ಅಂದು ದರ್ಶನ್ ಚಿತ್ರಕ್ಕೆ ರವಿ ಬೆಂಬಲ, ಇಂದು ರವಿ ಸಿನಿಮಾಗೆ ದಾಸ ಸಾಥ್

ನಟ ದರ್ಶನ್ ಇದೀಗ ಮೊದಲ ಬಾರಿಗೆ ಒಂದು ಸಿನಿಮಾದ ಹಾಡನ್ನು ಹಾಡಿದ್ದಾರೆ. ಅದು ನಟ ರವಿಚಂದ್ರನ್ ಅವರ ಸಿನಿಮಾ ಎನ್ನುವುದು ಮತ್ತೊಂದು ವಿಶೇಷ.

ರವಿಚಂದ್ರನ್ ನಟನೆಯ 'ದಶರಥ' ಸಿನಿಮಾದ ಟೈಟಲ್ ಸಾಂಗ್ ಅನ್ನು ದರ್ಶನ್ ಬಳಿ ಹಾಡಿನ ಬೇಕು ಎನ್ನುವುದು ನಿರ್ದೇಶಕ ಎಮ್ ಎಸ್ ರಮೇಶ್ ಅವರ ಆಸೆಯಾಗಿತ್ತು. ಅದೇ ರೀತಿ ದರ್ಶನ್ ಈ ಸಿನಿಮಾಗೆ ಸಾಥ್ ನೀಡುತ್ತಿದ್ದಾರೆ.

ಆದರೆ, ದರ್ಶನ್ ಈ ಸಿನಿಮಾದ ಹಾಡು ಹಾಡುವುದರ ಬದಲಿಗೆ ಸಾಹಿತ್ಯವನ್ನು ಓದಿದ್ದಾರೆ. ದರ್ಶನ್ ತಮ್ಮದೆ ಸ್ಟೈಲ್ ನಲ್ಲಿ ಹಾಡಿಗೆ ಹೊಸ ರೂಪ ನೀಡಿದ್ದಾರೆ. ಇದು ಚಿತ್ರತಂಡಕ್ಕೂ ಖುಷಿ ನೀಡಿದೆ.

ಈ ಹಿಂದೆ ದರ್ಶನ್ ಸಿನಿಮಾಗೆ ರವಿಚಂದ್ರನ್ ಸಾಥ್ ನೀಡಿದ್ದು, ಇದೀಗ ರವಿಚಂದ್ರನ್ ಚಿತ್ರಕ್ಕೆ ದರ್ಶನ್ ಬೆಂಬಲ ನೀಡಿದ್ದಾರೆ. ಮುಂದೆ ಓದಿ...

'ಅಯ್ಯ' ಸಿನಿಮಾಗೆ ರವಿ ಮ್ಯೂಸಿಕ್

'ಅಯ್ಯ' ಸಿನಿಮಾಗೆ ರವಿ ಮ್ಯೂಸಿಕ್

ದರ್ಶನ್ ಹಾಗೂ ರಕ್ಷಿತಾ ಕಾಂಬಿನೇಶನ್ ನಲ್ಲಿ ಬಂದ 'ಅಯ್ಯ' ಸಿನಿಮಾ ಮ್ಯೂಸಿಕಲಿ ದೊಡ್ಡ ಹಿಟ್ ಆಗಿತ್ತು. ಈ ಸಿನಿಮಾಗೆ ಸಂಗೀತ ನೀಡಿದ್ದು, ರವಿಚಂದ್ರನ್. ಆ ವರೆಗೆ ತಮ್ಮ ಸಿನಿಮಾಗಳಿಗೆ ಮಾತ್ರ ಮ್ಯೂಸಿಕ್ ಮಾಡುತ್ತಿದ್ದ ರವಿಚಂದ್ರನ್ 'ಅಯ್ಯ' ಹಾಡುಗಳನ್ನು ನೀಡಿ ಸಿನಿಮಾದ ಗೆಲುವಿಗೆ ಕಾರಣರಾದರು.

