್ ತಾರಕ್ಕೇರಿದ್ದು, ಸಾಮಾಜಿಕ ಜಾಲತಾಣದಲ್ಲಿ ಕೆಸರೆರಚಾಟ ಮುಂದುವರೆದಿದೆ.

ಕಿತ್ತಾಟದಲ್ಲಿ ಕುಟುಂಬ-ನಟಿಯರನ್ನೂ ಎಳೆದುತಂದ ಫ್ಯಾನ್ಸ್
ಇಬ್ಬರು ಅಭಿಮಾನಿಗಳ ಕಿತ್ತಾಟ ಅತಿರೇಕಕ್ಕೆ ಹೋಗಿದ್ದು, ಕುಟುಂಬದವರನ್ನು ಮತ್ತು ನಟಿಯ ಹೆಸರನ್ನು ಎಳೆದು ತಂದು ಟ್ರೋಲ್ ಮಾಡಿ, ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದಾರೆ. ದರ್ಶನ್ ಪತ್ನಿ, ನಟಿ ರಕ್ಷಿತಾ, ನಿಖಿತಾ, ರಶ್ಮಿಕಾ ಹೆಸರು ಮತ್ತು ಫೋಟೋವನ್ನು ಶೇರ್ ಮಾಡಿ, ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಫೋಟೋವನ್ನು ವಿಕಾರ ಮಾಡಿ ಪೋಸ್ಟ್ ಮಾಡುತ್ತಿದ್ದಾರೆ.

ಈದ್ ಮುಬಾರಕ್ ಅಂದ್ರು ಬಿಟ್ಟಿಲ್ಲ ಅಭಿಮಾನಿಗಳು
ನಿರ್ದೇಶಕ ಪವನ್ ಒಡೆಯರ್ ಇಂದು ಈದ್ ಮುಬಾಕರ್ ಎಂದು ಮುಸ್ಲಿಂ ಬಾಂದವರ ಹಬ್ಬಕ್ಕೆ ಶುಭಕೋರಿದ್ದಾರೆ. ಪವನ್ ಪೋಸ್ಟ್ ಕೆಳಗೆ ಡಿ ಬಾಸ್ ಅಭಿಮಾನಿಗಳ ಕಾಮೆಂಟ್ ಗಳ ಸುರಿಮಳೆಯೇ ಇದೆ. ಸ್ಯಾಂಡಲ್ ವುಡ್ ಗೆ ದರ್ಶನ್ ಒಬ್ರೆ ಬಾಸ್ ದರ್ಶನ್ ಅಭಿಮಾನಿಗಳು ಹೇಳುತ್ತಿದ್ದಾರೆ.

ಒಡೆಯರ್ ಅಂತ ಸಿನಿಮಾ ಮಾಡಬೇಕಿತ್ತು ಪವನ್
ಪವನ್ ಒಡೆಯರ್ ದರ್ಶನ್ ಗೆ 'ವಡೆಯರ್' ಅಂತ ಸಿನಿಮಾ ಮಾಡಿಬೇಕಿತ್ತು. ಅದು ಮಿಸ್ ಆಗಿದೆ. ಹಾಗಾಗಿಯೆ ದರ್ಶನ್ ಮೇಲೆ ಉರ್ಕೊಂಡಿದ್ದಾರೆ ಪವನ್ ಒಡೆಯರ್ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. 'ಶೇಮ್ ಆನ್ ಯೂ ಪವನ್ ಒಡೆಯರ್' ಎಂದು ಹೇಳುತ್ತಿದ್ದಾರೆ. ಅಭಿಮಾನಿಗಳು ಇಷ್ಟೆಲ್ಲ ಕಿತ್ತಾಡಿಕೊಂಡರೊ ಪವನ್ ಒಡೆಯರು ಯಾವುದೆ ಪ್ರತಿಕ್ರಿಯೆ ನೀಡಿಲ್ಲ.


Click it and Unblock the Notifications











