»   » ಇದಕ್ಕೆ ನೋಡಿ 'ಡಿ' ಬಾಸ್ ದರ್ಶನ್ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು.!

ಇದಕ್ಕೆ ನೋಡಿ 'ಡಿ' ಬಾಸ್ ದರ್ಶನ್ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು.!

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಸ್ಟೈಲ್... ಆಕ್ಟಿಂಗ್... ನೋಡಿ ಎಷ್ಟೋ ಜನ ಅಭಿಮಾನಿಗಳಾಗಿರಬಹುದು. ಆದ್ರೆ, ಹತ್ತಿ ಬಂದ ಏಣಿಯನ್ನ ಒದೆಯದ... ಹಳೆಯದ್ದನ್ನೆಲ್ಲ ಮರೆಯದ 'ದಾಸ' ದರ್ಶನ್ ರವರ ವ್ಯಕ್ತಿತ್ವ ಅನೇಕರಿಗೆ ಅಚ್ಚುಮೆಚ್ಚು.

ಹಾಗಂತ ನಾವು ಸುಮ್ಮನೆ ಹೊಗಳುತ್ತಿದ್ದೇವೆ ಅಂದುಕೊಳ್ಳಬೇಡಿ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿಜಕ್ಕೂ ಹೊಗಳುವಂತಹ ಕೆಲಸವನ್ನೇ ಮಾಡಿದ್ದಾರೆ.

ಸುಖ, ಸಂಪತ್ತು ಲಭಿಸಿದ ಮೇಲೆ ಕಷ್ಟ ಕಾಲದಲ್ಲಿ ಕೈಹಿಡಿದ ಆಪತ್ಭಾಂಧವರನ್ನ ಮರೆತುಬಿಡುವ ಈಗಿನ ಕಾಲದಲ್ಲಿ... ತಮ್ಮ ಐವತ್ತನೇ ಚಿತ್ರದ ಹೊಸ್ತಿಲಲ್ಲಿ ಇರುವ ದರ್ಶನ್, ತಮ್ಮ ಮೊದಲ ಅನ್ನದಾತರಿಗೆ ಸನ್ಮಾನ ಮಾಡಿದ್ದಾರೆ. ಮುಂದೆ ಓದಿರಿ...

ಮೊದಲ ಅನ್ನದಾತರನ್ನ ನೆನಪಿಸಿಕೊಂಡ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 50ನೇ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗಷ್ಟೆ ಅದ್ಧೂರಿಯಾಗಿ ನೆರವೇರಿತು. ಅದೇ ಖುಷಿಯಲ್ಲಿ ತಮ್ಮನ್ನು 'ಹೀರೋ' ಪಟ್ಟಕ್ಕೆ ಏರಿಸಿದ ನಿರ್ಮಾಪಕ ಎಂ.ಜಿ ರಾಮಮೂರ್ತಿ ಅವರಿಗೆ ದರ್ಶನ್ ಸನ್ಮಾನಿಸಿದ್ದಾರೆ.

ಎಂ.ಜಿ.ರಾಮಮೂರ್ತಿಗೆ ದರ್ಶನ್ ಸನ್ಮಾನ

ತೆರೆಹಿಂದೆ ಕಷ್ಟಪಡುತ್ತಿದ್ದ ದರ್ಶನ್ ರವರಿಗೆ 'ಹೀರೋ' ಆಗುವ ಅವಕಾಶ ನೀಡಿದ ನಿರ್ಮಾಪಕ ಎಂ.ಜಿ ರಾಮಮೂರ್ತಿ ಅವರನ್ನ ತಮ್ಮ ನಿವಾಸಕ್ಕೆ ಆಹ್ವಾನಿಸಿ, ಆತ್ಮೀಯವಾಗಿ ಸನ್ಮಾನಿಸಿದ್ದಾರೆ ನಟ ದರ್ಶನ್.

'ಮೆಜೆಸ್ಟಿಕ್' ಚಿತ್ರದ ನಿರ್ಮಾಪಕ

ಎಂ.ಜಿ ರಾಮಮೂರ್ತಿ ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕರು. ದರ್ಶನ್ ನಾಯಕನಾಗಿ ಬಣ್ಣ ಹಚ್ಚಿದ ಮೊದಲ ಸಿನಿಮಾ 'ಮೆಜೆಸ್ಟಿಕ್' ಚಿತ್ರಕ್ಕೆ ಬಂಡವಾಳ ಹೂಡಿದವರು.

ನಡೆದ ಹಾದಿಯನ್ನ ಎಂದಿಗೂ ಮರೆಯೋಲ್ಲ.!

ದರ್ಶನ್ ಇದೀಗ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟರಲ್ಲಿ ಒಬ್ಬರು. ತಮ್ಮ ಐವತ್ತನೇ ಚಿತ್ರ ಮುಹೂರ್ತ ಮುಗಿಸಿದ ಖುಷಿಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯದರ್ಶಿ (ನಿರ್ಮಾಪಕರ ವಲಯ) ಆಗಿರುವ ಎಂ.ಜಿ. ರಾಮಮೂರ್ತಿಯವರನ್ನು ಸನ್ಮಾನಿಸಿದ ದರ್ಶನ್ ತಾವು ನಡೆದು ಬಂದ ಹಾದಿಯನ್ನು ಎಂದೂ ಮರೆಯೋದಿಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಈ ಸಂದರ್ಭದಲ್ಲಿ ದರ್ಶನ್ ಅವರ ಸಹೋದರ ದಿನಕರ್ ಕೂಡಾ ಹಾಜರಿದ್ದದ್ದು ವಿಶೇಷ.

English summary
Challenging Star Darshan felicitates 'Majestic' Producer MG Ramamurthy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada