Don't Miss!
- News
Chennai-Bengaluru Expressway: ₹16,000 ಕೋಟಿ ಯೋಜನೆಯಲ್ಲಿ ಶೇ.15 ಕಾಮಗಾರಿ ಪೂರ್ಣ- ಎಲ್ಲಿಂದ ಎಲ್ಲಿಯವರಿಗೆ? ಇಲ್ಲಿದೆ ಮಾಹಿತಿ
- Automobiles
ಹೊಸ ಸಿಯೆರಾ ಕಾರಿನ ವಿನ್ಯಾಸದ ಹಿಂದೆ ಇದೆ ರತನ್ ಟಾಟಾ ಐಡಿಯಾ
- Technology
ನೀವು ದಿನವೂ ಬಳಸುವ ಗೂಗಲ್ನ ಈ ಆಪ್ಗಳಲ್ಲಿ ಎಐ ಹೇಗೆ ಕೆಲಸ ಮಾಡಲಿದೆ!?; ಇಲ್ಲಿದೆ ವಿವರ
- Sports
U-19 Women's T20 World Cup 2023: ನ್ಯೂಜಿಲೆಂಡ್ ಮಣಿಸಿ ಫೈನಲ್ಗೆ ಲಗ್ಗೆ ಇಟ್ಟ ಭಾರತ ವನಿತೆಯರು
- Finance
PM kisan: ಬಜೆಟ್ನಲ್ಲಿ ಪಿಎಂ ಕಿಸಾನ್ ಯೋಜನೆ ಮೊತ್ತ ಏರಿಸಲಾಗುತ್ತಾ?
- Lifestyle
ತೂಕ ಇಳಿಕೆಗೆ ಟ್ರೈ ಮಾಡುತ್ತಿದ್ದೀರಾ? ಈ ಪಾನೀಯಗಳನ್ನು ನಿಮ್ಮ ತೂಕ ಇಳಿಕೆಯ ಡಯಟ್ನಲ್ಲಿ ಸೇರಿಸಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರೆದರೆ ಓಡೋಡಿ ಬರುವ ದತ್ತು ಮಗ
Recommended Video

ಸಾಮಾನ್ಯವಾಗಿ ಪ್ರಾಣಿಗಳು ಎಲ್ಲರಿಗೂ ಹೊಂದಿಕೊಳ್ಳುವುದಿಲ್ಲ. ಕೆಲವರು ಪ್ರಾಣಿಗಳನ್ನ ಪ್ರೀತಿ ಮಾಡಿದ್ರೆ ಇನ್ನು ಕೆಲಸವರು ಪ್ರಾಣಿ ಪಕ್ಷಿಗಳು ಅಂದರೆ ಮಾರುದ್ದ ದೂರ ಹೋಗುತ್ತಾರೆ. ಇನ್ನು ಸ್ಟಾರ್ ಗಳು ಸಿನಿಮಾ ಶೂಟಿಂಗ್ ಅಂತ ಸದಾ ಬ್ಯುಸಿ ಆಗಿರುತ್ತಾರೆ. ಇವುಗಳ ಮಧ್ಯೆ ಬಿಡುವು ಮಾಡಿಕೊಂಡು ಪ್ರಾಣಿಗಳನ್ನ ಸಾಕುತ್ತಾ ಬರುತ್ತಿರುವ ಏಕೈಕ ಕಲಾವಿದ ಚಾಲೆಂಜಿಂಗ್ ಸ್ಟಾರ್ ದರ್ಶನ್.
ಪ್ರಾಣಿಗಳು ಅಷ್ಟೇ ದರ್ಶನ್ ಅವರ ಜೊತೆ ಸಲೀಸಾಗಿ ಹೊಂದು ಕೊಳ್ಳುತ್ತವೆ ಎನ್ನುವುದು ಅವರ ಆಪ್ತ ವಲಯದಲ್ಲಿ ಕೇಳಿ ಬರುವ ಮಾತು. ಅದು ಕೇವಲ ಅವರು ಸಾಕಿರುವ ಪ್ರಾಣಿಗಳು ಮಾತ್ರವಲ್ಲ. ಚಿತ್ರೀಕರಣಕ್ಕಾಗಿ ಬರುವ ಪ್ರಾಣಿಗಳಿರಬಹುದು, ಬೇರೆ ಎಲ್ಲಾದರೂ ಹೋದಾಗ ಸಿಕ್ಕ ಪ್ರಾಣಿಗಳಿರಬಹುದು. ಅವು ಕೂಡ ದರ್ಶನ್ ಜೊತೆ ಬೇಗ ಬೆರೆತು ಕೊಳ್ಳುತ್ತವೆ.
ಡಿ ಬಾಸ್ ಜೊತೆ ಪ್ರಾಣಿಗಳು ಹೇಗೆ ಹೊಂದಿಕೊಳ್ಳುತ್ತವೆ ಎನ್ನುವುದಕ್ಕೆ ಉತ್ತಮ ನಿದರ್ಶನ ಇತ್ತೀಚಿಗಷ್ಟೆ ನಡೆದಿದೆ. ಮೈಸೂರಿನ ಮೃಗಾಲಯದ ಹುಲಿ ದರ್ಶನ್ ಜೊತೆ ನಡೆದುಕೊಂಡಿರುವ ರೀತಿ ನೋಡಿ ಅಲ್ಲಿದ್ದ ಅಭಿಮಾನಿಗಳು ಮತ್ತು ಜನರು ಬೆರಗಾಗಿದ್ದಾರೆ. ಹುಲಿ ಮತ್ತು ದರ್ಶನ್ ಮಧ್ಯೆ ನಡೆದ ಸನ್ನಿವೇಷ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

