ರೋಡ್ ಗೆ ಇಳಿದ ಡಿ ಬಾಸ್ ಕಾರಿನ ಜೊತೆ ಅಭಿಮಾನಿಗಳ ಫೋಟೋ
Recommended Video

ನಟ ದರ್ಶನ್ ಇತ್ತೀಚಿಗಷ್ಟೆ ಮತ್ತೊಂದು ಹೊಸ ಕಾರನ್ನು ಖರೀದಿ ಮಾಡಿದ್ದರು. ಆದರೆ ಈಗ ಈ ಕಾರ್ ಅಭಿಮಾನಿಗಳ ಆಕರ್ಷಣೆಗೆ ಕಾರಣ ಆಗಿದೆ. ದರ್ಶನ್ ಅವರ ಅಭಿಮಾನಿಗಳು ಇದೀಗ ಆ ಕಾರ್ ಜೊತೆಗೆ ಫೋಟೋ ತೆಗೆದುಕೊಳ್ಳುತ್ತಿದ್ದಾರೆ.
ದರ್ಶನ್ ಅವರ ಫೋರ್ಡ್ ಮಸ್ಟಂಗ್ (ford mustang) ಈಗ ರೋಡಿಗೆ ಇಳಿದಿದೆ. ದರ್ಶನ್ ಅವರ ಕಾರಿನ ಜೊತೆಗೆ ಅವರ ಫ್ಯಾನ್ಸ್ ಫೋಟೋ ತೆಗೆದುಕೊಳ್ಳುತ್ತಿದ್ದಾರೆ. ಮೆಚ್ಚಿನ ನಟನ ಹೊಸ ಕಾರ್ ನೋಡಿ ಅವರು ಖುಷಿ ಪಟ್ಟಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆಯಷ್ಟೆ 5.8 ಕೋಟಿಯ ಲಂಬೋರ್ಗಿನಿ ಖರೀದಿ ಮಾಡಿದ್ದ ದರ್ಶನ್ ಈಗ ಮತ್ತೊಂದು ಹೊಸ ಕಾರಿನ ಮಾಲೀಕನಾಗಿದ್ದರು.

ಅಂದಹಾಗೆ, ದರ್ಶನ್ ಕೆಲ ದಿನಗಳ ಹಿಂದೆಯಷ್ಟೆ 'ಫೋರ್ಡ್ ಮಸ್ಟಾಂಗ್' (ford mustang) ಕೊಂಡುಕೊಂಡಿದ್ದಾರೆ. ಈ ಹೊಸ ಕಾರ್ ಹಳದಿ ಬಣ್ಣದಾಗಿದೆ. 'ಫೋರ್ಡ್ ಮಸ್ಟಾಂಗ್' (ford mustang) ಬೆಲೆ 75 ಲಕ್ಷ ಇದ್ದು. ಇತರೆ ಖರ್ಚು ಸೇರಿ ಅಂದಾಜು ಒಂದು ಕೋಟಿ ಆಗುತ್ತದೆ.
ಇನ್ನು, ದರ್ಶನ್ ಬಳಿ ಸಿಕ್ಕಾಪಟ್ಟೆ ಐಷಾರಾಮಿ ಕಾರುಗಳು ಇವೆ. ಅವುಗಳಲ್ಲಿ ಜಾಗ್ವರ್, Porsche, ಆಡಿ ಕ್ಯೂ 7, ರೇಂಜ್ ರೋವರ್, ಲಂಬೋರ್ಗಿನಿ ಪ್ರಮುಖವಾಗಿವೆ.


Click it and Unblock the Notifications










