ಮಾಸ್ಕ್ ಹಾಕದೆ ಪ್ರಚಾರ ಮಾಡಿದ ನಟ ದರ್ಶನ್‌ಗೆ ದಂಡ
ಆರ್‌ಆರ್ ನಗರ ಉಪಚುನಾವಣೆ ಬಿಜೆಪಿ ಅಭ್ಯರ್ಥಿ, ಸಿನಿಮಾ ನಿರ್ಮಾಪಕ ಮುನಿರತ್ನ ಪರವಾಗಿ ನಟ ದರ್ಶನ್ ಪ್ರಚಾರ ಮಾಡಿದ್ದರು. ದರ್ಶನ್ ಮಾಡಿದ ಪ್ರಚಾರ ಸಭೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು.
Recommended Video
ದರ್ಶನ್ ನಡೆಸಿದ ಪ್ರಚಾರ ಸಭೆ ಯಶಸ್ವಿಯೇನೋ ಆಯಿತು, ಆದರೆ ಪ್ರಚಾರ ರ್ಯಾಲಿ ಸಂದರ್ಭದಲ್ಲಿ ಕೊರೊನಾ ನಿಯಮಗಳನ್ನು ಗಾಳಿಗೆ ತೂರಲಾಗಿತ್ತು. ಇದನ್ನು ಪ್ರಶ್ನಿಸಿ ವಕೀಲರಿಬ್ಬರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆದು ಹೈಕೋರ್ಟ್, ಸರ್ಕಾರಕ್ಕೆ ತರಾಟೆ ತೆಗೆದುಕೊಂಡಿತು. ಇದರ ಬೆನ್ನಲ್ಲೇ ಸರ್ಕಾರದ ಪರ ವಕೀಲರು ಇಂದು (ನವೆಂಬರ್ 9) ಹೈಕೋರ್ಟ್‌ಗೆ ಮಾಹಿತಿ ನೀಡಿದ್ದು, ದರ್ಶನ್‌ಗೆ ದಂಡ ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಮಾಸ್ಕ್ ಧರಿಸದಿದ್ದಿದ್ದಕ್ಕೆ ನಟ ದರ್ಶನ್ ಗೆ ದಂಡ
ಪ್ರಚಾರ ರ್ಯಾಲಿ ವೇಳೆ ಮಾಸ್ಕ್ ಧರಿಸದೇ ಇದ್ದಿದ್ದಕ್ಕೆ ನಟ ದರ್ಶನ್‌ಗೆ 250 ರು ದಂಡ ವಿಧಿಸಲಾಗಿದೆಯಂತೆ. ಹೀಗೆಂದು ಸರ್ಕಾರಿ ಪರ ವಕೀಲರು ಹೈಕೋರ್ಟ್‌ಗೆ ಇಂದು ಮಾಹಿತಿ ನೀಡಿದ್ದಾರೆ. ಜೊತೆಗೆ ಸಂಸದ ತೇಜಸ್ವಿ ಸೂರ್ಯ ಅವರಿಗೂ 250 ರು ದಂಡ ವಿಧಿಸಲಾಗಿದೆಯಂತೆ.

ಬಿಜೆಪಿ ಯುವ ಮೋರ್ಚಾ ವಿರುದ್ಧವೂ ಪ್ರಕರಣ
ಕೊವಿಡ್ ಮಾರ್ಗಸೂಚಿ ಉಲ್ಲಂಘಿಸಿದ್ದಕ್ಕೆ 18 ಎನ್‌ಸಿಆರ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಪ್ರಚಾರ ರ್ಯಾಲಿ ಆಯೋಜಿಸಿದ್ದ ಬಿಜೆಪಿ ಯುವ ಮೋರ್ಚಾ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಸರ್ಕಾರ ಪರ ವಕೀಲರು ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.

ನವೆಂಬರ್ 11 ಕ್ಕೆ ವಿಚಾರಣೆ
ಪ್ರಚಾರ ರ್ಯಾಲಿ ವೇಳೆ ನಟ ದರ್ಶನ್ ಹಾಗೂ ಇತರರು ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ವಕೀಲರಾದ ಪುತ್ತಿಗೆ ರಮೇಶ್ ಹಾಗೂ ಜಿ.ಆರ್.ಮೋಹನ್ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆಯನ್ನು ನವೆಂಬರ್ 11 ಕ್ಕೆ ಮುಂದೂಡಲಾಗಿದೆ.

ನವೆಂಬರ್ 10 ಕ್ಕೆ ಫಲಿತಾಂಶ
ಆರ್‌ಆರ್ ನಗರ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ದರ್ಶನ್, ನಟಿ ಅಮೂಲ್ಯ ಹಾಗೂ ಇನ್ನಿತರ ಬಿಜೆಪಿ ಮುಖಂಡರು ಪ್ರಚಾರ ನಡೆಸಿದ್ದರು. ನಾಳೆ (ನವೆಂಬರ್ 10) ರಂದು ಆರ್‌ಆರ್ ನಗರ ಹಾಗೂ ಶಿರಾ ಉಪಚುನಾವಣೆ ಫಲಿತಾಂಶ ಹೊರಬೀಳಲಿದೆ.


Click it and Unblock the Notifications











