For Quick Alerts
  ALLOW NOTIFICATIONS  
  For Daily Alerts

  ದಾಸ ದರ್ಶನ್ ಗೆ ತುಂಬಾ ವಿಶೇಷವಾದ ಉಡುಗೊರೆ ನೀಡಿದ ಅಭಿಮಾನಿ

  |
  ಅಭಿಮಾನಿ ಕಮ್ ನಟನಿಂದ ಸ್ಪೆಷಲ್ ಗಿಫ್ಟ್ ಪಡೆದ ದರ್ಶನ್ | FILMIBEAT KANNADA

  ಹೊಸ ನಟರು, ಹೊಸ ನಿರ್ದೇಶಕರು, ಹೊಸ ಪ್ರತಿಭೆಗಳಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದಾ ಬೆಂಬಲಿಸುತ್ತಾರೆ. ನೂತನವಾಗಿ ಇಂಡಸ್ಟ್ರಿಗೆ ಬರುವ ಕಲಾವಿದರ ಚಿತ್ರಗಳಿಗೆ ಸಾಥ್ ನೀಡಿದ ಡಿ-ಬಾಸ್, ಟ್ರೈಲರ್, ಟೀಸರ್ ಅಥವಾ ಹಾಡುಗಳನ್ನ ಬಿಡುಗಡೆ ಮಾಡಿಕೊಡ್ತಾರೆ.

  ಆದ್ರೆ, ಆ ಹೊಸ ಕಲಾವಿದರು ದರ್ಶನ್ ಗೆ ವಾಪಸ್ ಏನು ಕೊಡ್ತಾರೆ? ಗೊತ್ತಿಲ್ಲ. ಬಟ್, ಹೀಗೆ ಹೊಸದಾಗಿ ಚಿತ್ರರಂಗಕ್ಕೆ ಬರುವ ಸಾಕಷ್ಟು ಕಲಾವಿದರಲ್ಲಿ ಡಿ ಬಾಸ್ ಅವರ ಅಭಿಮಾನಿಗಳು ಕೂಡ ಇರ್ತಾರೆ. ಅದನ್ನ ಆ ನಟರು ಬಹಳ ಹೆಮ್ಮೆಯಿಂದ, ಖುಷಿಯಿಂದ ಹೇಳಿಕೊಳ್ತಾರೆ.

  ಉಪೇಂದ್ರ-ದರ್ಶನ್ ಬಗ್ಗೆ ಸಾಧು ಇಷ್ಟೊಂದು ದೊಡ್ಡ ಮಾತು ಹೇಳಿದ್ದೇಕೆ.?

  ಇದೀಗ, ಇಂತಹ ಅಭಿಮಾನಿ ಕಮ್ ನಟನೊಬ್ಬ 'ಯಜಮಾನ'ನಿಗೆ ವಿಶೇಷವಾದ ಉಡುಗೊರೆಯೊಂದನ್ನ ನೀಡಿದ್ದಾರೆ. ಬಹುಶಃ ಇಂತಹ ಗಿಫ್ಟ್ ಡಿ-ಬಾಸ್ ಗೆ ಇದುವರೆಗೂ ಸಿಕ್ಕಿರಲಿಲ್ಲ ಅನ್ಸುತ್ತೆ. ಅಷ್ಟಕ್ಕೂ, ಆ ಉಡುಗೊರೆ ಏನು.? ಯಾರು ಕೊಟ್ಟಿದ್ದು.? ಹೇಗಿದೆ ಆ ಸ್ಪೆಷಲ್ ಗಿಫ್ಟ? ಮುಂದೆ ನೋಡಿ....

  ದರ್ಶನ್ ಕಲಾಕೃತಿ

  ದರ್ಶನ್ ಕಲಾಕೃತಿ

  ಸಾಮಾನ್ಯವಾಗಿ ಪ್ರತಿಮೆಗಳ ರೂಪದಲ್ಲಿ, ಆಟೋಗಳ ಮೇಲೆ, ಬೈಕ್ ಮೇಲೆ, ಮನೆಯ ಗೋಡೆಗಳ ಮೇಲೆ ದರ್ಶನ್ ಅವರ ಪೋಸ್ಟರ್ ಅಂಟಿಸಿಕೊಳ್ಳುವುದು ಸಾಮಾನ್ಯ. ಆದ್ರೆ, ಇಲ್ಲೊಬ್ಬ ಅಭಿಮಾನಿ ದರ್ಶನ್ ಅವರ ಕಲಾಕೃತಿಯನ್ನ ಶಿಲ್ಪಕಲೆಯಲ್ಲಿ ನಿರ್ಮಿಸಿ ಅದನ್ನ ದರ್ಶನ್ ಅವರಿಗೆ ತಂದು ಕೊಟ್ಟಿದ್ದಾರೆ.

