ಆರೋಪದಿಂದ ದರ್ಶನ್ ಫ್ಯಾನ್ಸ್ ಆಕ್ರೋಶ : ಕಿಚ್ಚನಿಗೆ ಡಿ ಬಾಸ್ ಹುಡುಗರ ಪ್ರಶ್ನೆ!

Recommended Video

Pailwaan : ಕಿಚ್ಚನಿಗೆ ಡಿ ಬಾಸ್ ಹುಡುಗರ ಪ್ರಶ್ನೆ! | FILMIBEAT KANNADA

ಸುದೀಪ್ ನಟನೆಯ 'ಪೈಲ್ವಾನ್' ಸಿನಿಮಾ ಪೈರಸಿ ಆದ ಸುದ್ದಿ ಎಲ್ಲರಿಗೂ ತಿಳಿದಿದೆ. ಈ ವಿಷಯ ಚಿತ್ರತಂಡ ಗಮನಕ್ಕೂ ಕೂಡ ಬಂದಿದೆ. ಆದರೆ, ಇದೀಗ ಚಿತ್ರದ ಪೈರಸಿ ಆರೋಪ ದರ್ಶನ್ ಫ್ಯಾನ್ಸ್ ಮೇಲೆ ಬಂದಿದೆ.

ಖಾಲಿ ಚಿತ್ರಮಂದಿರದ ವಿಡಿಯೋ ವೈರಲ್ ಮಾಡಿರುವುದು, ಸಿನಿಮಾದ ಬಗ್ಗೆ ನೆಗೆಟಿವ್ ಕಾಮೆಂಟ್ಸ್ ಹಬ್ಬಿಸುವುದು, ಕೊನೆಗೆ ಸಿನಿಮಾದ ಪೈರಸಿ ಮಾಡಿರುವುದು. ಇದೆಲ್ಲ ದರ್ಶನ್ ಅಭಿಮಾನಿಗಳು ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ.

ಇಂತಹ ಮಾತುಗಳನ್ನು 'ಪೈಲ್ವಾನ್' ಚಿತ್ರತಂಡ ಮಾಡಿಲ್ಲ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಈ ರೀತಿ ಮಾತು ಹೆಚ್ಚಾಗಿದೆ. ಅದೇ ರೀತಿ ಮಂಜು ಡಿ ಬಾಸ್ ಎನ್ನುವ ಫೇಸ್ ಬುಕ್ ಖಾತೆಯಲ್ಲಿ ಚಿತ್ರದ ಪೂರ್ಣ ವಿಡಿಯೋ ಹಾಕಲಾಗಿತ್ತು.

ಈ ರೀತಿ ತಮ್ಮ ಮೇಲೆ ಬಂದಿರುವ ಆರೋಪಕ್ಕೆ ದರ್ಶನ್ ಅಭಿಮಾನಿಗಳು ಸಿಡಿದ್ದೆದಿದ್ದಾರೆ. ಈ ವಿಚಾರವಾಗಿ ನೇರವಾಗಿ ಸಿನಿಮಾದ ನಟ ಸುದೀಪ್ ಹಾಗೂ ನಿರ್ದೇಶಕ ಕೃಷ್ಣಗೆ ಪ್ರಶ್ನೆ ಮಾಡುತ್ತಿದ್ದಾರೆ.

ಪೈರಸಿ ಮಾಡಿರುವುದು ನಾವಲ್ಲ

ಪೈರಸಿ ಮಾಡಿರುವುದು ನಾವಲ್ಲ

'ಪೈಲ್ವಾನ್' ಸಿನಿಮಾದ ಪೈರಸಿ ಆದ ಬಗ್ಗೆ ದರ್ಶನ್ ಅಭಿಮಾನಿಗಳು ಟ್ವಿಟ್ಟರ್ ಖಾತೆಗಳಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸಿನಿಮಾದ ಪೈರಸಿ ಮಾಡಿರುವುದು ನಾವಲ್ಲ. ಸಿನಿಮಾ ಲೀಕ್ ಆಗಿರುವುದು ತಮಿಳು ರಾಕರ್ಸ್ ವೆಬ್ ಸೈಟ್ ನಲ್ಲಿ ಹೀಗಾಗಿ ಚಿತ್ರದ ಪೈರಸಿ ಆಗಿರುವುದಕ್ಕೆ ದರ್ಶನ್ ಅಭಿಮಾನಿಗಳನ್ನು ದೂರವುದು ಸರಿಯಲ್ಲ ಎಂದಿದ್ದಾರೆ.

