Don't Miss!
- Sports
IND vs NZ 3rd T20: ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಮಿಂಚು; ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ತೂಗುದೀಪ ಫಾರ್ಮ್‌ಹೌಸ್ ಟೂರ್: ದರ್ಶನ್ ಮಿನಿ ಝೂಗೆ ಹೊಸದಾಗಿ ಬಂದ ಪ್ರಾಣಿ, ಪಕ್ಷಿಗಳು ಯಾವ್ಯಾವು?
ಮೈಸೂರಿನಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಡೆತನದ ತೂಗುದೀಪ ಫಾರ್ಮ್‌ಹೌಸ್ ಬಗ್ಗೆ ಗೊತ್ತೇಯಿದೆ. ನಟ ದರ್ಶನ್ ತಮ್ಮ ಬಿಡುವಿನ ಬಹುತೇಕ ಸಮಯವನ್ನು ಅಲ್ಲೇ ಕಳೆಯುತ್ತಾರೆ. ಪ್ರಾಣಿ-ಪಕ್ಷಿ ಪ್ರೇಮಿಯಾಗಿರುವ ದರ್ಶನ್ ತಮ್ಮ ಫಾರ್ಮ್‌ಹೌಸ್‌ನಲ್ಲಿ ದೇಶ ವಿದೇಶದ ವಿವಿಧ ಪ್ರಭೇದಗಳ ಪ್ರಾಣಿ- ಪಕ್ಷಿಗಳನ್ನು ಸಾಕುತ್ತಿದ್ದಾರೆ.
ನಿಜ ಹೇಳಬೇಕು ಅಂದರೆ ಸಿನಿಮಾಗಿಂತಲೂ ದರ್ಶನ್ ಹೆಚ್ಚು ಪ್ರಾಣಿ-ಪಕ್ಷಿಗಳನ್ನ ಪ್ರೀತಿಸುತ್ತಾರೆ. ಚಿಕ್ಕಂದಿನಿಂದಲೂ ಪ್ರಾಣಿ- ಪಕ್ಷಿ ಸಾಕೋದು ಅವರ ಹವ್ಯಾಸ. ಮೈಸೂರಿನ ಟೀ. ನರಸೀಪುರದ ಮುಖ್ಯರಸ್ತೆಯ ಹಳೇ ಕೆಂಪಯ್ಯನ ಹುಂಡಿಯಲ್ಲಿ ದರ್ಶನ್ ತೋಟ ಮಾಡಿಕೊಂಡಿದ್ದಾರೆ. ಆ ತೋಟದಲ್ಲಿ ಕುದುರೆ, ಹಸು, ಕುರಿ ಸೇರಿದಂತೆ ವಿವಿಧ ಜಾತಿಯ ಸಾಕಷ್ಟು ಪಕ್ಷಿಗಳಿವೆ. ದರ್ಶನ್ ಸಿಂಪ್ಲಿಸಿಟಿ ಬಗ್ಗೆ ಬಿಡಿಸಿ ಹೇಳುವುದು ಬೇಕಾಗಿಲ್ಲ. ಇನ್ನು ಫಾರ್ಮ್‌ಹೌಸ್‌ಗೆ ಬಂದು ಬಿಟ್ಟರೆ ಪ್ರಪಂಚವನ್ನೇ ಮರೆತು ಬಿಡುತ್ತಾರೆ. ಪ್ರಾಣಿ, ಪಕ್ಷಿಗಳ ಹಾರೈಕೆ ಮಾಡುತ್ತಾ ಇದ್ದು ಬಿಡುತ್ತಾರೆ. ಸಗಣಿ ಎತ್ತುತ್ತಾರೆ, ಪ್ರಾಣಿಗಳ ಮೈ ತೊಳೆಯುತ್ತಾರೆ. ಇದೇ ಸರಳತೆಗೆ ಎಷ್ಟೋ ಜನ ಅಭಿಮಾನಿಗಳಾಗಿ ಬಿಟ್ಟಿದ್ದಾರೆ.
"ನನ್ನಷ್ಟು
ಬ್ಲ್ಯಾಕ್
ಮಾರ್ಕ್
ಇರೋನು
ಯಾರೂ
ಇಲ್ಲ..ನನ್ನ
ಬ್ಯಾಡ್
ಲಕ್ಕೋ
ಏನೋ"
ದರ್ಶನ್!
ಪ್ರತಿ ವರ್ಷ ದರ್ಶನ್ ತಮ್ಮ ತೋಟದಲ್ಲೇ ಸಂಕ್ರಾಂತಿ ಹಬ್ಬ ಆಚರಿಸುತ್ತಾರೆ. ಈ ಬಾರಿ ಕೂಡ ಫಾರ್ಮ್ ಹೌಸ್‌ನಲ್ಲಿ ಹಬ್ಬ ಕಳೆ ಕಟ್ಟಿತ್ತು. ಇನ್ನು ತೂಗುದೀಪ ಡೈನಾಸ್ಟಿ ಯೂಟ್ಯೂಬ್ ಚಾನಲ್ ದರ್ಶನ್ ಫಾರ್ಮ್‌ಹೌಸ್ ಟೂರ್ ಮಾಡಿದೆ. ಸ್ವತಃ ದರ್ಶನ್ ತಾವು ಮಕ್ಕಳಂತೆ ಸಾಕಿಕೊಂಡಿರುವ ಪ್ರಾಣಿ ಪಕ್ಷಿಗಳ ವಿವರಣೆ ನೀಡಿದ್ದಾರೆ.