  ದರ್ಶನ್-ರಾಕ್ಲೈನ್ ಚಿತ್ರಕ್ಕಾಗಿ ಸುದೀಪ್ ಇಷ್ಟೊಂದು ತ್ಯಾಗಕ್ಕೆ ಸಿದ್ಧವಾದ್ರಾ.?

  ಕೈಬೆರಳಿನ ಗಾತ್ರದ ಪ್ರತಿಮೆ

  ಕೈಬೆರಳಿನ ಗಾತ್ರದ ಪ್ರತಿಮೆ

  ಅಂದ್ಹಾಗೆ, ಈ ಕಲಾಕೃತಿ ಭಾರಿ ಗಾತ್ರದ್ದು, ಅಥವಾ ಎಲ್ಲೋ ಪ್ರತಿಷ್ಠಾನ ಮಾಡಿದ್ದಾರೆ ಎಂದುಕೊಳ್ಳಬೇಡಿ. ಇದು ಕೇವಲ ಕೈಬೆರಳಿನ ಗಾತ್ರದಲ್ಲಿರುವ ದರ್ಶನ್ ಕಲಾಕೃತಿ. ತಮ್ಮ ಅಂಗೈನಲ್ಲಿ ಇದನ್ನ ಹಿಡಿದುಕೊಳ್ಳಬಹುದು. ಅಷ್ಟು ಚಿಕ್ಕದಾದ, ಅಷ್ಟು ಸುಂದರವಾದ ಪ್ರತಿಮೆ.

  ಚಿತ್ರದುರ್ಗದ ದರ್ಶನ್ ಅಭಿಮಾನಿಯ ಕೆಲಸಕ್ಕೆ 'ಡಿ' ಭಕ್ತರು ಖುಷಿಯೋ ಖುಷಿ

  ಕೊಟ್ಟಿದ್ದು ಯಾರು ಗೊತ್ತಾ.?

  ಕೊಟ್ಟಿದ್ದು ಯಾರು ಗೊತ್ತಾ.?

  ಅಂದ್ಹಾಗೆ, ದರ್ಶನ್ ಗೆ ಈ ಗಿಫ್ಟ್ ಕೊಟ್ಟಿದ್ದು ಅಭಿಮಾನಿ ಕಮ್ ನಟ ಆದರ್ಶ್. ಗಾಂಚಲಿ ಚಿತ್ರದಲ್ಲಿ ನಟಿಸಿರುವ ನಟ ಆದರ್ಶ್ ಅವರು ಚಾಲೆಂಜಿಂಗ್ ಸ್ಟಾರ್ ಗೆ ಈ ಉಡುಗೊರೆ ನೀಡಿದ್ದಾರೆ. ಆದ್ರೆ, ಈ ಕಲಾಕೃತಿಯನ್ನ ನಿರ್ಮಿಸಿದ್ದು ಯಾರು.? ಇದರ ವಿಶೇಷತೆ ಏನು ಎಂಬುದರ ಬಗ್ಗೆ ಮಾಹಿತಿ ಇಲ್ಲ.

  ದರ್ಶನ್ 'ಮದಕರಿ ನಾಯಕ' ಚಿತ್ರಕ್ಕೆ ನಾಯಕಿ ಇವರಾಗ್ಬೇಕಂತೆ

  ಗಾಂಚಲಿ ಚಿತ್ರದ ಬಗ್ಗೆ ....?

  ಗಾಂಚಲಿ ಚಿತ್ರದ ಬಗ್ಗೆ ....?

  ಆದರ್ಶ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರ ನವೆಂಬರ್ 30 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ಆರಂಭದಲ್ಲಿದ್ದ ನಿರ್ದೇಶಕರು ಈಗಿಲ್ಲ. ಹಾಗಾಗಿ, 'ಜೈ ಮಾರುತಿ ಪ್ರೊಡಕ್ಷನ್' ಹೆಸರಿನಲ್ಲಿ ರಿಲೀಸ್ ಮಾಡುತ್ತಿದೆ. ಚಿತ್ರದಲ್ಲಿ ಭಜರಂಗಿ ಲೋಕಿ, ಶರತ್ ಲೋಹಿತಾಶ್ವ, ನವ್ಯ, ಅಖೀಲಾ, ಸಂದೀಪ್‌, ಪ್ರದೀಪ್‌ ಪೂಜಾರಿ, ವರದನ್‌, ರಾಜು ತಾಳಿಕೋಟೆ, ಮಿತ್ರ, ಉಮೇಶ್‌ ಇತರರು ಕಾಣಿಸಿಕೊಂಡಿದ್ದಾರೆ.

  'ಧ್ರುವ ಸರ್ಜಾ ಮುಂದಿನ ದರ್ಶನ್' ಅಂದಿದ್ದಕ್ಕೆ ಆಕ್ಷನ್ ಪ್ರಿನ್ಸ್ ಹೇಳಿದ್ದೇನು.?

  English summary
  Gaanchali actor Aadarsh presented challenging star darshan with a miniature sculpture of the star.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X