ರವಿ ಸಿನಿಮಾಗೆ ದರ್ಶನ್ ಧ್ವನಿ

ರವಿ ಸಿನಿಮಾಗೆ ದರ್ಶನ್ ಧ್ವನಿ

ಇದೀಗ ರವಿಚಂದ್ರನ್ ನಟನೆಯ 'ದಶರಥ' ಸಿನಿಮಾದ ಹಾಡಿಗೆ ದರ್ಶನ್ ಧ್ವನಿ ನೀಡಿದ್ದಾರೆ. ಇದು ಎಂ ಎಸ್ ರಮೇಶ್ ನಿರ್ದೇಶನದ ಸಿನಿಮಾವಾಗಿದೆ. ಚಿತ್ರದ ನಾಯಕನ ಪಾತ್ರವನ್ನು ದರ್ಶನ್ ವಿವರಿಸಲಿದ್ದಾರೆ. 'ಚಂದು' ಸಿನಿಮಾದ ನಟಿ ಸೋನಿಯಾ ಅಗರ್ವಾಲ್ ಈ ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ.

'ಕುರುಕ್ಷೇತ್ರ' ಸಿನಿಮಾದಲ್ಲಿ ಒಟ್ಟಿಗೆ ನಟನೆ

'ಕುರುಕ್ಷೇತ್ರ' ಸಿನಿಮಾದಲ್ಲಿ ಒಟ್ಟಿಗೆ ನಟನೆ

ರವಿಚಂದ್ರನ್ ಹಾಗೂ ದರ್ಶನ್ 'ಕುರುಕ್ಷೇತ್ರ' ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ದರ್ಶನ್ ದುರ್ಯೋಧನ ಪಾತ್ರದಲ್ಲಿ ಹಾಗೂ ರವಿಚಂದ್ರನ್ ಕೃಷ್ಣನಾಗಿ ನಟಿಸುತ್ತಿದ್ದಾರೆ. 'ಕುರುಕ್ಷೇತ್ರ' ಬಹು ತಾರಾಗಣದ ಸಿನಿಮಾವಾಗಿದ್ದು, ಈ ಇಬ್ಬರು ನಟರು ಒಂದೇ ಸಿನಿಮಾದಲ್ಲಿ ನೋಡುವ ಅವಕಾಶ ಅಭಿಮಾನಿಗಳದ್ದಾಗಿದೆ.

'ಭರ್ಜರಿ' ಚಿತ್ರಕ್ಕೆ ಧ್ವನಿ ನೀಡಿದ್ದ ಡಿ ಬಾಸ್

'ಭರ್ಜರಿ' ಚಿತ್ರಕ್ಕೆ ಧ್ವನಿ ನೀಡಿದ್ದ ಡಿ ಬಾಸ್

ಈ ಹಿಂದೆ 'ಭರ್ಜರಿ' ಸಿನಿಮಾಗೆ ದರ್ಶನ್ ಧ್ವನಿ ನೀಡಿದ್ದರು. ಸಿನಿಮಾದ ನಿರೂಪಣೆಯನ್ನು ಡಿ ಬಾಸ್ ತಮ್ಮದೆ ಸ್ಟೈಲ್ ನಲ್ಲಿ ಮಾಡಿದ್ದರು. ಧ್ರುವ ಸರ್ಜಾ ಸಿನಿಮಾಗೆ ದರ್ಶನ್ ಧ್ವನಿ ಶಕ್ತಿ ತುಂಬಿತ್ತು. ಸಿನಿಮಾ ನೂರು ದಿನಗಳ ಯಶಸ್ವಿ ಪ್ರದರ್ಶನ ಕಂಡಿತ್ತು.

More from Filmibeat

English summary
Actor Darshan gave his voice to Ravichandran's 'Dasharatha' kannada movie song.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X