ಮೆಜೆಸ್ಟಿಕ್ 'ದಾಸ'ನಿಗೆ 15 ವರ್ಷ: ಅಂದು ಹೇಗಿತ್ತು ಗೊತ್ತಾ 'ಮೆಜೆಸ್ಟಿಕ್'

By Bharath Kumar

ಅದು, 2002 ಫೆಬ್ರವರಿ 08, ಗಾಂಧಿನಗರದ ಚಿತ್ರಮಂದಿರಗಳ ಎದುರು ಚಿಗುರು ಮೀಸೆಯ ಹುಡುಗೊಬ್ಬನ ದೊಡ್ಡ ದೊಡ್ಡ ಕಟೌಟ್ ಗಳು ತಲೆ ಎತ್ತಿದ್ದವು. ಇದನ್ನ ನೋಡಿದ ಅದೇಷ್ಟೋ ಮಂದಿ ''ಯಾರಾಪ್ಪ ಇದು'' ಅಂದುಕೊಂಡಿದ್ದರು. ಆದ್ರೆ, ಮುಂದೊಂದು ದಿನ ಆ ಹುಡುಗ ಕನ್ನಡದ ಸೂಪರ್‌ ಸ್ಟಾರ್ ನಟನಾಗುತ್ತಾನೆ ಎಂದು ಬಹುಶಃ ಯಾರು ಊಹೆ ಕೂಡ ಮಾಡಿರಲಿಲ್ಲ ಅನ್ಸುತ್ತೆ.[ಸಿನಿಪ್ರಿಯರ ಜಡ್ಜ್ ಮೆಂಟ್: 2016ರ ಅತ್ಯುತ್ತಮ ಕಮರ್ಶಿಯಲ್ ಚಿತ್ರ 'ಜಗ್ಗುದಾದಾ'.!]

ಆ ಎಲ್ಲಾ ನಿರೀಕ್ಷೆ, ಊಹೆಗಳನ್ನ ಮೀರಿ, ಇಂದು ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಎನಿಸಿಕೊಂಡಿದ್ದಾರೆ ಎಂದರೆ ಅದು ನಿಜಕ್ಕೂ ಗ್ರೇಟ್ ಎನ್ನಲೇಬೇಕು. ಎಸ್, ನಾವು ಇಷ್ಟೋತ್ತು ಹೇಳಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಗ್ಗೆನೇ. ಯಾಕಂದ್ರೆ, ದರ್ಶನ್ ನಾಯಕನಟನಾಗಿ ಇಂದಿಗೆ 15 ವರ್ಷ ಕಳೆದಿದೆ. ಅರ್ಥಾತ್ 'ಮೆಜೆಸ್ಟಿಕ್' ಚಿತ್ರಕ್ಕೆ 15 ವರ್ಷದ ಸಂಭ್ರಮ

'ಮೆಜೆಸ್ಟಿಕ್' ಚಿತ್ರಕ್ಕೀಗ 15 ವರ್ಷ

'ಮೆಜೆಸ್ಟಿಕ್' ಚಿತ್ರಕ್ಕೀಗ 15 ವರ್ಷ

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನಟರಾಗಿ ಅಭಿನಯಿಸಿದ ಮೊದಲ ಚಿತ್ರ 'ಮೆಜೆಸ್ಟಿಕ್'. ಇದೀಗ, ಫೆಬ್ರವರಿ 08ಕ್ಕೆ 'ಮೆಜೆಸ್ಟಿಕ್' ಬಿಡುಗಡೆಯಾಗಿ 15 ವರ್ಷ ಕಳೆದಿದೆ. ಅರ್ಥಾತ್ ಬೆಳ್ಳಿತೆರೆಯಲ್ಲಿ ದರ್ಶನ್ ಹೀರೋಯಿಸಂ ಶುರುವಾಗಿ ಇಂದಿಗೆ 15 ವರ್ಷ ಆಗಿದೆ.[ದರ್ಶನ್ '50'ನೇ ಚಿತ್ರ ಸ್ನೇಹಿತರಿಗೆ ಮೀಸಲು!]

2002ರಲ್ಲಿ ಬಿಡುಗಡೆಯಾಗಿದ್ದ 'ಮೆಜೆಸ್ಟಿಕ್'

2002ರಲ್ಲಿ ಬಿಡುಗಡೆಯಾಗಿದ್ದ 'ಮೆಜೆಸ್ಟಿಕ್'

'ಮೆಜೆಸ್ಟಿಕ್' ಸಿನಿಮಾ 2002ರ ಫೆಬ್ರವರಿ 08 ರಂದು ಬಿಡುಗಡೆಯಾಗಿತ್ತು. ನಿರ್ದೇಶಕ ಪಿ.ಎನ್.ಸತ್ಯ ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು. ಎಂ.ಜಿ.ರಾಮಮೂರ್ತಿ ಮತ್ತು ಭಾ.ಮಾ ಹರೀಶ್ ನಿರ್ಮಾಣ ಮಾಡಿದ್ದರು. ಸಾಧುಕೋಕಿಲಾ ಸಂಗೀತ ನೀಡಿದ್ದರು. ಅಣಜಿ ನಾಗರಾಜ್ ಛಾಯಗ್ರಹಣವಿತ್ತು.['ಚಕ್ರವರ್ತಿ' ಅಭಿಮಾನಿಗಳಿಗೆ 'ತ್ರಿಬಲ್' ಧಮಾಕ!]

