ದುನಿಯಾ ವಿಜಯ್ ಮೇಲೆ ದರ್ಶನ್ ಅಭಿಮಾನಿಗಳು ಫುಲ್ ಗರಂ; ಕಾರಣವೇನು?
ಚಿತ್ರಮಂದಿರಗಳಲ್ಲಿ 'ಭೀಮ'ನ ಆರ್ಭಟ ಮುಂದುವರೆದಿದೆ. ಸಿನಿಮಾ ಯಶಸ್ವಿಯಾಗಿ ಎರಡನೇ ವಾರಕ್ಕೆ ಕಾಲಿಟ್ಟಿದೆ. ದುನಿಯಾ ವಿಜಯ್ ನಟನಾಗಿ ಮಾತ್ರವಲ್ಲದೇ ನಿರ್ದೇಶಕನಾಗಿಯೂ ಮತ್ತೊಮ್ಮೆ ಗೆದ್ದಿದ್ದಾರೆ. 'ಸಲಗ' ಬಳಿ 'ಭೀಮ' ಸಹ ಗೆಲುವಿನ ಹಾದಿ ಹಿಡಿದಿದ್ದಾನೆ.
ದರ್ಶನ್ ಜೈಲಿನಿಂದ ಹೊರಗೆ ಬರುವವರೆಗೂ ಕನ್ನಡ ಸಿನಿಮಾಗಳನ್ನು ಯಾರು ನೋಡಲ್ಲ, ಯಾರು ನೋಡಬೇಡಿ ಎನ್ನುವಂತೆ ಕೆಲ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡಿದ್ದರು. ಆದರೆ ಅದನ್ನೆಲ್ಲಾ ಮೀರಿ ದುನಿಯಾ ವಿಜಯ್ 'ಭೀಮ'ನಾಗಿ ಅಬ್ಬರಿಸುತ್ತಿದ್ದಾರೆ. ಸಿನಿಮಾ ಭರ್ಜರಿ ಕಲೆಕ್ಷನ್ ಸಹ ಮಾಡುತ್ತಿದೆ. ಇನ್ನು ಇದೇ ವಿಚಾರವಾಗಿ 'ಭೀಮ' ಸಕ್ಸಸ್ ಮೀಟ್‌ಗೆ ವಿಜಯ್‌ಗೆ ಪ್ರಶ್ನೆ ಎದುರಾಗಿತ್ತು.

ಮಾಧ್ಯಮದವರ ಪ್ರಶ್ನೆ ಪ್ರತಿಕ್ರಿಯಿಸಿದ್ದ ದುನಿಯಾ ವಿಜಯ್, "ಅವರವರ ವೈಯಕ್ತಿಕ ಭಾವನೆಗಳಿಗೆ ನಾನು ಗೌರವ ಕೊಡೋಣ. ಯಾರೋ ನೋಡಲ್ಲ ಎಂದರೆ ಅವರಿಗೆ ನಾವು ಗೌರವ ಕೊಡೋಣ. ಸಂತೋಷ, ಅದು ನಿಮ್ಮ ಭಾವನೆ. ಹಾಗಿದ್ದರೆ ನೋಡುತ್ತಿರುವವರು? ಹಾಗಾಗಿ ನಿಮ್ಮ ವೈಯಕ್ತಿಕ ಭಾವನನೆಗೆ ನಮ್ಮ ಗೌರವ ಇದೆ. ಅದನ್ನು ಪಾಸಿಟಿವ್ ಆಗಿಯೇ ತೆಗೆದುಕೊಳ್ತೀವಿ" ಎಂದಿದ್ದರು.
ಇತ್ತೀಚೆಗೆ ಟಿವಿ9 ಸುದ್ದಿವಾಹಿನಿ ಸಂದರ್ಶನದಲ್ಲಿ ದುನಿಯಾ ವಿಜಯ್ ಭಾಗಿ ಆಗಿದ್ದರು. 'ಭೀಮ' ಸಿನಿಮಾ ಸಕ್ಸಸ್ ಬಗ್ಗೆ ಮಾತನಾಡಿದ್ದರು. ಕೊನೆಗೆ ರ್ಯಾಪಿಡ್ ಫೈಯರ್ ಪ್ರಶ್ನೆಗಳನ್ನು ಕೇಳಲಾಯಿತು. ಒಬ್ಬಬ್ಬ ನಟನ ಹೆಸರು ಹೇಳುತ್ತಿದ್ದಂತೆ ಅವರ ಬಗ್ಗೆ ವಿಜಯ್ ಮಾತನಾಡಿದ್ದರು. ಅಪ್ಪು ಸೇರಿ ಹಲವರ ಬಗ್ಗೆ ಒಡನಾಟ ಹಂಚಿಕೊಂಡರು. ದರ್ಶನ್ ಹೆಸರು ಕೇಳುತ್ತಿದ್ದಂತೆ 'ಒಳ್ಳೆಯದಾಗಲಿ' ಎಂದಷ್ಟೇ ಹೇಳಿ ಸುಮ್ಮನಾಗಿದ್ದರು.
ದುನಿಯಾ ವಿಜಯ್ ಹೀಗೆ ಒಂದೇ ಪದದಲ್ಲಿ 'ಒಳ್ಳೆಯದಾಗಲಿ' ಎಂದು ಹೇಳಿ ಸುಮ್ಮನಾಗಿದ್ದು ದರ್ಶನ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಅಭಿಮಾನಿಗಳ ನಡುವೆ ಪರಸ್ಪರ ಕೆಸರೆರಚಾಟ ಶುರುವಾಗಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ ಈಗಾಗಲೇ 2 ತಿಂಗಳು ಕಳೆದಿದೆ. ಆಗಸ್ಟ್ 28ರವರೆಗೆ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನ ಮುಂದುವರೆದಿದೆ. ಸದ್ಯಕ್ಕೆ ದರ್ಶನ್‌ಗೆ ಮನೆಊಟ ಪಡೆಯಲು ಅವಕಾಶ ಕೂಡ ಸಿಕ್ಕಿಲ್ಲ. ಇತ್ತ ಅಭಿಮಾನಿಗಳು ಹಾಗೂ ಆಪ್ತರು ನೆಚ್ಚಿನ ನಟ ಬೇಗ ಸಂಕಷ್ಟದಿಂದ ಹೊರಬರಲಿ ಎಂದು ದೇವರ ಮೊರೆ ಹೋಗುತ್ತಿದ್ದಾರೆ.
ವರಮಹಾಲಕ್ಷ್ಮಿ ಹಬ್ಬದ ಸಮಯದಲ್ಲಿ ಕೆಲವರು ಲಕ್ಷ್ಮಿ ಜೊತೆ ದರ್ಶನ್ ಫೋಟೊ ಇಟ್ಟು ಪೂಜೆ ಮಾಡಿರುವ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇನ್ನು ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ ಬಳಿಕ ಆರೋಪಿಗಳ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ. ಈಗಾಗಲೇ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ದರ್ಶನ್ ಜೈಲಿನಲ್ಲಿ ಇರುವಾಗಲೇ ಅವರ ಮತ್ತೊಂದು ಸಿನಿಮಾ ರೀ-ರಿಲೀಸ್‌ಗೆ ಸಜ್ಜಾಗಿದೆ. ಪ್ರೇಮ್ ನಿರ್ದೇಶನದ 'ಕರಿಯ' ಸಿನಿಮಾ ದಶಕಗಳ ಹಿಟ್ ಆಗಿತ್ತು. ಆ ಚಿತ್ರವನ್ನು 4K ವರ್ಷನ್‌ನಲ್ಲಿ ಹೊಸ ರೂಪದಲ್ಲಿ ಆಗಸ್ಟ್ 30ಕ್ಕೆ ಮತ್ತೆ ತೆರೆಗೆ ತರುವ ಪ್ರಯತ್ನ ನಡೀತಿದೆ. ಚಿತ್ರದಲ್ಲಿ ದರ್ಶನ್ ಲಾಂಗ್ ಹಿಡಿದು ಅಬ್ಬರಿಸಿದ್ದರು. ಈಗಾಗಲೇ ಸಣ್ಣ ಟೀಸರ್ ಸಹ ಬಿಡುಗಡೆಯಾಗಿದೆ. ಕೆಲ ದಿನಗಳ ಹಿಂದೆ ದರ್ಶನ್ ನಟನೆಯ 'ಶಾಸ್ತ್ರಿ' ಸಿನಿಮಾ ರೀ-ರಿಲೀಸ್ ಆಗಿ ಸದ್ದು ಮಾಡಿತ್ತು.


Click it and Unblock the Notifications











