Appu Vs Kariya: ಪುನೀತ್ ರಾಜ್‌ಕುಮಾರ್ 'ಅಪ್ಪು'ಗೆ ಸೆಡ್ಡು ಹೊಡೆದ ದರ್ಶನ್ 'ಕರಿಯ'; ಎಲ್ಲಿ ರಿಲೀಸ್?
ಪುನೀತ್ ರಾಜ್‌ಕುಮಾರ್ 50ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ 'ಅಪ್ಪು' ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗುತ್ತಿದೆ. ಕಳೆದೊಂದು ವಾರದಿಂದ ಅಪ್ಪು ಸಿನಿಮಾ ರಿಲೀಸ್ ಬಗ್ಗೆ ಅಭಿಮಾನಿಗಳೇ ಮುಂದೆ ನಿಂತು ಪ್ರಚಾರ ಮಾಡುತ್ತಿದ್ದಾರೆ. ನಾಳೆ (ಮಾರ್ಚ್ 14) ಅಪ್ಪು ಸಿನಿಮಾವನ್ನು ಅದ್ಧೂರಿಯಾಗಿ ಮರು ಬಿಡುಗಡೆ ಮಾಡಲಾಗುತ್ತಿದೆ. ಈಗಾಗಲೇ ಹಲವು ಚಿತ್ರಮಂದಿರಗಳಲ್ಲಿ 'ಅಪ್ಪು' ಸಿನಿಮಾದ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ.
'ಅಪ್ಪು' ಪುನೀತ್ ರಾಜ್‌ಕುಮಾರ್ ನಾಯಕನಾಗಿ ನಟಿಸಿದ ಮೊದಲ ಸಿನಿಮಾ. ಹೀಗಾಗಿ 50ನೇ ವರ್ಷ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಈ ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತಿದೆ. 49ನೇ ಹುಟ್ಟುಹಬ್ಬಕ್ಕೆ ದುನಿಯಾ ಸೂರಿ ನಿರ್ದೇಶಿಸಿದ 'ಜಾಕಿ' ಸಿನಿಮಾವನ್ನು ರಿಲೀಸ್ ಮಾಡಲಾಗಿತ್ತು. ಅದಕ್ಕೆ ಭರ್ಜರಿ ಯಶಸ್ಸು ಸಿಕ್ಕಿದ ಬೆನ್ನಲ್ಲೇ 'ಅಪ್ಪು' ಸಿನಿಮಾವನ್ನು ರಿ-ರಿಲೀಸ್ ಮಾಡುವುದಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಿದ್ದತೆಗಳನ್ನು ನಡೆಸಿದ್ದರು.

ಇದೇ ವೇಳೆ ದಿಢೀರನೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕರಿಯ' ಸಿನಿಮಾ ಕೂಡ ಮತ್ತೆ ಮರು ಬಿಡುಗಡೆಯಾಗುತ್ತಿದೆ. ಈಗಾಗಲೇ ಬುಕ್ ಮೈ ಶೋನಲ್ಲಿ 'ಕರಿಯ' ಸಿನಿಮಾದ ಬುಕಿಂಗ್ ಕೂಡ ಓಪನ್ ಆಗಿದೆ. 'ಅಪ್ಪು' ಎದುರು 'ಕರಿಯ' ರಿಲೀಸ್ ಆಗುತ್ತಿರುವುದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಇಬ್ಬರು ಅಭಿಮಾನಿಗಳ ಮಧ್ಯೆ ಕಿತ್ತಾಟ ಶುರುವಾಗಿದೆ. ಅಷ್ಟಕ್ಕೂ 'ಕರಿಯ' ರಿಲೀಸ್ ಆಗುತ್ತಿರೋದು ಎಲ್ಲಿ? 'ಅಪ್ಪು' ಸಿನಿಮಾಗೆ ಹೇಗಿದೆ ರೆಸ್ಪಾನ್ಸ್ ಅನ್ನೋದನ್ನು ತಿಳಿಯಲು ಮುಂದೆ ಓದಿ.
'ಅಪ್ಪು' ಎಷ್ಟು ಚಿತ್ರಮಂದಿರದಲ್ಲಿ ರಿಲೀಸ್?
ಪುನೀತ್ ರಾಜ್‌ಕುಮಾರ್ ನಾಯಕನಾಗಿ ನಟಿಸಿದ ಮೊದಲ ಸಿನಿಮಾ 'ಅಪ್ಪು'ವನ್ನು ಸುಮಾರು 153 ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಮಾಡಲಾಗುತ್ತಿದೆ. ಬೆಂಗಳೂರು, ಮೈಸೂರು ಸೇರಿದಂತೆ ಕರ್ನಾಟಕದಾದ್ಯಂತ ಗ್ರ್ಯಾಂಡ್ ಆಗಿಯೇ ಸಿನಿಮಾವನ್ನು ರಿಲೀಸ್ ಮಾಡಲಾಗುತ್ತಿದೆ. ನಿರೀಕ್ಷೆ ಮಾಡಿದಂತೆ ಬೆಂಗಳೂರು ಹಾಗೂ ಮೈಸೂರು ಭಾಗಗಳಲ್ಲಿ 'ಅಪ್ಪು' ಸಿನಿಮಾ ಸಖತ್ ರೆಸ್ಪಾನ್ಸ್ ಸಿಕ್ಕಿದೆ.
ದಿಢೀರನೇ 'ಕರಿಯ' ರಿಲೀಸ್
'ಅಪ್ಪು' ಸಿನಿಮಾ ಎದುರು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕರಿಯ' ಸಿನಿಮಾ ಕೂಡ ಇದೇ ವಾರ ಮತ್ತೆ ಮರು ಬಿಡುಗಡೆಯಾಗಿದೆ. ಜೋಗಿ ಪ್ರೇಮ್ ನಿರ್ದೇಶಿಸಿದ 'ಕರಿಯ' ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ರಿಲೀಸ್ ಆಗಲಿದೆ. ಬುಕ್ ಮೈ ಶೋನಲ್ಲಿ 'ಕರಿಯ' ಸಿನಿಮಾದ ಟಿಕೆಟ್ ಬುಕಿಂಗ್ ಕೂಡ ಓಪನ್ ಆಗಿದೆ. ವೀರೇಶ್ ಚಿತ್ರಮಂದಿರದಲ್ಲಿ 'ಅಪ್ಪು' ರಿಲೀಸ್ ಆಗುತ್ತಿದ್ದರೆ, ಕೆಲವೇ ಮೀಟರ್‌ಗಳ ಅಂತರದಲ್ಲಿರುವ ಪ್ರಸನ್ನ ಚಿತ್ರಮಂದಿರದಲ್ಲಿ 'ಕರಿಯ' ರಿಲೀಸ್ ಆಗುತ್ತಿದೆ.

