ಪಠಾಣ್ ನೋಡಿ ಕೊಂಡಾಡಿ ಕ್ರಾಂತಿ ಮರೆತ ರಮ್ಯಾ; ನಿಮ್ಮ ಚಿತ್ರ ಇದೆ ಮರೆಯಬೇಡಿ ಎಂದ ದರ್ಶನ್ ಫ್ಯಾನ್ಸ್!

ಕನ್ನಡದ ಚಿತ್ರಗಳು ಹಾಗೂ ಪರಭಾಷಾ ಚಿತ್ರಗಳು ಬಾಕ್ಸ್ ಆಫೀಸ್ ರೇಸ್‌ಗೆ ಇಳಿದಾಗ ಎಷ್ಟೇ ಫ್ಯಾನ್ ವಾರ್ ಇದ್ದರೂ ಸಹ ಕನ್ನಡ ಸಿನಿ ರಸಿಕರು ಪರಭಾಷಾ ಸಿನಿಮಾಗೆ ಜೈ ಎನ್ನದೇ ಕನ್ನಡ ಚಿತ್ರಗಳಿಗೆ ಬೆಂಬಲ ನೀಡಿದ ಹಲವಾರು ಉದಾಹರಣೆಗಳಿವೆ. ಇನ್ನು ಕನ್ನಡ ಸಿನಿ ರಸಿಕರು ಮಾತ್ರವಲ್ಲದೇ ಕನ್ನಡ ಸಿನಿಮಾ ರಂಗದ ಕಲಾವಿದರೂ ಸಹ ಕನ್ನಡ ಚಿತ್ರಗಳು ಬಿಡುಗಡೆಯಾದಾಗ ಆ ಚಿತ್ರಗಳ ಬಗ್ಗೆ ಟ್ವೀಟ್ ಮಾಡಿ ಶುಭಕೋರಿ ಚಿತ್ರ ಗೆಲ್ಲಲಿ ಎಂದು ಆಶಿಸುತ್ತಾರೆ.

ಆದರೆ ಕಲೆವೊಂದು ಬಾರಿ ಕನ್ನಡದ ಕಲಾವಿದರು ಕನ್ನಡ ಹಾಗೂ ಪರಭಾಷಾ ಚಿತ್ರಗಳು ಒಂದೇ ಸಮಯದಲ್ಲಿ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುವಾಗ ಕನ್ನಡ ಸಿನಿಮಾ ನೋಡದೇ ಅಥವಾ ಆ ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಪೋಸ್ಟ್ ಹಾಕದೇ ಪರಭಾಷಾ ಚಿತ್ರವನ್ನು ನೋಡಿ ಬೆಂಬಲಿಸಿ ಭಾರೀ ಟೀಕೆಗೆ ಒಳಗಾದ ಉದಾಹರಣೆಗಳಿವೆ. ಅದರಲ್ಲೂ ಕನ್ನಡದ ಬಿಗ್ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾದಾಗ ಅಥವಾ ಕನ್ನಡ ಚಿತ್ರವೊಂದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದಾಗ ಅಂತಹ ಚಿತ್ರಗಳನ್ನು ನೋಡದವರು ಟ್ರೋಲ್‌ಗೆ ಒಳಗಾಗುವುದು ಸಹಜ.

