twitter
    For Quick Alerts
    ALLOW NOTIFICATIONS  
    For Daily Alerts

    ಹಂಪಿ ಉತ್ಸವದಲ್ಲಿ ಲವರ್ಸ್ ಗೆ ಕಿವಿಮಾತು ಹೇಳಿದ ದಾಸ

    |

    Recommended Video

    ಹಂಪಿ ಉತ್ಸವದಲ್ಲಿ ಲವರ್ಸ್ ಗೆ ಕಿವಿಮಾತು ಹೇಳಿದ ದಾಸ..! | FILMIBEAT KANNADA

    ನಟ ದರ್ಶನ್ ಅವರು ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಹೊಸ ಕಲಾವಿದರ ಚಿತ್ರಗಳನ್ನ ಬೆಂಬಲಿಸುತ್ತಿದ್ದಾರೆ. ಬರಿ ಚಿತ್ರರಂಗದಲ್ಲಿ ಮಾತ್ರವಲ್ಲದೇ ಯುವಕರಿಗೆ ಸ್ಫೂರ್ತಿಯಾಗುವಂತಹ ಕೆಲಸಗಳಲ್ಲಿ ಕೂಡ ತೊಡಗಿಕೊಳ್ತಿದ್ದಾರೆ.

    ಹುಟ್ಟುಹಬ್ಬದ ದಿನ ದವಸ ಧಾನ್ಯಗಳನ್ನ ಸಂಗ್ರಹಿಸಿ ಅನಾಥಾಶ್ರಮಗಳಿಗೆ ಹಂಚಿದರು. ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿಯಾಗಿರುವ ದರ್ಶನ್, ಗಿಡಗಳನ್ನ ನೆಡಿ, ಅರಣ್ಯ ಉಳಿಸಿ ಅಭಿಯಾನಕ್ಕೆ ಚಾಲನೆ ನೀಡಿದ್ರು. ಹೀಗೆ, ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನ ಕೊಡ್ತಿರುವ ದಾಸ, ಹಂಪಿ ಉತ್ಸವದಲ್ಲಿ ಲವರ್ಸ್ ಗೆ ಒಂದು ವಿಶೇಷವಾದ ಕಿವಿ ಮಾತನ್ನ ಹೇಳಿದ್ದಾರೆ.

    ಗುರುವಿಗಾಗಿ ಸುದೀಪ್, ಸ್ನೇಹಿತನಿಗಾಗಿ ದರ್ಶನ್ ಮುಖಾಮುಖಿ ಆಗ್ತಾರಾ? ಗುರುವಿಗಾಗಿ ಸುದೀಪ್, ಸ್ನೇಹಿತನಿಗಾಗಿ ದರ್ಶನ್ ಮುಖಾಮುಖಿ ಆಗ್ತಾರಾ?

    ಇದು ಜನರಲ್ ಆಗಿ ಹೇಳಿದ್ರು, ಅದರ ಹಿಂದೆ ಬಲವಾದ ಕಾರಣವೂ ಇತ್ತು. ಅಷ್ಟಕ್ಕೂ, ದರ್ಶನ್ ಹೇಳಿದ ಬುದ್ದಿವಾದ ಏನು? ಪ್ರೇಮಿಗಳಿಗೆ ದಾಸ ಕೊಟ್ಟ ಸಲಹೆ ಏನು? ಮುಂದೆ ಓದಿ....

    ಹಂಪಿಯನ್ನ ಕಾಪಾಡಬೇಕಿದೆ

    ಹಂಪಿಯನ್ನ ಕಾಪಾಡಬೇಕಿದೆ

    ''ಹಂಪಿ ಉತ್ಸವ ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿಕೊಂಡಿದೆ. ಇಲ್ಲಿರುವ ಕಟ್ಟಡಗಳು, ಕೃಷ್ಣದೇವರಾಯ ಬೆಳಸಿದ ಸಂಸ್ಕೃತಿಯನ್ನ ನಾವು ಕಾಪಾಡಬೇಕಿದೆ. ಇನ್ನು ನೂರು ಶತಮಾನ ಕಳೆದರೂ ಈ ರೀತಿ ಕಲ್ಲಿನಲ್ಲಿ ಕಟ್ಟಡಗಳನ್ನ ಕಟ್ಟಲು ಸಾಧ್ಯವಿಲ್ಲ. ಹಾಗಾಗಿ ಇಲ್ಲಿರುವ ಎಲ್ಲವನ್ನ ಉಳಿಸಿಕೊಳ್ಳಬೇಕು'' ಎಂದು ನಟ ದರ್ಶನ್ ವಿನಂತಿಸಿದ್ದಾರೆ.

    ವಿಮರ್ಶಕರ ಲೆಕ್ಕಾಚಾರದಲ್ಲಿ 'ಯಜಮಾನ' ಹೇಗಿದೆ: ಯಾವ ಪತ್ರಿಕೆ ಏನು ಹೇಳಿದೆ?ವಿಮರ್ಶಕರ ಲೆಕ್ಕಾಚಾರದಲ್ಲಿ 'ಯಜಮಾನ' ಹೇಗಿದೆ: ಯಾವ ಪತ್ರಿಕೆ ಏನು ಹೇಳಿದೆ?

