ದರ್ಶನ್ ಹಲ್ಲೆ ಪ್ರಕರಣ: ಆಡಿಯೋ ಬಗ್ಗೆ ಹರ್ಷ ಮೆಲಂಟಾ ಪ್ರತಿಕ್ರಿಯೆ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಲ್ಲೆ ಆರೋಪ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ನಿರ್ಮಾಪಕ, ದರ್ಶನ್ ಆಪ್ತ ಸಂದೇಶ್ ನಾಗರಾಜ್ ಅವರ ದಿ ಪ್ರಿನ್ಸ್ ಹೋಟೆಲ್ ಸಿಬ್ಬಂದಿ ಮೇಲೆ ಚಾಲೆಂಜಿಂಗ್ ಸ್ಟಾರ್ ಹಲ್ಲೆ ಮಾಡಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪ ಮಾಡಿದ ಬೆನ್ನಲ್ಲೇ ಆಡಿಯೋ ವೈರಲ್ ಆಗಿದ್ದು ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ.
ಇಂದ್ರಜಿತ್ ಜೊತೆ ಸಂದೇಶ್ ನಾಗರಾಜ್ ಮಾತನಾಡಿದ್ದಾರೆ ಎನ್ನಲಾಗುತ್ತಿರುವ ಆಡಿಯೋದಲ್ಲಿ ದರ್ಶನ್ ಮತ್ತು ಸ್ನೇಹಿತರ ಬಗ್ಗೆ ಅನೇಕ ವಿಚಾರಗಳು ಬಹಿರಂಗವಾಗಿದೆ. ಸಂದೇಶ್ ನಾಗರಾಜ್ ಅವರ ಧ್ವನಿ ಎನ್ನಲಾಗುತ್ತಿರುವ ಆಡಿಯೋದಲ್ಲಿ, ದರ್ಶನ್ ಜೊತೆ ಇರುವ ಸ್ನೇಹಿತರು ಯಾರು ಒಳ್ಳೆಯವರಲ್ಲ ಎಂದಿದ್ದಾರೆ. ಹಲ್ಲೆ ವೇಳೆ ಸ್ನೇಹಿತರೆಲ್ಲ ಸುಮ್ಮನೆ ನೋಡುತ್ತ ನಿಂತಿದ್ದರು, ನಾನು ಹೋಗಿ ಬೈದ ಮೇಲೆ ಹರ್ಷ ಕಾಲುಹಿಡಿಯಲು ಬಂದ್ರು ಎಂದು ಆಡಿಯೋದಲ್ಲಿ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ನೀಡಿರುವ ದರ್ಶನ್ ಸ್ನೇಹಿತ ಹರ್ಷ ಮೆಲಂಟಾ, "ಸಂದೇಶ್ ಅವರೇ ಮಾತನಾಡಿದ್ದಾರಾ ಎನ್ನುವ ಬಗ್ಗೆ ನನಗೆ ಅನುಮಾನವಿದೆ. ಸಂದೇಶ್ ಅವರು ನನಗೆ ಮೂರ್ನಾಲ್ಕು ವರ್ಷಗಳಿಂದ ಪರಿಚಯ. ಬ್ಯುಸಿನೆಸ್ ಬಗ್ಗೆ ಮಾತನಾಡುತ್ತಿದ್ದೆವು. ಇತ್ತೀಚಿಗೆ ದರ್ಶನ್ ತೋಟದಲ್ಲಿ ಸಂದೇಶ್ ಸಿಕ್ಕಿದ್ರು. ಹರ್ಷ ಪೋಲಿ, ಸಾಲ ಮಾಡಿದ್ದಾರೆ ಅಂತ ಆಡಿಯೋದಲ್ಲಿ ಹೇಳಿದ್ದಾರೆ, ಪೋಲೀ ಆಗಿದ್ದರೆ ಬ್ಯುಸಿನೆಸ್ ಬಗ್ಗೆ ನನ್ನ ಬಳಿ ಅವರ ಮಾತನಾಡುತ್ತಿರಲಿಲ್ಲ" ಎಂದಿದ್ದಾರೆ.

