ಪತ್ನಿ, ಮಗನ ಜೊತೆ ಲಂಡನ್‌ಗೆ ಹಾರಿದ ನಟ ದರ್ಶನ್!
ಕನ್ನಡ ಚಿತ್ರರಂಗದಲ್ಲಿ ಹೆಚ್ಚು ನಟ, ನಟಿಯರು ತಮ್ಮ ವೈಯಕ್ತಿಕ ಬದುಕನ್ನು ಹೆಚ್ಚು ಪ್ರಚಾರ ಮಾಡುವುದಿಲ್ಲ. ಮನೆ, ಮಕ್ಕಳ ಬಗ್ಗೆ ಹೆಚ್ಚಾಗಿ ವಿಚಾರಗಳನ್ನು ಹಂಚಿಕೊಳ್ಳುವುದಿಲ್ಲ. ಈ ಸಾಲಿನಲ್ಲಿ ನಟ ದರ್ಶನ್ ಕೂಡ ಇದ್ದಾರೆ. ದರ್ಶನ್ ಹೆಚ್ಚಾಗಿ ತಮ್ಮ ಸಿನಿಮಾಗಳ ವಿಚಾರಕ್ಕಾಗಿಯೇ ಕಾಣಿಸಿಕೊಳ್ಳುತ್ತಾರೆ.
ದರ್ಶನ್ ತಮ್ಮ ಮಗ ವಿನೀಶ್ ಮತ್ತು ಪತ್ನಿ ವಿಜಯಲಕ್ಷ್ಮೀ ಜೊತೆಗೆ, ಹೊರಗೆ ಕಾಣಿಸಿಕೊಳ್ಳುವುದು ವಿರಳ. ಹಾಗೊಂದು ವೇಳೆ ಕಾಣಿಸಿಕೊಂಡರೆ ಆ ವಿಡಿಯೋ ಅಥವಾ ಫೋಟೊ ಸಿಕ್ಕಾಪಟ್ಟೆ ವೈರಲ್ ಆಗುತ್ತದೆ. ಇನ್ನು ಅಪರೂಪದ ಕ್ಷಣಗಳಲ್ಲಿ ಈ ಜೋಡಿ ವಿದೇಶ ಪ್ರಯಾಣ ಮಾಡುತ್ತೆ.
ಈಗ ದರ್ಶನ್ ಕುಟುಂಬದ ಬಗ್ಗೆ ಮಾತನಾಡಲು ಕಾರಣ, ಹೊಸದೊಂದು ವಿಡಿಯೋ. ಕುಟುಂಬದ ಜೊತೆಗೆ ದರ್ಶನ್ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ದರ್ಶನ್, ವಿಜಯಲಕ್ಷ್ಮಿ ವಿಡಿಯೋ ವೈರಲ್!
ನಟ ದರ್ಶನ್ ತಮ್ಮ ಕುಟುಂಬದ ಜೊತೆಗೆ ಇರುವ ಪುಟ್ಟ ವಿಡಿಯೋ ಒಂದು ವೈರಲ್ ಆಗಿದೆ. ಏರ್‌ಪೋರ್ಟ್‌ನಲ್ಲಿ ದರ್ಶನ್ ಕುಟುಂಬದ ಜೊತೆಗೆ ಕಾಣಿಸಿಕೊಂಡಿದ್ದಾರೆ. ದರ್ಶನ್ ಜೊತೆಗೆ ಅವರ ಪತ್ನಿ ವಿಜಯಲಕ್ಷ್ಮಿ ಮತ್ತು ಮಗ ವಿನೀಶ್ ಕಾಣಿಸಿಕೊಂಡಿದ್ದಾರೆ. ನಟ ದರ್ಶನ್ ಜೀನ್ಸ್, ಟೀಶರ್ಟ್ ತೊಟ್ಟು ಮಿಂಚಿದರೆ, ವಿಜಯಲಕ್ಷ್ಮಿ ಹಸಿರು ಬಣ್ಣದ ಜಾಗರ್ ತೊಟ್ಟುಕೊಂಡಿದ್ದರು.