    ಲವರ್ಸ್ ಹೀಗೆ ಮಾಡಬೇಡಿ

    ಲವರ್ಸ್ ಹೀಗೆ ಮಾಡಬೇಡಿ

    ''ಮುಂದಿನ ಪೀಳಿಗೆಯವರು ಇದನ್ನೆಲ್ಲಾ ನೋಡಬೇಕು. ನಾವು ನೋಡಿದ್ದೀವಿ ನಮ್ಮ ಮಕ್ಕಳು ಇದನ್ನ ನೋಡಬೇಕು. ಅದರ ಮೇಲೆ ಕೆತ್ತನೆ ಮಾಡುವುದು, ಅದರ ಮೇಲೆ ಹೆಸರುಗಳನ್ನ ಹಾಕುವುದು ಬೇಡ. ವಿಶೇಷವಾಗಿ ಲವರ್ಸ್ ಗಳು ಅದನ್ನೆಲ್ಲಾ ಮಾಡ್ತಾರೆ, ಅದೆಲ್ಲ ಬೇಡ'' ಎಂದು ದರ್ಶನ್ ಮನವಿ ಮಾಡಿಕೊಂಡರು.

    ದರ್ಶನ್ ಅವರ ಮತ್ತೊಂದು ಆಸೆಯನ್ನು ಈಡೇರಿಸುತ್ತಾರಾ ಮುನಿರತ್ನ?ದರ್ಶನ್ ಅವರ ಮತ್ತೊಂದು ಆಸೆಯನ್ನು ಈಡೇರಿಸುತ್ತಾರಾ ಮುನಿರತ್ನ?

    ಶ್ರೀಕೃಷ್ಣ ದೇವರಾಯ ಪಾತ್ರ ಮಾಡುವ ಆಸೆ

    ಶ್ರೀಕೃಷ್ಣ ದೇವರಾಯ ಪಾತ್ರ ಮಾಡುವ ಆಸೆ

    ಈಗಾಗಲೇ ಸಂಗೊಳ್ಳಿ ರಾಯಣ್ಣ, ಕುರುಕ್ಷೇತ್ರ ಅಂತಹ ದೊಡ್ಡ ಸಿನಿಮಾಗಳನ್ನ ಮಾಡಿರುವ ದರ್ಶನ್ ಈಗ ಮದಕರಿ ನಾಯಕ ಚಿತ್ರವನ್ನ ಮಾಡುತ್ತಿದ್ದಾರೆ. ಈ ಮಧ್ಯೆ ಶ್ರೀಕೃಷ್ಣ ದೇವರಾಯರ ಬಗ್ಗೆ ಸಿನಿಮಾ ಮಾಡುವ ಒಲವು ವ್ಯಕ್ತಪಡಿಸಿದ್ದಾರಂತೆ. ಈ ಬಗ್ಗೆ ನಿರ್ಮಾಪಕ ಮುನಿರತ್ನ ಕೂಡ ಒಲವು ಹೊಂದಿದ್ದಾರೆ ಎನ್ನಲಾಗಿದೆ.

    ಬಾಗಲಕೋಟೆಯಲ್ಲಿ ಡಿ ಫ್ಯಾನ್ಸ್ ಕಡೆಯಿಂದ ಗೋ ಪೂಜೆ, ಅನ್ನ ಸಂತರ್ಪಣೆಬಾಗಲಕೋಟೆಯಲ್ಲಿ ಡಿ ಫ್ಯಾನ್ಸ್ ಕಡೆಯಿಂದ ಗೋ ಪೂಜೆ, ಅನ್ನ ಸಂತರ್ಪಣೆ

    ಐತಿಹಾಸಿಕ ಸ್ಥಳಗಳನ್ನ ಉಳಿಸಬೇಕಿದೆ

    ಐತಿಹಾಸಿಕ ಸ್ಥಳಗಳನ್ನ ಉಳಿಸಬೇಕಿದೆ

    ನಟ ದರ್ಶನ್ ಅವರು ಹೇಳಿದ ಮಾತಿನಲ್ಲಿ ಸತ್ಯವಿದೆ. ಇತ್ತೀಚಿನ ದಿನಗಳಲ್ಲಿ ಐತಿಹಾಸಿಕ ಸ್ಥಳಗಳನ್ನ ಹಾಳು ಮಾಡಲಾಗುತ್ತಿದೆ. ಕೆಲವು ದುಷ್ಕರ್ಮಿಗಳು ತಮ್ಮ ಖಾಸಗಿ ವಿಷ್ಯಗಳಿಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನ ರಕ್ಷಣೆ ಮಾಡಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ.

    Read more about: darshan ದರ್ಶನ್
    English summary
    Challenging star darshan has gave most important suggestion to lovers in hampi utsav 2019. he was chief guest in hampi utsav 2019.
    Monday, March 4, 2019, 13:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X