'ಕುರುಕ್ಷೇತ್ರ'ದ ಬಗ್ಗೆ ಟ್ವೀಟ್ ಮಾಡಿ ಸುದ್ದಿ ಮುಟ್ಟಿಸಿದ ದರ್ಶನ್

By Bharath Kumar

Recommended Video

Kurukshetra Kannada movie: ದರ್ಶನ್ ಕುರುಕ್ಷೇತ್ರ ಸಿನಿಮಾ ಬಗ್ಗೆ ಹೇಳಿದ್ದೇನು ? | FIlmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕುರುಕ್ಷೇತ್ರ' ಯಾವಾಗ, ಆ ಸಿನಿಮಾ ಎಲ್ಲಿಗೆ ಬಂದಿದೆ, ಏನ್ ನಡಿತಿದೆ ಎಂಬ ಹತ್ತು ಹಲವು ಪ್ರಶ್ನೆಗಳು ಅಭಿಮಾನಿಗಳನ್ನ ಕಾಡುತ್ತಿದೆ. ಆದ್ರೆ, ಈ ಬಗ್ಗೆ ಯಾರೊಬ್ಬರು ಸುಳಿವು ಕೂಡ ಕೊಟ್ಟಿರಲಿಲ್ಲ.

ಇದೀಗ, ಸ್ವತಃ ದರ್ಶನ್ ಅವರೇ ಈ ಚಿತ್ರದ ಅಪ್ ಡೇಟ್ ನೀಡಿದ್ದಾರೆ. 'ಕುರುಕ್ಷೇತ್ರ' ಸಿನಿಮಾ ಯಾವ ಹಂತದಲ್ಲಿ ಇದೆ ಎಂಬುದರ ಬಗ್ಗೆ ಟ್ವೀಟ್ಟರ್ ಮೂಲಕ ಉತ್ತರಿಸಿದ್ದಾರೆ.

''ಕುರುಕ್ಷೇತ್ರ ಚಿತ್ರದ ನನ್ನ ಡಬ್ಬಿಂಗ್ ಭಾಗ ಇಂದು ಸಂಪೂರ್ಣವಾಗಿ ಮುಗಿದಿದೆ. ಇನ್ನೇನು ಚಿತ್ರದ ಮುಂದಿನ ಚಟುವಟಿಕೆಗಳು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ'' ಎಂದು ದಾಸ ಬಹಿರಂಗಪಡಿಸಿದ್ದಾರೆ.

ಸದ್ಯ, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಕೊಂಡಿರುವ 'ಕುರುಕ್ಷೇತ್ರ' ಸಿನಿಮಾ ಅಂತಿಮ ಹಂತದ ಕೆಲಸ ಮಾಡುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಇದೇ ತಿಂಗಳು ಚಿತ್ರದ ಆಡಿಯೋ ಬಿಡುಗಡೆ ಮಾಡುವ ಯೋಚನೆಯಲ್ಲಿದೆ.

Darshan finished dubbing of kurukshetra

ಇನ್ನುಳಿದಂತೆ ನಾಗಣ್ಣ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ದರ್ಶನ್ 'ದುಯೋರ್ಧನ', ರವಿಚಂದ್ರನ್ 'ಶ್ರೀಕಷ್ಣ', ಅರ್ಜುನ್ ಸರ್ಜಾ 'ಕರ್ಣ', ಸೋನು ಸೂದ್ 'ಅರ್ಜುನ' ಸೇರಿದಂತೆ ಅಂಬರೀಶ್, ಸ್ನೇಹಾ, ಮೇಘನಾ ರಾಜ್, ಶ್ರೀನಾಥ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಮುನಿರತ್ನ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

More from Filmibeat

English summary
Darshan has finished dubbing of kurukshetra. Directed by Naganna and produced by Muniratna, the film is Darshan's 50th film, and it has the actor playing the role of Duryodhana.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X