"ಇನ್ನು ಕಾಲಿಗೆ ಬಿದ್ದರು ಎಂದು ಆಡಿಯೋದಲ್ಲಿ ಹೇಳಿದ್ದಾರೆ. ದೇವರ ದಯೆಯಿಂದ ಕಾಲಿಗೆ ಬೀಳುವ ಸ್ಥಿತಿ ಬಂದಿಲ್ಲ. ಸಂದೇಶ್ ಅವರೇ ಅಂತ ನಾನು ಮಾತನಾಡುವುದು. ಸಂದೇಶ್ ಮಾತನಾಡಿರುವುದು ಅಲ್ಲ ಅಂತ ಅನಿಸುತ್ತೆ. ಒಂದು ವೇಳೆ ಆಗಿದ್ದರೆ ಇದಕ್ಕೆ ಸಂದೇಶ್ ಅವರೇ ಪ್ರತಿಕ್ರಿಯೆ ನೀಡಬೇಕು" ಎಂದು ಹೇಳಿದ್ದಾರೆ.
ಗಲಾಟೆ ಆಗಿದ್ದು ನಿಜ ಎಂದು ಹೇಳಿರುವ ಹರ್ಷ, "ಆ ಸಮಯದಲ್ಲಿ ನಮ್ಮ ಇಬ್ಬರೂ ಕುಟುಂಬ ಸ್ನೇಹಿತರು ಇದ್ದರು. ಮಕ್ಕಳು ಮತ್ತು ಪತ್ನಿ ಸಹ ಜೊತೆಯಲ್ಲೇ ಇದ್ದರು. 15 ಜನ ಇರಲಿಲ್ಲ, ಕೇವಲ 8 ಮಂದಿ ಇದ್ದೆವು. ದರ್ಶನ್ ಫೋನ್ ಮಾಡಿ ಊಟಕ್ಕೆ ಬನ್ನಿ ಎಂದು ಹೇಳಿದ್ದರು" ಎಂದು ಹರ್ಷ ಮೆಲಂಟಾ ಹೇಳಿದ್ದಾರೆ.
"ದರ್ಶನ್ ಬೈದಿದ್ದು ಹೌದು, ಆ ಸಮಯದಲ್ಲಿ ಸಂದೇಶ್ ಕೂಡ ಬಂದರು. ನನಗೆ ದರ್ಶನ್ ಮಕ್ಕಳನ್ನು ಕರ್ಕೊಂಡು ರೂಮ್ ಗೆ ಹೋಗಿ ಎಂದು ದರ್ಶನ್ ಹೇಳಿದ್ರು. ಇದು ಹಳೆಯ ಪ್ರಕರಣದ ಹಾದಿ ತಪ್ಪಿಸುವ ಕೆಲಸ ಆಗುತ್ತಿದೆ' ಎಂದಿದ್ದಾರೆ.
ಇನ್ನು ಅರುಣಾ ಕುಮಾರಿ ಪ್ರಕರಣದ ಬಗ್ಗೆ ಮಾತನಾಡಿರುವ ಹರ್ಷ "ತನಿಖೆ ನಡೆಯುತ್ತಿದೆ. ನನ್ನನ್ನು ಕರೆದಿದ್ದರು, ನಾನು ಹೋಗಿ ಹೇಳಿಕೆ ನೀಡಿದ್ದೇನೆ. ಅರುಣಾ ಕಾಮಾರಿ ನನಗೆ ಗೊತ್ತಿಲ್ಲ, ಅವರನ್ನು ಈ ಪ್ರಕರಣಕ್ಕೂ ಮೊದಲು ಭೇಟಿಯಾಗಿಲ್ಲ. ಈ ಬಗ್ಗೆ ದರ್ಶನ್ ಸಂಪೂರ್ಣವಾಗಿ ಹೇಳಿದ್ದಾರೆ. ಇದರಲ್ಲಿ ನಮ್ಮನ್ನು ಸಿಲುಕಿ ಹಾಕುವ ಯತ್ನ ನಡೆಯತ್ತಿದೆ. ಪೊಲೀಸ್ ಇಲಾಖೆ ಸತ್ಯ ಬಯಲಿಗೆಳೆಯುತ್ತದೆ" ಎಂದಿದ್ದಾರೆ.
"ದರ್ಶನ್ ಗೆ ಭವಿಷ್ಯದಲ್ಲಿ ಹರ್ಷನಿಂದ ವೋಸ ಆಗುತ್ತೆ ಎನ್ನುವ ಕಾರಣಕ್ಕೆ ಉಮಾಪತಿ ಅವರೇ ಮಾಡಿಸಿದ್ದು ಅಂತ ಅರುಣಾ ಕುಮಾರಿ ಹೇಳುತ್ತಿದ್ದಾರೆ. ಆದರೆ ಸತ್ಯ ಸದ್ಯದಲ್ಲೇ ಹೊರಬೀಳಲಿದೆ" ಎಂದು ಹರ್ಷ ಹೇಳಿದ್ದಾರೆ.


Click it and Unblock the Notifications











