KCC Cricket 3: ಬಾಸ್ ಬಾಸ್ ಡಿ ಬಾಸ್: ದರ್ಶನ್ ಫೀಲ್ಡ್‌ನಲ್ಲಿ ಇಲ್ದೇ ಇದ್ರು, ಸೆಲೆಬ್ರೆಟಿಗಳದ್ದೇ ಆಟ, ಆರ್ಭಟ
ಸ್ಯಾಂಡಲ್‌ವುಡ್‌ನಲ್ಲಿ ಈಗ ಕ್ರಿಕೆಟ್ ಕಲವರ ಜೋರಾಗಿದೆ. 'ಕನ್ನಡ ಚಲನಚಿತ್ರ ಕಪ್' 3ನೇ ಆವೃತ್ತಿ ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೀತಿದೆ. ಕನ್ನಡ ಚಿತ್ರರಂಗದ ಕಲಾವಿದರ ಜೊತೆ ಅಂತರಾಷ್ಟ್ರೀಯ ಕ್ರಿಕೆಟ್ ತಾರೆಯರು ಕೂಡ ಒಂದೊಂದು ತಂಡದಲ್ಲಿ ಆಡುತ್ತಿದ್ದಾರೆ. ಸ್ಯಾಂಡಲ್‌ವುಡ್ ಸ್ಟಾರ್ ನಟರೆಲ್ಲಾ ಸರಣಿಯಲ್ಲಿ ಭಾಗವಹಿಸಿದ್ದಾರೆ. ಆದರೆ ದರ್ಶನ್ ಹಾಗೂ ಯಶ್ ಮಾತ್ರ ಆಡುತ್ತಿಲ್ಲ.
ನಟ ದರ್ಶನ್ ಕೆಸಿಸಿ ಕ್ರಿಕೆಟ್ ಪಂದ್ಯಗಳಲ್ಲಿ ಆಡದೇ ಇದ್ದರೂ ಸ್ಟೇಡಿಯಂನಲ್ಲಿ ದರ್ಶನ್ ಅಭಿಮಾನಿಗಳ ಕಾರುಬಾರು ಜೋರಾಗಿದೆ. 'ಬಾಸ್ ಬಾಸ್ ಡಿ ಬಾಸ್' ಎನ್ನುವ ಕೂಗು ಪದೇ ಪದೇ ಕೇಳಿಬರ್ತಿದೆ. ಅದಕ್ಕೆ ಸಂಬಂಧಿಸಿದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಕ್ರಿಕೆಟ್ ಆಡುತ್ತಿದ್ದಾರೆ ಎಂದುಕೊಂಡು ಅವರನ್ನು ನೋಡಲು ಕೆಲ ಅಭಿಮಾನಿಗಳು ಸ್ಟೇಡಿಯಂಗೆ ಬಂದಿದ್ದರು.

ಕನ್ನಡ ಚಿತ್ರರಂಗದ ತಾರೆಯರು ಒಟ್ಟು ಆರು ತಂಡಗಳಾಗಿ ಕೆಸಿಸಿ 3ನೇ ಆವೃತ್ತಿಯಲ್ಲಿ ಸೆಣಸಾಡುತ್ತಿದ್ದಾರೆ. ಒಡೆಯರ್ ಚಾರ್ಜರ್ಸ್ ತಂಡವನ್ನು ನಟ ಶಿವರಾಜ್‌ಕುಮಾರ್ ಮುನ್ನಡೆಸುತ್ತಿದ್ದಾರೆ. ಹೊಯ್ಸಳ ಈಗಲ್ಸ್ ತಂಡಕ್ಕೆ ಸುದೀಪ್ ಕ್ಯಾಪ್ಟನ್. ಇನ್ನು ವಿಜಯನಗರ ಪೇಟ್ರಿಯಾಟ್ಸ್ ತಂಡದ ಸಾರಥ್ಯವನ್ನು ಉಪೇಂದ್ರ ವಹಿಸಿಕೊಂಡಿದ್ದಾರೆ. ಗಂಗಾ ವಾರಿಯರ್ಸ್ ತಂಡಕ್ಕೆ ಧನಂಜಯ್ ನಾಯಕನಾದರೆ ಕದಂಬ ಲಯನ್ಸ್ ತಂಡಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ನಾಯಕ. ಇನ್ನು ಧ್ರುವ ಸರ್ಜಾ ಮುಂದಾಳತ್ವದಲ್ಲಿ ರಾಷ್ಟ್ರಕೂಟ ಪ್ಯಾಂಥರ್ಸ್ ತಂಡ ಆಡುತ್ತಿದೆ.
ಈ ಹಿಂದೆ ಸಿಸಿಎಲ್‌ನಲ್ಲಿ ಆಡಿದ್ದ ನಟ ದರ್ಶನ್, ಕೆಸಿಸಿ 3 ಸೀಸನ್‌ನಲ್ಲೂ ಆಡಿಲ್ಲ. ಇನ್ನು ಇತ್ತೀಚೆಗೆ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ರಿಲೀಸ್ ಆಗಿ ಸಖತ್ ಸದ್ದು ಮಾಡಿತ್ತು. ಸದ್ಯ ಓಟಿಟಿಯಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಆದರೂ ಕೆಲವೆಡೆ ಥಿಯೇಟರ್‌ಗಳಲ್ಲಿ ಸಿನಿಮಾ ಪ್ರದರ್ಶನ ಕಾಣ್ತಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಭಿಮಾನಿಗಳು ದರ್ಶನ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.