ಇದಕ್ಕೆ ಉತ್ತಮ ಉಹಾಹರಣೆ ಎಂದರೆ ಕಳೆದ ವರ್ಷ ಕಾಂತಾರ ಚಿತ್ರ ಬಿಡುಗಡೆಯಾದಾಗ ನಟಿ ರಶ್ಮಿಕಾ ಮಂದಣ್ಣ ಕಾಂತಾರ ಚಿತ್ರವನ್ನು ನೋಡಿಲ್ಲ ಎಂದು ಆಕೆಯ ಮೇಲೆ ತೀವ್ರ ಟ್ರೋಲ್ ಉಂಟಾಗಿದ್ದು, ಇಡೀ ಭಾರತ ಚಿತ್ರರಂಗವನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಕನ್ನಡ ಚಿತ್ರ ಕಾಂತಾರವನ್ನು ನೋಡದಷ್ಟು ಸೊಕ್ಕು ಒಳ್ಳೆಯದಲ್ಲ ಎಂದು ಕನ್ನಡಿಗರು ರಶ್ಮಿಕಾಗೆ ಕ್ಲಾಸ್ ತೆಗೆದುಕೊಂಡಿದ್ದರು. ಇದೀಗ ಅದೇ ರೀತಿ ನಟಿ ರಮ್ಯಾಗೆ ದರ್ಶನ್ ಅಭಿಮಾನಿಗಳು ಕ್ಲಾಸ್ ತೆಗೆದುಕೊಳ್ಳಲು ಆರಂಭಿಸಿದ್ದಾರೆ. ಇದಕ್ಕೆ ಕಾರಣ ರಮ್ಯಾ ನಟ ದರ್ಶನ್ ನಟನೆಯ ಕ್ರಾಂತಿ ಚಿತ್ರ ಚಿತ್ರಮಂದಿರದಲ್ಲಿ ಇರುವ ಸಮಯದಲ್ಲಿಯೇ ಹಿಂದಿಯ ಪಠಾಣ್ ವೀಕ್ಷಿಸಿ ಸಾಮಾಜಿಕ ಜಾಲತಾಣದಲ್ಲಿ ಆ ಚಿತ್ರವನ್ನು ಕೊಂಡಾಡಿರುವುದು.

ಪಠಾಣ್‌ಗೆ ರಮ್ಯಾ ಬಹುಪರಾಕ್!

ಪಠಾಣ್‌ಗೆ ರಮ್ಯಾ ಬಹುಪರಾಕ್!

ಕ್ರಾಂತಿ ಚಿತ್ರ ತೆರೆ ಕಾಣುವ ಒಂದು ದಿನ ಮುಂಚಿತವಾಗಿ ಬಿಡುಗಡೆಗೊಂಡ ಪಠಾಣ್ ಚಿತ್ರವನ್ನು ನಟಿ ರಮ್ಯಾ ವೀಕ್ಷಿಸಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಚಿತ್ರದ ಬಗ್ಗೆ ಬರೆದುಕೊಂಡು ಕೊಂಡಾಡಿದ್ದಾರೆ. ಚಿತ್ರದಲ್ಲಿ ನಟಿಸಿರುವ ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಮ್, ಡಿಂಪಲ್ ಕಪಾಡಿಯಾ ಹಾಗೂ ಸಲ್ಮಾನ್ ಖಾನ್ ನಟನೆಯನ್ನು ಶ್ಲಾಘಿಸಿರುವ ರಮ್ಯಾ ಪಠಾಣ್ ಹಾಲಿವುಡ್ ರೇಂಜ್‌ನಲ್ಲಿದೆ ಎಂದಿದ್ದಾರೆ. ರಮ್ಯಾ 28 ಜನವರಿ ಈ ಪಠಾಣ್ ಚಿತ್ರವನ್ನು ವೀಕ್ಷಿಸಿ ಟ್ವಿಟರ್‌ನಲ್ಲಿ ಕೊಂಡಾಡಿದ್ದಾರೆ.