ಅಪ್ಪು ಅಭಿಮಾನಿಗಳ ಅಸಮಧಾನ
ಪುನೀತ್ ರಾಜ್‌ಕುಮಾರ್ 50ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಅಭಿಮಾನಿಗಳು ಇದ್ದರು. ಈ ಮಧ್ಯೆ ಯಾರೋ ಬೇಕು ಅಂತಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕರಿಯ' ಸಿನಿಮಾವನ್ನು ರಿ ರಿಲೀಸ್ ಮಾಡುತ್ತಿದ್ದಾರೆ ಎಂದು ಸಿನಿಮಾ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ. ಇನ್ನೊಂದು ಕಡೆ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಬೇಕಂತೆಲೇ 'ಕರಿಯ' ರಿಲೀಸ್ ಮಾಡಿದ್ದಾರೆಂದು ಸಿಡಿದೆದ್ದಿದ್ದಾರೆ. ಒಟ್ನಲ್ಲಿ ಕೊನೆಯ ಕ್ಷಣದಲ್ಲಿ 'ಅಪ್ಪು' Vs 'ಕರಿಯ' ಅನ್ನೋ ವಾತಾವರಣ ಅಂತೂ ಸೃಷ್ಟಿಯಾಗಿದೆ.
'ಕರಿಯ' ವಿಶೇಷ ಪ್ರದರ್ಶನ
ಸದ್ಯ ಬೆಂಗಳೂರಿನಲ್ಲಿ ಪ್ರಸನ್ನ ಒಂದೇ ಚಿತ್ರಮಂದಿರದಲ್ಲಿ 'ಕರಿಯ' ರಿಲೀಸ್ ಆಗಿದೆ. ವಿಶೇಷ ಅಂದರೆ, 'ಕರಿಯ'ಗೆ ಬೆಳಗ್ಗೆ 7.30ಕ್ಕೆ ಶೋ ನೀಡಲಾಗಿದೆ. ಹಾಗೇ ಸಾಮಾನ್ಯವಾಗಿ ಆರಂಭ ಆಗಬೇಕಿದ್ದ 10.30 ಹಾಗೂ 1.30ರ ಶೋಗಳನ್ನು ಬುಕ್ ಮೈ ಶೋ ತೋರಿಸುತ್ತಿಲ್ಲ. ಮತ್ತೆ ಸಂಜೆ 4.30, 7.30 ಹಾಗೂ 10.30ರ ಶೋಗಳಿಗೆ ಟಿಕೆಟ್ ಬುಕಿಂಗ್ ಓಪನ್ ಮಾಡಲಾಗಿದೆ. ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಗೆ ಅದ್ಭುತ ರೆಸ್ಪಾನ್ಸ್ ಏನೂ ಸಿಕ್ಕಿಲ್ಲ. ಆದರೆ, ದರ್ಶನ್ ಫ್ಯಾನ್ಸ್ ಥಿಯೇಟರ್‌ನಲ್ಲಿ ಟಿಕೆಟ್ ಖರೀದಿ ಮಾಡಬಹುದು.


Click it and Unblock the Notifications