ರಾಜಸ್ಥಾನ್, ಒಂಗೋಲು ರಾಸುಗಳು
ನಟ ದರ್ಶನ್ ಅವರಿಗೆ ಪ್ರಾಣಿ ಪಕ್ಷಿ ಅಂದ್ರೆ, ಎಷ್ಟು ಇಷ್ಟ ಎನ್ನುವುದನ್ನು ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ಚಿಕ್ಕಂದಿನಲ್ಲಿ ತಮಗೆ ಕೊಡುತ್ತಿದ್ದ ಪಾಕೆಟ್ ಮನಿಯನ್ನು ಕೂಡ ಪ್ರಾಣಿ ಪಕ್ಷಿಗಳನ್ನು ಸಾಕಲು ಬಳಸುತ್ತಿದ್ದರು. ಯಾವುದೇ ಊರಿಗೆ ಹೋದಾಗ ಅಲ್ಲಿ ವಿಶೇಷ ತಳಿಯ ಪ್ರಾಣಿ, ಪಕ್ಷಿ ಇದೆ ಎಂದು ಗೊತ್ತಾದರೆ ತಪ್ಪದೇ ಹೋಗಿ ನೋಡಿ ಬರುತ್ತಾರೆ. ಇಷ್ಟವಾದರೆ ತಂದು ಫಾರ್ಮ್‌ಹೌಸ್‌ನಲ್ಲಿ ಸಾಕುತ್ತಾರೆ. ಸ್ನೇಹಿತರು ಕೂಡ ಪ್ರಾಣಿ ಪಕ್ಷಿಗಳನ್ನು ಉಡುಗೊರೆ ನೀಡುತ್ತಿರುತ್ತಾರೆ. ತೂಗುದೀಪ ಫಾರ್ಮ್‌ಹೌಸ್‌ನಲ್ಲಿ ಆಂಧ್ರ ಒಂಗೊಳು ಎತ್ತುಗಳು, ರಾಜಸ್ತಾನ ಕಾಂಕ್ರೇಜ್ ತಳಿಯ ಎತ್ತುಗಳು ಇವೆ. ಅದರ ಬಗ್ಗೆ ದರ್ಶನ್ ಸಾಕಷ್ಟು ಮಾಹಿತಿ ನೀಡಿದ್ದಾರೆ. ಇನ್ನು ಈ ಫಾರ್ಮ್‌ಹೌಸ್‌ನಲ್ಲಿ ಹೊಸದಾಗಿ ಪ್ರಾಣಿ ಪಕ್ಷಿಗಳು ಸೇರ್ಪಡೆ ಆಗುತ್ತಲೇ ಇರುತ್ತವೆ.

ಹೊಸ ಹೊಸ ಅತಿಥಿಗಳ ಆಗಮನ
ಪ್ರಾಣಿ ಪಕ್ಷಿ ಇಷ್ಟ ಎಂದು ದುಡ್ಡು ಕೊಟ್ಟು ತಂದು ಸಾಕುವವರಲ್ಲ ದರ್ಶನ್. ಅವುಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ದರ್ಶನ್ ತಿಳಿದುಕೊಂಡಿದ್ದಾರೆ. ಸದಾ ಇಂತಹ ವಿಚಾರಗಳನ್ನು ತಿಳಿದುಕೊಳ್ಳಲು ಹಾತೊರೆಯುತ್ತಿರುತ್ತಾರೆ. ಇನ್ನು ದರ್ಶನ್ ಫಾರ್ಮ್‌ಹೌಸ್‌ನಲ್ಲಿ ವಿವಿಧ ತಳಿಯ ನಾಯಿಗಳು ಇವೆ. ಸ್ನೇಹಿತರ ಜೊತೆ ದರ್ಶನ್ ಇದೇ ಫಾರ್ಮ್ ಹೌಸ್‌ನಲ್ಲಿ ಬಿಡುವಿನ ಸಮಯ ಕಳೆಯುತ್ತಾರೆ. ದನದ ಕೊಟ್ಟಿಗೆ ಪಕ್ಕದಲ್ಲೇ ಲ್ಯಾಂಬೋರ್ಗಿನಿ ಕಾರ್ ತಂದು ನಿಲ್ಲಿಸಿದ್ದಾರೆ. ಇದನ್ನು ನೋಡಿದ ಕೆಲ ಅಭಿಮಾನಿಗಳು "ಏನ್ ಬಾಸ್ ನೀವು, ಲ್ಯಾಂಗೋರ್ಗಿನಿ ತಂದು ಹೀಗೆ ನಿಲ್ಲಿಸಿಬಿಟ್ಟಿದ್ದೀರಾ?" ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಹಂಸಗಳು, ಬ್ರಹ್ಮ ಕೋಳಿಗಳು
