ಕೊರೊನಾ ಸಂಕಷ್ಟದಲ್ಲಿ ದರ್ಶನ್ ಅಭಿಮಾನಿಗಳು ಮೆರೆದ ಮಾನವೀಯತೆ
ಕೊರೊನಾ ವೈರಸ್ ಭೀತಿಯಿಂದ ಇಡೀಯ ವಿಶ್ವವೇ ಸ್ಥಬ್ದವಾಗಿದೆ. ಮಾವನೀಯತೆ ಎಂಬುದು ಬಹುತೇಕ ಸತ್ತು ಹೋಗುತ್ತಿದೆ. ಆದರೆ ಈ ಸಮಯದಲ್ಲೂ ಸಹ ಕೆಲವರು ತಮ್ಮಲ್ಲಿರುವ ಮಾನವೀಯತೆಯನ್ನು ಸಾಯಲು ಬಿಟ್ಟಿಲ್ಲ, ಅದರಲ್ಲಿ ದರ್ಶನ್ ಅವರ ಕೆಲವು ಅಭಿಮಾನಿಗಳು ಸಹ ಇದ್ದಾರೆ.
Recommended Video
ಹೌದು, ಕೊರೊನಾ ಭೀತಿಯಿಂದ ಜನರು ಹೊರಗೆ ಬರುವುದೇ ಬಿಟ್ಟಿದ್ದಾರೆ. ಮತ್ತೊಬ್ಬರನ್ನು ಮುಟ್ಟುವುದು, ಮಾತನಾಡಿಸುವುದನ್ನೇ ಮರೆತಿದ್ದಾರೆ. ಹೀಗಿರುವಾಗ ದರ್ಶನ ಅಭಿಮಾನಿಗಳು ಸಾಮಾಜಿಕ ಕಾರ್ಯಕ್ಕೆ ಮುಂದಾಗಿದ್ದಾರೆ.
ಇಡೀಯ ರಾಜ್ಯವೇ ಲಾಕ್ ಡೌನ್ ಆಗಿರುವಾಗ ಮೈಸೂರಿನ ದರ್ಶನ್ ಅಭಿಮಾನಿಗಳು ಆಹಾರ ತಯಾರಿಸಿ ಅಗತ್ಯ ಇರುವವರಿಗೆ ತಲುಪಿಸುವ ಕಾರ್ಯವನ್ನು ಮಾಡಿದ್ದಾರೆ.
ಲಾಕ್‌ಡೌನ್ ಆಗಿರುವ ಪರಿಣಾಮ ಹೋಟೆಲ್‌ಗಳು ಸೇರಿ ಹಲವು ಅಂಗಡಿಗಳು ಬಾಗಿಲು ತೆರೆದಿಲ್ಲ ಇದರಿಂದಾಗಿ ಹಲವರಿಗೆ ಊಟ ಸಹ ಸಿಗದೇ ಆಗಿದೆ. ಇಂಥಹವರ ನೆರವಿಗೆ ಬಂದಿದ್ದಾರೆ ದರ್ಶನ್ ಅಭಿಮಾನಿಗಳು.
ಮೈಸೂರಿನ ದರ್ಶನ್ ಅಭಿಮಾನಿಗಳ ಮೆಚ್ಚುವ ಕಾರ್ಯ
ಮೈಸೂರಿನಲ್ಲಿ ದರ್ಶನ್ ಅವರ ಅಭಿಮಾನಿಗಳು ಆಹಾರ ತಯಾರಿಸಿ ಅಗತ್ಯ ಇದ್ದವರಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಇವರ ಈ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.

ಹಸಿದವರಿಗೆ ಅನ್ನ ನೀಡುತ್ತಿದ್ದಾರೆ ದರ್ಶನ್ ಅಭಿಮಾನಿಗಳು
ಮೈಸೂರಿನ ದರ್ಶನ್ ಅಭಿಮಾನಿಗಳು ಟೊಮೆಟೋ ಬಾತ್, ಮೊಸರನ್ನ ತಯಾರಿಸಿ ಅಗತ್ಯ ಇದ್ದವರಿಗೆ ಹಂಚುತ್ತಿದ್ದಾರೆ. ಜೊತೆಗೆ ಕುಡಿಯುವ ನೀರನ್ನೂ ಸಹ ವಿತರಣೆ ಮಾಡುತ್ತಿದ್ದಾರೆ.

ಅವಶ್ಯಕತೆ ಇದ್ದವರು ಕರೆ ಮಾಡಿ
ಮೈಸೂರಿನಲ್ಲಿ ಆಹಾರ ಜೋಳಿಗೆ ನಡೆಸುತ್ತಿರುವ ರಾಜೇಂದ್ರ ಅವರೊಂದಿಗೆ ಸೇರಿ ದರ್ಶನ್ ಅಭಿಮಾನಿಗಳು ಹಸಿದವರ ಹೊಟ್ಟೆ ತುಂಬಿಸುವ ಕಾರ್ಯ ಮಾಡುತ್ತಿದ್ದಾರೆ. ಯಾರಿಗೇ ಆಹಾರದ ಅವಶ್ಯಕವಿದ್ದರೂ ಸಹ ಆಹಾರ ಜೋಳಿಗೆಯನ್ನು ಸಂಪರ್ಕ ಮಾಡುವಂತೆ ಕೋರಿದ್ದಾರೆ.

ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ದರ್ಶನ್
ಸ್ವತಹ ದರ್ಶನ್ ಸಹ ಹಲವು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ತಮ್ಮ ಅಭಿಮಾನಿಗಳಿಗೆ ಸಮಸ್ಯೆ ಆದಾಗ ದರ್ಶನ್ ಸಹಾಯಕ್ಕೆ ಹಾಜರಾಗುತ್ತಾರೆ. ತಾವು ತೆಗೆದ ಚಿತ್ರಗಳನ್ನು ಮಾರಿ ಬಂದ ಹಣದಿಂದ ವನ್ಯಜೀವಿಗಳ ಅಭಿವೃದ್ಧಿಗೆ ಸಹಾಯ ಮಾಡುತ್ತಾರೆ.


Click it and Unblock the Notifications