ಮಗನ ಹೆಸರು ಕರೆದೊಡನೆ ಓಡಿ ಬರುವ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೈಸೂರಿನ ಮೃಗಾಲಯದಲ್ಲಿ ಹುಲಿಯನ್ನು ದತ್ತು ಪಡೆದಿದ್ದಾರೆ. ಅದಕ್ಕೆ ತನ್ನ ಮಗನ ಹೆಸರನ್ನೇ ನಾಮಕರಣ ಮಾಡಿದ್ದಾರೆ ಎನ್ನುವುದು ವಿಶೇಷ. ದರ್ಶನ್ ಮೃಗಾಲಯಕ್ಕೆ ಭೇಟಿ ಕೊಟ್ಟಾಗ ಹುಲಿ ಬೋನಿನ ಬಳಿ ಹೋದಾಗ ವಿನೀಶ್ ಎಂದು ಕರೆದರೆ ಸಾಕು, ಹುಲಿ ದರ್ಶನ್ ಬಳಿ ಓಡೋಡಿ ಬರುತ್ತೆ.

ದರ್ಶನ್ ದತ್ತು ಪಡೆದಿರುವ ಹುಲಿ
ನಿನ್ನೆ ಹುಲಿ ದಿನಾಚರಣೆ ಹಾಗೂ ಯುವ ಸಂಘಟನೆ ಕಾರ್ಯಕ್ರಮಕ್ಕೆ ದರ್ಶನ್ ಆಗಮಿಸಿದ್ದರು. ಇದೇ ಸಮಯದಲ್ಲಿ ದರ್ಶನ್ ತಾವು ದತ್ತು ಪಡೆದಿರುವ ಹುಲಿಯೊಂದಿಗೆ ಕಾಲ ಕಳೆದರು. ಕಾರ್ಯಕ್ರಮಕ್ಕೆ ಮುಗಿಸಿ ಪುತ್ರ ವಿನೀಶ್ ಜೊತೆ ಹುಲಿ ವಿಕ್ಷಣೆ ಮಾಡಿದ್ದಾರೆ ದರ್ಶನ್. ಇದೆ ಹುಲಿಯನ್ನ ಸತತ 6 ವರ್ಷಗಳಿಂದ ದತ್ತು ಪಡೆಯುತ್ತಿದ್ದಾರೆ ಚಾಲೆಂಜಿಂಗ್ ಸ್ಟಾರ್ .

ವೈರಲ್ ಆದ ವಿಡಿಯೋ
ಸದ್ಯ ದರ್ಶನ್ ತಮ್ಮ ಮಗನ ಜೊತೆಯಲ್ಲಿ ದತ್ತು ಮಗನನ್ನು ನೋಡುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಇದೇ ವೇಳೆ ಪುತ್ರ ವಿನೀಶ್ ನಮ್ಮಿಬ್ಬರಲ್ಲಿ ಯಾರು ದೊಡ್ಡ ಹುಲಿ ಎಂದು ಪ್ರಶ್ನೆ ಮಾಡಿದ್ದಾರೆ. ದರ್ಶನ್ ನೀನೆ ದೊಡ್ಡ ಹುಲಿ ಮಗನೇ ಎಂದು ನಗುತ್ತಾ ಉತ್ತರಿಸಿದ್ದಾರೆ.

ಮತ್ತೆ ಆನೆ, ಹುಲಿಯನ್ನು ದತ್ತು ಪಡೆದ ದಾಸ
ಚಾಲೆಂಜಿಂಗ್ ಸ್ಟಾರ್ ಅರಣ್ಯ ಇಲಾಖೆಯ ರಾಯಭಾರಿ ಆಗುವ ಮುಂಚಿನಿಂದಲೂ ಹುಲಿ ಮತ್ತು ಆನೆಯನ್ನು ದತ್ತು ಪಡೆದಿದ್ದಾರೆ. ನಿನ್ನೆ ಮತ್ತೆ 2.75 ಸಾವಿರ ಪಾವತಿ ಮಾಡಿ ಹುಲಿ ಹಾಗೂ ಮಾದೇಶ ಎನ್ನುವ ಆನೆಯನ್ನು ದತ್ತು ಪಡೆದುಕೊಂಡಿದ್ದಾರೆ.