For Quick Alerts
  ALLOW NOTIFICATIONS  
  For Daily Alerts

  ನಟ ದರ್ಶನ್, ನಿರ್ದೇಶಕ ಸೂರಿ ಕಾಂಬಿನೇಷನ್‌ನಲ್ಲಿ ಮಾಸ್ ಚಿತ್ರ?

  |

  ಕನ್ನಡ ಚಿತ್ರರಂಗದಲ್ಲಿ ಕೆಲವು ನಿರ್ದೇಶಕರ ಚಿತ್ರಗಳು ಸಾಕಷ್ಟು ನಿರೀಕ್ಷೆ ಹುಟ್ಟು ಹಾಕುತ್ತದೆ. ನಿರ್ದೇಶಕರ ಹೆಸರಲ್ಲೇ ಚಿತ್ರದ ಭವಿಷ್ಯ ಕೂಡ ಒಮ್ಮೊಮ್ಮೆ ನಿರ್ಧಾರ ಆಗಿ ಬಿಡುತ್ತದೆ. ಅಂತಹ ನಿರ್ದೇಶಕರಲ್ಲಿ ದುನಿಯಾ ಸೂರಿ ಕೂಡ ಒಬ್ಬರು. ಹಾಗೆ ಕೆಲವು ಹಲವು ಬಾರಿ ಸಿನಿಮಾಗಳು ನಾಯಕ ನಟರ ಮೇಲೆ ನಿಂತಿರುತ್ತವೆ. ಕನ್ನಡದ ನಟ ದರ್ಶನ್‌ ಸಿನಿಮಾಗಳು ಪ್ರಕಟ ಆದ್ರೆ ಸಾಕು ಅವರ ಅಭಿಮಾನಿಗಳು ಚಿತ್ರ ರಿಲೀಸ್‌ಗಾಗಿ ಕಾಯುತ್ತಿರುತ್ತಾರೆ.

  ಸದ್ಯ ನಿರ್ದೇಶಕ ಸೂರಿ ಮತ್ತು ನಟ ದರ್ಶನ್‌ ಬಗ್ಗೆ ಮಾತನಾಡಲು ಕಾರಣ ಅವರ ಅಭಿಮಾನಿಗಳು. ದರ್ಶನ್‌ ಅಭಿಮಾನಿಗಳು ಈ ಕಾಂಬಿನೇಷನ್‌ನಲ್ಲಿ ಸಿನಿಮಾ ಬಂದರೆ ಸೂಪರ್‌ ಅಂತಿದ್ದಾರೆ.

  ಇತ್ತೀಚೆಗೆ ನಟ ದರ್ಶನ್ ಮತ್ತು ದುನಿಯಾ ಸೂರಿ ಫೋಟೊ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹಾಗಾಗಿ ಅವರ ಅಭಿಮಾನಿಗಳು, ಸಿನಿಮಾ ಪ್ರೇಕ್ಷಕರು ಈ ಕಾಂಬಿನೇಷನ್‌ನಲ್ಲಿ ಒಂದು ಚಿತ್ರದ ಬರಬೇಕು ಎನ್ನುತ್ತಿದ್ದಾರೆ.

  ದರ್ಶನ್‌ಗೆ ಸೂರಿ ಆ್ಯಕ್ಷನ್ ಕಟ್‌ ಹೇಳಬೇಕಂತೆ!

  ನಟ ದರ್ಶನ್ ಅವರಿಗೆ ಚಿತ್ರರಂಗದಲ್ಲಿ, ಪ್ರೇಕ್ಷಕ ಬಳಗದಲ್ಲಿ ಒಂದು ವಿಶೇಷ ಸ್ಥಾನ ಇದೆ. ಹಾಗಾಗಿ ದರ್ಶನ್ ಅವರ ಚಿತ್ರಗಳಿಗಾಗಿ ಸಾಕಷ್ಟು ಮಂದಿ ಕಾಯುತ್ತಿರುತ್ತಾರೆ. ಅಂತೆಯೇ ದರ್ಶನ್ ಅವರನ್ನು ಹೊಸ ಹೊಸ ಪಾತ್ರಗಳಲ್ಲಿ ನೋಡಲು ಅವರ ಅಭಿಮಾನಿಗಳು ಹಾತೊರೆಯುತ್ತಿರುತ್ತಾರೆ. ಈಗ ದರ್ಶನ್ ಮತ್ತು ಸೂರಿ ಕಾಂಬಿನೇಷನ್‌ನಲ್ಲಿ ಒಂದು ಸಿನಿಮಾ ಬರಬೇಕು ಎಂದು ಅಭಿಮಾನಿಗಳು ಅಭಿಯಾನ ನಡೆಸುತ್ತಿದ್ದಾರೆ.

  ಮಾಸ್‌ ಹೀರೋ, ಮಾಸ್‌ ಡೈರೆಕ್ಟರ್ ಹೇಗಿರಲಿದೆ ಚಿತ್ರ?

  ಮಾಸ್‌ ಹೀರೋ, ಮಾಸ್‌ ಡೈರೆಕ್ಟರ್ ಹೇಗಿರಲಿದೆ ಚಿತ್ರ?