ಲಂಡನ್‌ಗೆ ಹಾರಿದ ದರ್ಶನ್ ಕುಟುಂಬ!
ನಟ ದರ್ಶನ್ ಮತ್ತು ಕುಟುಂಬ ಲಂಡನ್‌ಗೆ ಹಾರಿದೆ. ಲಂಡನ್‌ಗೆ ಹೋಗುವ ಮುನ್ನ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದೆ. ಇನ್ನು ವಿಜಯಲಕ್ಷ್ಮಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಲಂಡನ್ ಫೋಟೊ ಹಂಚಿಕೊಂಡಿದ್ದಾರೆ. ಸದ್ಯ ದರ್ಶನ್ ಸಿನಿಮಾದಿಂದ ಕೊಂಚ ಬಿಡುವು ಮಾಡಿಕೊಂಡು ಕುಟುಂಬದ ಜೊತೆಗೆ ಹಾಲಿ ಡೇ ಎಂಜಾಯ್ ಮಾಡ್ತಿದ್ದಾರೆ.

ಪತ್ನಿ ಜೊತೆ ದರ್ಶನ್ ಜೀಪ್ ರೈಡಿಂಗ್!
ಇನ್ನು ಕಳೆದ ಬಾರಿ ನಟ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ ಜೀಪ್‌ನಲ್ಲಿ ಕಾಣಿಸಿಕೊಂಡಿದ್ದರು. ಪತ್ನಿ ಜೊತೆಗೆ ನಟ ದರ್ಶನ್ ಜೀಪ್‌ನಲ್ಲಿ ರೈಡ್ ಹೋಗುತ್ತಿದ್ದ ವೇಳೆ ಅಭಿಮಾನಿಗಳು ವಿಡಿಯೋ ಮಾಡಿಕೊಂಡಿದ್ದರು. ದರ್ಶನ್ ಜೀಪ್ ಚೇಸ್ ಮಾಡುತ್ತಿದ್ದ ಅಭಿಮಾನಿಗಳಿಗೆ ದರ್ಶನ್ ಬೈದು ಬುದ್ದಿ ಹೇಳಿದ್ದರು. ಆಗ ಪತ್ನಿ ವಿಜಯಲಕ್ಷ್ಮಿ ಕೂಡ ಜೊತೆಯಲ್ಲಿ ಇದ್ದರು. ಈ ಜೋಡಿ ಕ್ಯಾಮೆರಾ ಕಣ್ಣಿಗೆ ಬೀಳುವುದು ಅಪರೂಪ. ಈಗ ಮತ್ತೆ ಇವರ ವಿಡಿಯೋ ವೈರಲ್ ಆಗಿದೆ.
Recommended Video

ಪೋಲ್ಯಾಂಡ್ ಶೂಟಿಂಗ್ ಮುಗಿಸಿದ ನಟ!
ಇನ್ನು ಇತ್ತೀಚೆಗೆ ನಟ ದರ್ಶನ್ ಪೋಲ್ಯಾಂಡ್‌ನಲ್ಲಿ 'ಕ್ರಾಂತಿ' ಚಿತ್ರದ ಶೂಟಿಂಗ್ ಮಾಡುತ್ತಿದ್ದರು. ಅಲ್ಲಿನ ಮೇಕಿಂಗ್ ಫೋಟೊ ಕೂಡ ವೈರಲ್ ಆಗಿತ್ತು. ಇನ್ನು ಕೆಲವೇ ದಿನಗಳಲ್ಲಿ ' ಕ್ರಾಂತಿ' ಚಿತ್ರದ ಅಪ್ಡೇಟ್ ಸಿಗಲಿದೆ. ರಿಲೀಸ್ ದಿನಾಂಕವನ್ನೂ ಕೂಡ ಚಿತ್ರತಂಡ ಶೀಘ್ರದಲ್ಲಿಯೇ ಪ್ರಕಟ ಮಾಡಲಿದೆ.


Click it and Unblock the Notifications