'ಸ್ವರ್ಶಾ' ರೇಖಾ ನಾಯಕಿ

'ಸ್ವರ್ಶಾ' ರೇಖಾ ನಾಯಕಿ

'ಮೆಜೆಸ್ಟಿಕ್' ಚಿತ್ರದಲ್ಲಿ ದರ್ಶನ್ ಗೆ ನಾಯಕಿಯಾಗಿದ್ದು 'ಸ್ವರ್ಶಾ' ಖ್ಯಾತಿಯ ರೇಖಾ. ಸುದೀಪ್ ಅವರ ಮೊದಲ ಸಿನಿಮಾದಲ್ಲಿ ನಾಯಕಿಯಾಗಿದ್ದ ರೇಖಾ, ದರ್ಶನ್ ಅವರ ಮೊದಲ ಚಿತ್ರಕ್ಕೂ ಹೀರೋಯಿನ್ ಆಗಿದ್ದರು.

ದರ್ಶನ್ ವೃತ್ತಿ ಜೀವನವನ್ನ ಬದಲಿಸಿದ ಚಿತ್ರ

ದರ್ಶನ್ ವೃತ್ತಿ ಜೀವನವನ್ನ ಬದಲಿಸಿದ ಚಿತ್ರ

'ಮೆಜೆಸ್ಟಿಕ್' ಸಿನಿಮಾ ತೆರೆಕಾಣುವುದಕ್ಕಿಂತ ಮೊದಲು ದರ್ಶನ್ ಸುಮಾರು ಆರೇಳು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನ ನಿರ್ವಹಿಸಿದ್ದರು. ಆದ್ರೆ, 'ಮೆಜೆಸ್ಟಿಕ್' ನಂತರ ದರ್ಶನ್ ಖದರ್ ಸಂಪೂರ್ಣವಾಗಿ ಬದಲಾಯಿತು. ಅಲ್ಲಿಂದ ಇಲ್ಲಿಯವರೆಗೂ ಸುಮಾರು 50ಕ್ಕೂ ಅಧಿಕ ಚಿತ್ರಗಳಲ್ಲಿ ದರ್ಶನ್ ಅಭಿನಯಿಸಿದ್ದಾರೆ.

ಮರೆಯಲಾಗದ 'ದಾಸ'ನ ಪಾತ್ರ

ಮರೆಯಲಾಗದ 'ದಾಸ'ನ ಪಾತ್ರ

'ಮೆಜೆಸ್ಟಿಕ್' ಚಿತ್ರದಲ್ಲಿ ದರ್ಶನ್ ಎರಡು ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದರು. ಒಂದು ಕಡೆ 'ದಾಸ' ಎಂಬ ರೌಡಿ ಪಾತ್ರವಾದರೇ, ಮತ್ತೊಂದೆಡೆ ಪ್ರಜ್ವಲ್ ಎಂಬ ಲವರ್ ಬಾಯ್ ಕ್ಯಾರೆಕ್ಟರ್. ಆದ್ರೆ, ದಾಸನ ಗೆಟಪ್ ನಲ್ಲಿ ದರ್ಶನ್ ಅಬ್ಬರಿಸಿದ್ದರು. ಮುಂದೆ 'ದಾಸ' ಎಂಬ ಹೆಸರಿನಲ್ಲೇ ಸಿನಿಮಾ ಕೂಡ ಮಾಡಿದರು. ಈಗಲೂ ಚಾಲೆಂಜಿಂಗ್ ಸ್ಟಾರ್ 'ದಾಸದರ್ಶನ್' ಎಂದೇ ಗುರುತಿಸಿಕೊಳ್ಳುತ್ತಾರೆ.

'ಮೆಜೆಸ್ಟಿಕ್ 'ಸಂಭ್ರಮದಲ್ಲಿ 'ಡಿ-ಫ್ಯಾನ್ಸ್'

'ಮೆಜೆಸ್ಟಿಕ್ 'ಸಂಭ್ರಮದಲ್ಲಿ 'ಡಿ-ಫ್ಯಾನ್ಸ್'

'ಮೆಜೆಸ್ಟಿಕ್' ಚಿತ್ರಕ್ಕೆ 15 ವರ್ಷ ತುಂಬಿದ ಸಂತೋಷವನ್ನ, ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಿಸುತ್ತಿದ್ದಾರೆ. ಫೇಸ್ ಬುಕ್, ಟ್ವಿಟ್ಟರ್ ಗಳಲ್ಲಿ 'ದಾಸ'ನ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ.

More from Filmibeat

English summary
Darshan's first film as hero, Majestic completes 15 years on Wednesday. The film was released on February 8, 2002. Darshan had acted in small roles in 7 films before that. But with Majestic he became a Sandalwood star. The film was directed by PN Sathya and produced by MG Ramamurthy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X