ಅಂಬಿ ಪುತ್ರ ಅಭಿಷೇಕ್ ಮತ್ತು 'ದೊಡ್ಮಗ' ದರ್ಶನ್ ಕೊಟ್ರು ಬ್ರೇಕಿಂಗ್ ನ್ಯೂಸ್

Recommended Video

ದರ್ಶನ್ ಹಾಗು ಅಂಬರೀಷ್ ಮಗ ಅಭಿಷೇಕ್ ಕೊಟ್ಟಿದ್ದಾರೆ ಅಚ್ಚರಿಯ ಸುದ್ದಿ | FILMIBEAT KANNADA

ರೆಬೆಲ್ ಸ್ಟಾರ್ ಅಂಬರೀಶ್ ನಿಧನದ ನಂತರ ಅಂಬಿ ಪುತ್ರ ಅಭಿಷೇಕ್ ಒಬ್ಬಂಟಿಯಾದರು ಎಂಬ ಬೇಸರ ಅಭಿಮಾನಿಗಳನ್ನ ಕಾಡ್ತಿತ್ತು. ಇಂತಹ ಸಮಯದಲ್ಲಿ ಈ ಚಿಂತೆಯನ್ನ ದೂರ ಮಾಡಿದ್ದು 'ಯಜಮಾನ' ದರ್ಶನ್. ಅಂಬಿ ಅಂತ್ಯಕ್ರಿಯೆ ವೇಳೆ ಕೊನೆಯವರೆಗೂ ಅಭಿಷೇಕ್ ಜೊತೆ ನಿಂತು ಸಮಾಧಾನ ಪಡಿಸಿದ ದಾಸ, ಅಂಬಿ ಪುತ್ರನಿಗೆ ಸಹೋದರನಾಗಿ ನಿಲ್ಲಲಿದ್ದಾರೆ ಎಂಬ ನಂಬಿಕೆ ಹುಟ್ಟಿಸಿದ್ದಾರೆ.

ದರ್ಶನ್, ನಟ ಅಂಬರೀಶ್ ಗೆ ದೊಡ್ಮಗ ಇದ್ದಂತೆ ಎಂಬ ಮಾತು ಇಂಡಸ್ಟ್ರಿಯಲ್ಲಿದೆ. ಅದರಂತೆ ದಾಸ ನಡೆದುಕೊಳ್ಳುತ್ತಿದ್ದಾರೆ ಕೂಡ. ಅಭಿಷೇಕ್ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರ ಅಮರ್ ಗೆ ಡಿ ಬಾಸ್ ಎಲ್ಲ ರೀತಿಯಲ್ಲೂ ಸಹಕಾರ, ಬೆಂಬಲ, ಬೆನ್ನೆಲುಬು ಆಗಿ ಇರಲಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಬಟ್, ಇಂತಹ ಬೆಳವಣಿಗೆಯ ಮಧ್ಯೆ ಅಭಿಮಾನಿಗಳಲ್ಲಿ ಒಂದು ನಿರೀಕ್ಷೆ ಇತ್ತು. ಅಮರ್ ಚಿತ್ರದಲ್ಲಿ ದರ್ಶನ್ ಅತಿಥಿ ಮಾತ್ರ ನಿರ್ವಹಿಸುತ್ತಾರಾ ಎಂಬ ಆಸೆ ಚಿಗುರೊಡೆದಿತ್ತು. ಬಹುಶಃ ಈ ಆಸೆ ನೆರವೇರಬಹುದು. ಅಂತಹದೊಂದು ಬ್ರೇಕಿಂಗ್ ಸುದ್ದಿ ಹರಿದಾಡುತ್ತಿದೆ. ಏನಿದು ಮುಂದೆ ಓದಿ....?

ಅಮರ್ ಚಿತ್ರದಲ್ಲಿ ದರ್ಶನ್.!

ಅಮರ್ ಚಿತ್ರದಲ್ಲಿ ದರ್ಶನ್.!