ರಮ್ಯಾ ವಿರುದ್ಧ ದರ್ಶನ್ ಫ್ಯಾನ್ಸ್ ಕಿಡಿ

ರಮ್ಯಾ ವಿರುದ್ಧ ದರ್ಶನ್ ಫ್ಯಾನ್ಸ್ ಕಿಡಿ

ಹೀಗೆ ರಮ್ಯಾ ಪಠಾಣ್ ಚಿತ್ರವನ್ನು ಕೊಂಡಾಡಿ ಪೋಸ್ಟ್ ಮಾಡಿದ ಬೆನ್ನಲ್ಲೇ ದರ್ಶನ್ ಅಭಿಮಾನಿಗಳು ಸಾಲು ಸಾಲು ರಿಪ್ಲೈ ಮಾಡಿ ರಮ್ಯಾ ವಿರುದ್ಧ ಕಿಡಿಕಾರಿದ್ದಾರೆ. ಓರ್ವ ಕನ್ನಡ ನಟಿಯಾಗಿ, ಕನ್ನಡಿಗರ ಬೆಂಬಲದಿಂದ ಇಷ್ಟು ಎತ್ತರಕ್ಕೆ ಬೆಳೆದು ಈಗ ಕನ್ನಡ ಚಿತ್ರದೆದುರು ಬಿಡುಗಡೆಯಾಗಿರುವ ಹಿಂದಿ ಚಿತ್ರಕ್ಕೆ ಬೆಂಬಲ ನೀಡುತ್ತೀರಲ್ಲಾ ನಿಮಗೆ ಭಾಷಾಭಿಮಾನ ಇಲ್ವಾ ಎಂದು ಪ್ರಶ್ನೆ ಹಾಕಿದ್ದಾರೆ. ಇದೇ ವಿಚಾರವಾಗಿ ಹಲವಾರು ಕಾಮೆಂಟ್ ಬಂದಿದ್ದು, ಕ್ರಾಂತಿ ಚಿತ್ರದ ಬಗ್ಗೆ ಒಂದೇ ಒಂದು ಪೋಸ್ಟ್ ಹಾಕದೇ ಹಿಂದಿ ಚಿತ್ರಕ್ಕೆ ಬೆಂಬಲಿಸುವಷ್ಟು ಧಿಮಾಕು ಎಂದು ರಮ್ಯಾ ವಿರುದ್ಧ ಕೆಂಡಕಾರಿದ್ದಾರೆ.

ನಿಮ್ಮ ಚಿತ್ರವೂ ಇದೆ ಮರೆಯಬೇಡಿ!

ನಿಮ್ಮ ಚಿತ್ರವೂ ಇದೆ ಮರೆಯಬೇಡಿ!

ಹೀಗೆ ರಮ್ಯಾ ವಿರುದ್ಧ ಕಿಡಿಕಾರಿರುವ ದರ್ಶನ್ ಫ್ಯಾನ್ಸ್ ಇವಾಗ ನೀವೇನೋ ಕ್ರಾಂತಿ ನೋಡದೇ ಹಿಂದಿ ಚಿತ್ರ ನೋಡಿ ಬೆಂಬಲ ನೀಡ್ತಾ ಇದ್ದೀರ, ಆದರೆ ನಿಮ್ಮ ನಿರ್ಮಾಣದ ಕನ್ನಡ ಚಿತ್ರವೊಂದು ಬಿಡುಗಡೆಯಾಗಲಿದೆ ಎಂಬುದನ್ನು ಮರೆಯಬೇಡಿ ಎಂದು ರಮ್ಯಾಗೆ ನಿಮ್ಮ ಚಿತ್ರವನ್ನು ವೀಕ್ಷಿಸುವುದಿಲ್ಲ ಎಂದು ಪರೋಕ್ಷವಾಗಿ ವಾರ್ನಿಂಗ್ ನೀಡಿದ್ದಾರೆ. ಇನ್ನು ರಮ್ಯಾ ನಿರ್ಮಾಪಕಿಯಾಗಿ ನಿರ್ಮಿಸಿರುವ ಮೊದಲ ಚಿತ್ರ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ನಿರ್ದೇಶನವಿದ್ದು, ನಾಯಕನಾಗಿಯೂ ಬಣ್ಣ ಹಚ್ಚಿದ್ದಾರೆ ಹಾಗೂ ನಾಯಕಿಯಾಗಿ ಸಿರಿ ರವಿಕುಮಾರ್ ನಟಿಸಿದ್ದಾರೆ.

More from Filmibeat

English summary
Darshan fans slams Ramya as she watched and praised Pathaan instead of Kranti. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X