ದರ್ಶನ್ ಹಿಂಬಾಲಕರು, ರೌಡಿಗಳಿಂದ ಕೊಲೆ ಬೆದರಿಕೆ: ಇಂದ್ರಜಿತ್ ದೂರು

ನಟ ದರ್ಶನ್ ಹಿಂಬಾಲಕರು ಹಾಗೂ ರೌಡಿಗಳು ತಮಗೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪಿಸಿದ್ದಾರೆ.

ಇಂದು ಸುದ್ದಿಗೋಷ್ಠಿ ನಡೆಸಿದ ಇಂದ್ರಜಿತ್, ''ನನಗೆ ಕಳೆದ 24 ಗಂಟೆಗಳಲ್ಲಿ ಸತತವಾಗಿ ಬೆದರಿಕೆ ಕರೆಗಳು, ವಾಟ್ಸ್‌ಆಪ್‌ ಸಂದೇಶಗಳು ಬರುತ್ತಲೇ ಇವೆ. 20-30 ಮೊಬೈಲ್ ಸಂಖ್ಯೆಗಳಿಂದ ಕೊಲೆ ಬೆದರಿಕೆಗಳು ಬಂದಿವೆ. ಹಾಗಾಗಿ ಸೈಬರ್‌ ಕ್ರೈಂಗೆ ದೂರು ನೀಡಲಿದ್ದೇನೆ'' ಎಂದಿದ್ದಾರೆ ಇಂದ್ರಜಿತ್.

''ವಾಟ್ಸ್‌ಆಪ್ ಮೂಲಕ ಅಶ್ಲೀಲ ಚಿತ್ರಗಳನ್ನು ಕಳಿಸುವುದು, ಅಶ್ಲೀಲ ಸಂದೇಶಗಳು, ಕೆಟ್ಟ ಪದಗಳನ್ನು ಬಳಸಿ ಬೈಯ್ಯುವುದು, ಕರೆ ಮಾಡಿ ಬೆದರಿಕೆ ಹಾಕುವುದು ಮಾಡುತ್ತಿದ್ದಾರೆ'' ಎಂದು ಇಂದ್ರಜಿತ್ ಆರೋಪ ಮಾಡಿದ್ದಾರೆ.

Darshan Followers Giving Life Threats To Me: Indrajit Lankesh

''ಕಾಲ್ ಮಾಡ್ತಾರೆ, ಪಿಕ್ ಮಾಡಿ ಮಾತನಾಡಿದ್ರೆ ಅವರು ಮಾತನಾಡಲ್ಲ. ಬಹಳ ಕೆಟ್ಟದಾಗಿ, ಅಶ್ಲೀಲವಾಗಿ ಸಂದೇಶ ಕಳಿಸುತ್ತಾರೆ. ಇವರ ಅಭಿರುಚಿ ಹೇಗಿದೆ ನೋಡಿ ಎಂದು ಕೆಲವು ಸಂದೇಶಗಳನ್ನು ಮಾಧ್ಯಮದವರಿಗೆ ತೋರಿಸಿದರು ಇಂದ್ರಜಿತ್ ಲಂಕೇಶ್.

ನನಗೆ ಕಾಲ್ ಮಾಡುತ್ತಿರುವವರಿಗೆ, ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಿರುವವರಿಗೆ ಪಾಠ ಕಲಿಸದೇ ಬಿಡಲ್ಲ. ಇಂಥಹಾ ಬೆದರಿಕೆಗಳು ನನಗೆ ಹೊಸದೇನೂ ಅಲ್ಲ. ಇಂಥಹಾ ಬೆದರಿಕೆಗಳನ್ನು ಹಲವು ವರ್ಷಗಳಿಂದಲೂ ನೋಡುತ್ತಾ ಬಂದಿದ್ದೇನೆ. ಇವರನ್ನು ಸುಮ್ಮನೆ ಬಿಡಲ್ಲ. ಸೈಬರ್ ಠಾಣೆಗೆ ದೂರು ನೀಡುತ್ತೇನೆ'' ಎಂದಿದ್ದಾರೆ ಇಂದ್ರಜಿತ್ ಲಂಕೇಶ್.

Recommended Video

ಅಶ್ಲೀಲ ಚಿತ್ರ ಶೂಟಿಂಗ್ & ಮಾರಾಟ: ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾ ಅರೆಸ್ಟ್ | Filmibeat Kannada

ನಟ ದರ್ಶನ್, ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್‌ನಲ್ಲಿ ಕೆಲ ದಿನಗಳ ಹಿಂದೆ ಹೋಟೆಲ್ ಸಪ್ಲೈಯರ್ ಒಬ್ಬರ ಮೇಲೆ ತೀವ್ರ ಹಲ್ಲೆ ಮಾಡಿದ್ದಾರೆ ಎಂದು ಇಂದ್ರಜಿತ್ ಲಂಕೇಶ್ ಆರೋಪಿಸಿದ್ದರು. ದರ್ಶನ್ ತಮ್ಮ ಮೇಲೆ ಬಂದ ಆರೋಪಗಳಿಗೆ ಅತ್ಯಂತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ಇಂದ್ರಜಿತ್‌ಗೆ ಸವಾಲು ಹಾಕಿದ್ದರು. ದರ್ಶನ್ ಅಭಿಮಾನಿಗಳು ಸಹ ಇಂದ್ರಜಿತ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಇಂದ್ರಜಿತ್ ವಿರುದ್ಧ ಹಲವು ಅವಾಚ್ಯ ಪೋಸ್ಟ್‌ಗಳನ್ನು ಹಾಕಿದ್ದರು.

More from Filmibeat

English summary
Director Indrajit Lankesh said Darshan followers and his rowdies giving life threaten to him. He said some people calling me and giving threat.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X