ನಿಜವಾದ ಕಳ್ಳರನ್ನು ಹಿಡಿಯಿರಿ

ನಿಜವಾದ ಕಳ್ಳರನ್ನು ಹಿಡಿಯಿರಿ

''ಒಬ್ಬರನ್ನ ಕಂಡರೆ ಇನ್ನೊಬ್ಬರಿಗೆ ಆಗಲ್ಲ ಎಂದ ಮಾತ್ರಕ್ಕೆ ಅವರೇ ಮಾಡಿಸಿದ್ದು ಅಂತಲ್ಲ. ಅಥವಾ ಅವರಿಗೆ ಸಂಬಂಧ ಪಟ್ಟವರು ಮಾಡಿದ್ದು ಅಂತಲ್ಲ, ನಿಜವಾದ ಕಳ್ಳರನ್ನು ಹಿಡಿಯಿರಿ, ಆಮೇಲೆ ಇನ್ನೊಬರ ಕಡೆ ಬೆರಳು ಮಾಡಿ ತೋರಿಸಿ'' ಎಂದು ದಿಟ್ಟವಾಗಿ ನಾವು ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ. ನಟ ಸುದೀಪ್ ಟ್ವಿಟ್ಟರ್ ಹ್ಯಾಂಡಲ್ ಬಳಿಸಿ ಪ್ರಶ್ನೆ ಕೇಳಿದ್ದಾರೆ.

ಕೆಲವರಿಂದ ಹಲವರಿಗೆ ಕೆಟ್ಟ ಹೆಸರು

ಕೆಲವರಿಂದ ಹಲವರಿಗೆ ಕೆಟ್ಟ ಹೆಸರು

ದರ್ಶನ್ ಅಭಿಮಾನಿಗಳು ನಾವು ಈ ರೀತಿ ಮಾಡಿಲ್ಲ ಎಂದು ಹೇಳುತ್ತಿರುವುದು ಸತ್ಯ. ಆದರೆ, ದರ್ಶನ್ ಹೆಸರನ್ನು ಬಳಕೆ ಮಾಡಿರುವ ಕೆಲವು ಫೇಸ್ ಬುಕ್ ಖಾತೆಯಲ್ಲಿ 'ಪೈಲ್ವಾನ್' ಚಿತ್ರದ ಬಗ್ಗೆ ಕೆಟ್ಟ ಕೆಟ್ಟದಾಗಿ ಬರೆಯಲಾಗಿದೆ. ಸಿನಿಮಾದ ಬಗ್ಗೆ ನೆಗೆಟಿವ್ ಪಬ್ಲಿಸಿಟಿ ಮಾಡಲಾಗುತ್ತಿದೆ. ನಟನ ಹೆಸರಿನಲ್ಲಿ ಕೆಲವು ಅಭಿಮಾನಿಗಳು ಮಾಡುವ ಇಂತಹ ಕೆಲಸಗಳಿಂದ ಒಳ್ಳೆಯ ಅಭಿಮಾನಿಗಳಿಗೂ ಕೆಟ್ಟ ಹೆಸರು ಬರುತ್ತಿದೆ.

'ಯಜಮಾನ', 'ಕುರುಕ್ಷೇತ್ರ' ಚಿತ್ರವೂ ಪೈರಸಿ ಆಗಿತ್ತು

'ಯಜಮಾನ', 'ಕುರುಕ್ಷೇತ್ರ' ಚಿತ್ರವೂ ಪೈರಸಿ ಆಗಿತ್ತು

'ಪೈಲ್ವಾನ್' ಸಿನಿಮಾದ ಪೈರಸಿ ವಿರುದ್ಧ ಕನ್ನಡದ ಕೆಲವು ಸ್ಟಾರ್ ಗಳು, ನಿರ್ದೇಶಕರುಗಳು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೂ ಪ್ರತಿಕ್ರಿಯೆ ನೀಡಿರುವ ದರ್ಶನ್ ಅಭಿಮಾನಿಗಳು, 'ಯಜಮಾನ', 'ಕುರುಕ್ಷೇತ್ರ' ಸಿನಿಮಾಗಳು ಪೈರಸಿ ಆಗಿತ್ತು. ಆದರೆ, ಆಗ ಏಕೆ ಸುಮ್ಮನೆ ಇದ್ರಿ..? ಎಂದು ಕೇಳಿದ್ದಾರೆ.

ಸ್ಟಾರ್ ಗಳ ಹೆಸರನ್ನು ಹಾಳು ಮಾಡುವ ಕಿಡಿಗೇಡಿಗಳು

ಸ್ಟಾರ್ ಗಳ ಹೆಸರನ್ನು ಹಾಳು ಮಾಡುವ ಕಿಡಿಗೇಡಿಗಳು

ಒಬ್ಬ ನಟನ ಮೇಲೆ ಅಭಿಮಾನ ಇದ್ದರೆ, ಇನ್ನೊಬ್ಬ ನಟನನ್ನು ದ್ವೇಷ ಮಾಡಬೇಕು ಎಂದೇನೂ ಇಲ್ಲ. ಸ್ಟಾರ್ ಗಳ ಹೆಸರನ್ನು ಬಳಕೆ ಮಾಡುವ ಇಂತಹ ಕೃತ್ಯಗಳು ನಟರ ನಡುವಿನ ಬಿರುಕನ್ನು ಹೆಚ್ಚು ಮಾಡುತ್ತದೆ. ಇದೆಲ್ಲ ನೋಡಿದರೆ, ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ವಾರ್ ಬೇರೆ ರೂಪವನ್ನು ಪಡೆದುಕೊಳ್ಳುತ್ತಿದೆ ಎನಿಸುತ್ತದೆ.

More from Filmibeat

English summary
Actor Darshan fans says that they are not involved in Pailwaan movie piracy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X