'ಕ್ರಾಂತಿ' ಸಿನಿಮಾ ನಂತರ ದರ್ಶನ್ 'ಕಾಟೇರ' ಆಗಿ ಪ್ರೇಕ್ಷಕರನ್ನು ರಂಜಸಲು ಬರ್ತಿದ್ದಾರೆ. ವರಲಕ್ಷ್ಮಿ ಹಬ್ಬದ ಸಂಭ್ರಮದಲ್ಲೇ ಸಿನಿಮಾ ಮುಹೂರ್ತ ನೆರವೇರಿಸಿ ಚಿತ್ರೀಕರಣ ಆರಂಭಿಸಲಾಗಿತ್ತು. ಇತ್ತೀಚಿಗೆ ದರ್ಶನ್ ಹುಟ್ಟುಹಬ್ಬದ ವೇಳೆ ಸಿನಿಮಾ ಟೈಟಲ್ ಮೋಷನ್ ಪೋಸ್ಟರ್ ರಿಲೀಸ್ ಆಗಿತ್ತು. ಅದಕ್ಕೆ ಭರ್ಜರಿ ರೆಸ್ಪಾನ್ಸ್ ಕೂಡ ಸಿಗ್ತಿದೆ. 70ರ ದಶಕದಲ್ಲಿ ಹಂಪಿಯಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿ ತರುಣ್ ಸುಧೀರ್ ಈ ಸಿನಿಮಾ ಕಟ್ಟಿಕೊಡುತ್ತಿದ್ದಾರೆ.
ನಿನ್ನೆ ಶುಕ್ರವಾರ ಒಟ್ಟು ಮೂರು ಪಂದ್ಯಗಳು ನಡೀತು. ಮೊದಲ ಪಂದ್ಯದಲ್ಲಿ ಧನಂಜಯ್ ಸಾರಥ್ಯದ ಗಂಗಾ ವಾರಿಯರ್ಸ್ ಹಾಗೂ ಸುದೀಪ್ ಸಾರಥ್ಯದ ಹೊಯ್ಸಳ ಈಗಲ್ಸ್ ತಂಡಗಳು ಸೆಣೆಸಿದ್ದವು. ಈ ಪಂದ್ಯದಲ್ಲಿ ಗಂಗಾ ವಾರಿಯರ್ಸ್ ಗೆಲುವು ಸಾಧಿಸಿತ್ತು. 2ನೇ ಪಂದ್ಯದಲ್ಲಿ ಮತ್ತೆ ಸುದೀಪ್ ಅವರ ಹೊಯ್ಸಳ ಈಗಲ್ಸ್ ಹಾಗೂ ಶಿವಣ್ಣನ ಒಡೆಯರ್ ಚಾರ್ಜರ್ಸ್ ನಡುವಿನ ಪಂದ್ಯದಲ್ಲಿ ಹೊಯ್ಸಳ ತಂಡ ಗೆದ್ದಿತ್ತು.
ಇನ್ನು 3ನೇ ಪಂದ್ಯದಲ್ಲಿ ಧ್ರುವ ಸರ್ಜಾ ನಾಯಕತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ಮತ್ತು ಕದಂಬ ಲಯನ್ಸ್ ಎದುರುಬದಿರಾಗಿದ್ದವು. ಈ ಪಂದ್ಯದಲ್ಲಿ ಕದಂಬ ಲಯನ್ಸ್ ತಂಡಕ್ಕೆ ಗೆಲುವು ಸಿಕ್ಕಿತ್ತು.


Click it and Unblock the Notifications