ತೂಗುದೀಪ ಫಾರ್ಮ್ ಹೌಸ್‌ನಲ್ಲಿ ಮಿನಿ ಝೂ ಇದೆ ಎಂದು ಹೇಳಬಹುದು. ಝೂ ಮಾದರಿಯಲ್ಲೇ ದೊಡ್ಡ ದೊಡ್ಡ ಪಂಜರಗಳಲ್ಲಿ ವಿವಿಧ ಬಗೆಯ ಪ್ರಾಣಿ ಪಕ್ಷಿಗಳನ್ನು ಸಾಕಲಾಗುತ್ತಿದೆ. ಅದಕ್ಕಾಗಿ ಒಂದಷ್ಟು ಕೆಲಸಗಾರರು ಇದ್ದಾರೆ. ದರ್ಶನ್ ಹೋದರೆ ತಾವೇ ಪ್ರಾಣಿ, ಪಕ್ಷಿಗಳ ಆರೈಕೆಗೆ ಇಳಿದುಬಿಡುತ್ತಾರೆ. ಇನ್ನು ಆಸ್ಟ್ರೇಲಿಯಾದ ಕಪ್ಪು ಹಂಸಗಳು ನೀರಾಟ ಆಡುತ್ತಿರುತ್ತವೆ. ಬ್ರಹ್ಮ ತಳಿಯ ಕೋಳಿಗಳನ್ನು ಕೂಡ ಸಾಕಿದ್ದಾರೆ. ಪ್ರಾಣಿ ಪಕ್ಷಿ ಸಾಕುವುದನ್ನು ವ್ಯಾಪಾರ ದೃಷ್ಟಿಯಿಂದ ನೋಡದೇ ಹವ್ಯಾಸವಾಗಿ ಮಾಡಿಕೊಂಡಿದ್ದಾರೆ. ಒಂದೇ ಒಂದು ಪ್ರಾಣಿ, ಪಕ್ಷಿ ಸತ್ತರೂ ಬಹಳ ನೊಂದು ಕೊಳ್ಳುತ್ತಾರೆ.

ಅಪರೂಪದ ಎಲೆಕ್ಟಸ್ ಗಿಣಿಗಳು
ಇನ್ನು ಫಾರ್ಮ್‌ಹೌಸ್‌ನಲ್ಲಿ ವಿವಿಧ ಬಗೆಯ ಗಿಣಿಗಳನ್ನು ದರ್ಶನ್ ಸಾಕುತ್ತಿದ್ದಾರೆ. ಎಲೆಕ್ಟಸ್ ಪ್ರಭೇದದ ಪಕ್ಷಿ ಜೋಡಿ ಕೂಡ ಇದೆ. ಇದರ ವಿಶೇಷ ಏನು ಎನ್ನುವುದನ್ನು ದರ್ಶನ್ ವಿವರಿಸಿದ್ದಾರೆ. ಸಾಮಾನ್ಯವಾಗಿ ಗಿಣಿಗಳಲ್ಲಿ ಹೆಣ್ಣು - ಗಂಡಿನ ಮೈ ಬಣ್ಣ ಒಂದೇ ರೀತಿ ಇರುತ್ತದೆ. ಅಥವಾ ಕೊಂಚ ಬದಲಾವಣೆ ಇರಬಹುದು. ಆದರೆ ಎಲೆಕ್ಟಸ್ ಜಾತಿಯ ಗಿಣಿ ಆ ತರ ಅಲ್ಲ. ಗಂಡು ಪಕ್ಷಿಯ ಮೈಬಣ್ಣ ಹಸಿರಾಗಿರುತ್ತದೆ. ಆದರೆ ಹೆಣ್ಣು ಪಕ್ಷಿ ಕೆಂಪು, ನೀಲಿ, ಹಳದಿ ಮಿಶ್ರಣವಾಗಿರುತ್ತದೆ. ಇನ್ನುಳಿದಂತೆ ಬಿಳಿ, ಉದ್ದ ಜುಟ್ಟಿನ ಪಕ್ಷಿ ಹೀಗೆ ಹಲವು ಪ್ರಭೇದ ದೇಶ ವಿದೇಶದ ಪಕ್ಷಿಗಳನ್ನು ದರ್ಶನ್ ಸಾಕಿದ್ದಾರೆ. ಇನ್ನು ಒಂದಷ್ಟು ಕುದುರೆ, ಕುರಿಗಳನ್ನು ಕೂಡ ದರ್ಶನ್ ಸಾಕಿ ಸಲಹುತ್ತಿದ್ದಾರೆ.