ಅಭಿಷೇಕ್ ನಟಿಸುತ್ತಿರುವ ಮೊದಲ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅತಿಥಿ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ನಿಜಕ್ಕೂ ದರ್ಶನ್ ಎಂಟ್ರಿಯಾಗಿದ್ದಾರಾ? ಯಾವ ಪಾತ್ರ, ಎಷ್ಟು ನಿಮಿಷ ಇರ್ತಾರೆ ಎಂಬುದು ಈಗ ಕುತೂಹಲವಾಗಿದೆ.

ಶೂಟಿಂಗ್ ಮುಗಿಸಿದ್ರಾ ದಾಸ

ಶೂಟಿಂಗ್ ಮುಗಿಸಿದ್ರಾ ದಾಸ

ಇತ್ತೀಚಿಗಷ್ಟೆ ಅಮರ್ ಚಿತ್ರೀಕರಣದಲ್ಲಿ ದರ್ಶನ್ ಭಾವಹಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಅಭಿಷೇಕ್ ಜೊತೆ ಕೂತು ದರ್ಶನ್ ಮೇಕಪ್ ಮಾಡಿಕೊಳ್ಳುತ್ತಿರುವ ವಿಡಿಯೋ ಬಹಿರಂಗವಾಗಿದೆ. ಅಲ್ಲಿಗೆ, ಅಮರ್ ಚಿತ್ರದಲ್ಲಿ ದರ್ಶನ್ ಆಕ್ಟ್ ಮಾಡಿರೋದು ಬಹುತೇಕ ಖಚಿತ ಎನ್ನಬಹುದು.

ಅಂಬಿ ಪುತ್ರನಿಗೆ ಸಿಕ್ತು ಡಿ ಬಾಸ್ ಬಲ

ಅಂಬಿ ಪುತ್ರನಿಗೆ ಸಿಕ್ತು ಡಿ ಬಾಸ್ ಬಲ

ಅಮರ್ ಚಿತ್ರದಲ್ಲಿ ಡಿ ಬಾಸ್ ಅಭಿನಯಿಸಿರುವುದರಿಂದ ಸಹಜವಾಗಿ ಈ ಚಿತ್ರಕ್ಕೆ ಮತ್ತಷ್ಟು ಶಕ್ತಿ ಸಿಕ್ಕಿದೆ. ಈಗ ದರ್ಶನ್ ಅಭಿಮಾನಿಗಳು ಅಮರ್ ಚಿತ್ರವನ್ನ ತಮ್ಮದೇ ಎಂದು ಸ್ವೀಕರಿಸ್ತಾರೆ.

ದರ್ಶನ್ ಜೊತೆ ಅಂಬರೀಶ್

ದರ್ಶನ್ ಜೊತೆ ಅಂಬರೀಶ್

ಹಾಗ್ನೋಡಿದ್ರೆ, ದರ್ಶನ್ ಅಭಿನಯಿಸಿದ್ದ ಹಲವು ಚಿತ್ರಗಳಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅತಿಥಿ ಮಾತ್ರ ಮಾಡಿದ್ದಾರೆ. ಮುಖ್ಯಪಾತ್ರವನ್ನ ನಿರ್ವಹಿಸಿದ್ದಾರೆ. ಅಣ್ಣಾವ್ರು, ಬುಲ್ ಬುಲ್, ಅಂಬರೀಶ್ ಅಂತಹ ಸಿನಿಮಾ ಅಂಬಿ ಮತ್ತು ದರ್ಶನ್ ಒಟ್ಟಿಗೆ ಅಭಿನಯಿಸಿದ್ದಾರೆ. ಈಗ ಅಂಬರೀಶ್ ಮಗನ ಜೊತೆ ದರ್ಶನ್ ಅಭಿನಯಿಸುವ ಮೂಲಕ ಅಂಬಿಯ ಅಭಿಮಾನವನ್ನ ಮೆರೆಯುತ್ತಿದ್ದಾರೆ.

More from Filmibeat

English summary
Challenging star darshan have done guest appearance in ambareesh son abhishek starrer first movie amar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X