  ಒಂದು ಕಡೆ ಮಾಸ್ ಹೀರೊ ದರ್ಶನ್, ಮತ್ತೊಂದು ಕಡೆ ಮಾಸ್‌ ಡೈರೆಕ್ಟರ್‌ ಸುಕ್ಕಾ ಸೂರಿ. ಮಾಸ್‌ ಲೇಬಲ್‌ ಇರುವ ಈ ಇಬ್ಬರು ಒಂದಾದರೆ ಸಿನಿಮಾ ಸೂಪರ್‌ ಮಾಸ್‌ ಆಗಿ ಇರಲಿದೆ ಎನ್ನುವುದು ಅಭಿಮಾನಿಗಳ ಆಶಯ. ಹಾಗಾಗಿ ಈ ಇಬ್ಬರು ಚಿತ್ರ ಮಾಡಿದರೆ ಹೇಗೆ ಇರಬಹುದು ಎಂದು ಈಗಲೇ ಊಹಿಸಲು ಶುರು ಮಾಡಿದ್ದಾರೆ. ಆದರೆ ಈ ಬಗ್ಗೆ ದರ್ಶನ್ ಅಥವಾ ಸೂರಿ ಯಾವುದೇ ರೀತಿಯಲ್ಲಿ ಖಚಿತ ಪಡಿಸಿಲ್ಲ.

  ಕ್ರಾಂತಿಯಲ್ಲಿ ದರ್ಶನ್‌ ಬ್ಯುಸಿ!

  ಕ್ರಾಂತಿಯಲ್ಲಿ ದರ್ಶನ್‌ ಬ್ಯುಸಿ!

  ನಟ ದರ್ಶನ್‌ ಸದ್ಯ ಕ್ರಾಂತಿ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಚಿತ್ರದ ಶೂಟಿಂಗ್‌ನಲ್ಲಿ ದರ್ಶನ್ ನಿರತರಾಗಿದ್ದಾರೆ. ಕ್ರಾಂತಿ ಚಿತ್ರದ ಮೂಲಕ ದರ್ಶನ್ ಅಕ್ಷರ ಕ್ರಾಂತಿ ಮಾಡಲು ಮುಂದಾಗಿದ್ದಾರೆ. ಈ ಚಿತ್ರಕ್ಕೆ ವಿ.ಹರಿಕೃಷ್ಣ ನಿರ್ದೇಶನವಿದೆ. ನಟಿ ರಚಿತಾ ರಾಮ್‌ ದರ್ಶನ್‌ಗೆ ನಾಯಕಿ ಆಗಿ ಕಾಣಿಸಿ ಕೊಳ್ಳುತ್ತಿದ್ದಾರೆ. ಸದ್ಯ ಸೂರಿ ದರ್ಶನ್‌ ಸ್ನೇಹಿತ ಅಭಿ‍ಷೇಕ್ ಅಂಬರೀಶ್‌ಗೆ ಚಿತ್ರ ಮಾಡುತ್ತಿದ್ದು, ಈ ಜೋಡಿ ಮುಂದೆ ಒಂದೇ ಚಿತ್ರದಲ್ಲಿ ಒಂದಾಗುವ ಸಾಧ್ಯತೆ ಹೆಚ್ಚಾಗಿವೆ.

  ಅಂಬಿ ಪುತ್ರನಿಗೆ 'ಬ್ಯಾಡ್‌ ಮ್ಯಾನರ್ಸ್' ಹೇಳಿ ಕೊಡುತ್ತಿರುವ ಸೂರಿ!

  ಅಂಬಿ ಪುತ್ರನಿಗೆ 'ಬ್ಯಾಡ್‌ ಮ್ಯಾನರ್ಸ್' ಹೇಳಿ ಕೊಡುತ್ತಿರುವ ಸೂರಿ!

  ಅಂಬಿ ಪುತ್ರ ಅಭಿಷೇಕ್ ಅವರಿಗೆ ಸುಕ್ಕಾ ಸೂರಿ ನಿರ್ದೇಶನ ಮಾಡುತ್ತಿದ್ದಾರೆ. 'ಬ್ಯಾಡ್ ಮ್ಯಾನರ್ಸ್' ಹೆಸರಲ್ಲಿ ಚಿತ್ರ ಸೆಟ್ಟೇರಿದೆ. ಚಿತ್ರೀಕರಣ ಕೂಡ ಆರಂಭ ಆಗಿದೆ. ಇದು ಅಭಿಷೇಕ್ ಅಂಬರೀಶ್ ಅವರ ಎರಡನೆ ಚಿತ್ರ ಹಾಗಾಗಿ ಸಾಕಷ್ಟು ನಿರೀಕ್ಷೆಗಳು ಮನೆ ಮಾಡಿವೆ. ಮೊದಲ ಚಿತ್ರದಲ್ಲಿ ಲವ್ವರ್‌ ಬಾಯ್‌ ಅವತಾರದಲ್ಲಿ ಕಾಣಿಸಿಕೊಂಡ ಅಭಿ ಈ ಬಾರಿ ಮಾಸ್‌ ಅವತಾರದಲ್ಲಿ ಪ್ರತ್ಯಕ್ಷ ಆಗಲಿದ್ದಾರೆ. ಈ ಚಿತ್ರದ ಬಳಿಕ ಸೂರಿ ಕೈಯಲ್ಲಿ ಮತ್ತಷ್ಟು ಚಿತ್ರಗಳು ಇವೆ. ಆದರೆ ದರ್ಶನ್‌ಗಾಗಿ ಯಾವಾಗ ಚಿತ್ರ ಮಾಡುತ್ತಾರೆ ನೋಡ್ಬೇಕು.

  English summary
  Darshan Fans Demand For Movie with Combination Of Director Duniya Soori And Actor Darshan
  Monday, December 27, 2021, 15:05
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X