ಸಹೋದರನ ಚಿತ್ರಕ್ಕೆ ಬೆಂಬಲ ನೀಡಿದ ಡಿ ಬಾಸ್
Recommended Video

ಕನ್ನಡ ಸಿನಿಮಾರಂಗದಲ್ಲಿ ಸ್ಟಾರ್ ಡೈರೆಕ್ಟರ್ ಎಂದು ಅಭಿಮಾನಿಗಳಿಂದ ಕರೆಸಿಕೊಂಡಿರುವ ದಿನಕರ್ ತೂಗುದೀಪ ನಿರ್ದೇಶನದ 'ಲೈಫ್ ಜೊತೆ ಒಂದ್ ಸೆಲ್ಫಿ' ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ದಿನಕರ್ ತೂಗುದೀಪ ಡೈರೆಕ್ಷನ್ ನಲ್ಲಿ ಮೂಡಿ ಬರುತ್ತಿರುವ 4ನೇ ಚಿತ್ರ ಇದಾಗಿದ್ದು ಈಗಾಗಲೇ ಸಿನಿಮಾ ಸಾಕಷ್ಟು ವಿಚಾರಗಳಿಂದ ನಿರೀಕ್ಷೆಯನ್ನು ಹುಟ್ಟಿಸಿದೆ.
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್, ಲವ್ಲಿ ಸ್ಟಾರ್ ಪ್ರೇಮ್ , ಹರಿಪ್ರಿಯಾ ಅಭಿನಯದ 'ಲೈಫ್ ಜೊತೆ ಒಂದ್ ಸೆಲ್ಫಿ' ಚಿತ್ರದ ಟ್ರೈಲರ್ ಮತ್ತು ಆಡಿಯೋ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು ಸದ್ಯ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಆಗಿದೆ.
ಭರವಸೆ ಮೂಡಿಸಿರುವ 'ಲೈಫ್ ಜೊತೆ ಒಂದ್ ಸೆಲ್ಫಿ' ಚಿತ್ರದ ಪರವಾಗಿ ನಟ ದರ್ಶನ್ ಬೆಂಬಲ ಸೂಚಿಸಿದ್ದಾರೆ. ಹಾಗಾದರೆ ದರ್ಶನ್ ತಮ್ಮ ಸಹೋದರನ ಚಿತ್ರದ ಬಗ್ಗೆ ಹೇಳಿದ ಮಾತುಗಳೇನು? ಸಿನಿಮಾ ಬಿಡುಗಡೆ ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ.

ದಿನಕರ್ ಚಿತ್ರಕ್ಕೆ ದರ್ಶನ್ ಬೆಂಬಲ
ದಿನಕರ್ ತೂಗುದೀಪ ನಿರ್ದೇಶನ ಮಾಡಿರುವ ‘ಲೈಫ್ ಜೊತೆ ಒಂದ್ ಸೆಲ್ಫಿ' ಚಿತ್ರಕ್ಕೆ ಬೆಂಬಲ ನೀಡಿ ಎಂದು ದರ್ಶನ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. "ನನ್ನ ಸಹೋದರ ದಿನಕರ್ ನಿರ್ದೇಶನದಲ್ಲಿ ಮೂಡಿಬಂದಿರುವ 4ನೇ ಚಿತ್ರ ‘ಲೈಫ್ ಜೊತೆ ಒಂದ್ ಸೆಲ್ಫಿ' ಚಿತ್ರದ ಟ್ರೈಲರ್. ಅವನ 3 ಚಿತ್ರಗಳಿಗೂ ನೀಡಿದ ಪ್ರೋತ್ಸಾಹದಂತೆ ಈ ಚಿತ್ರಕ್ಕೂ ಸಹ ನಿಮ್ಮ ಬೆಂಬಲವಿರಲಿ. ಇದೇ ಆಗಸ್ಟ್ ತಿಂಗಳಲ್ಲಿ ಚಿತ್ರ ತೆರೆಕಾಣಲಿದೆ". ಎಂದು ಫೇಸ್ ಬುಕ್ ನಲ್ಲಿ ಬರೆದಿದ್ದಾರೆ.

ಯಶಸ್ವಿ ನಿರ್ದೇಶಕ ದಿನಕರ್
ಸ್ಯಾಂಡಲ್ ವುಡ್ ನಲ್ಲಿ ಮೂರು ಚಿತ್ರಗಳನ್ನು ಡೈರೆಕ್ಟ್ ಮಾಡಿ ಯಶಸ್ವಿ ನಿರ್ದೇಶಕ ಎಂದು ಹೆಸರು ಮಾಡಿರುವ ದಿನಕರ್ ತೂಗುದೀಪ ಡೈರೆಕ್ಷನ್ ನಲ್ಲಿ ಬರುತ್ತಿರುವ ನಾಲ್ಕನೇ ಚಿತ್ರ ‘ಲೈಫ್ ಜೊತೆ ಒಂದ್ ಸೆಲ್ಫಿ'.

ಪ್ರೇಮ್, ಪ್ರಜ್ವಲ್, ಹರಿಪ್ರಿಯಾ
‘ಲೈಫ್ ಜೊತೆ ಒಂದ್ ಸೆಲ್ಫಿ' ಮಲ್ಟಿ ಸ್ಟಾರರ್ ಸಿನಿಮಾ ಎಂದರೆ ತಪ್ಪಿಲ್ಲ. ಚಿತ್ರದಲ್ಲಿ ಹರಿಪ್ರಿಯಾ, ಪ್ರೇಮ್, ಪ್ರಜ್ವಲ್ ಸೇರಿದಂತೆ ಸುಧಾರಾಣಿ ಇನ್ನು ಅನೇಕ ಕಲಾವಿದರು ಅಭಿನಯ ಮಾಡಿದ್ದಾರೆ.

ಆಗಸ್ಟ್ ನಲ್ಲಿ ತೆರೆಗೆ ಬರಲಿರುವ ಚಿತ್ರ
ದಿನಕರ್ ತೂಗುದೀಪ ಅವರ ಪತ್ನಿ ಮಾನಸ ಬರೆದಿರುವ ಕಥೆಯನ್ನು ಆಧರಿಸಿ ಸಿನಿಮಾವೇ ‘ಲೈಫ್ ಜೊತೆ ಒಂದ್ ಸೆಲ್ಫಿ' ಉದ್ಯಮಿ ಸಮೃದ್ಧಿ ಮಂಜುನಾಥ್ ಅವರ ವಿರಾಟ್ ಸಾಯಿ ಕ್ರಿಯೇಷನ್ಸ್ ಅಡಿಯಲ್ಲಿ ಚಿತ್ರ ನಿರ್ಮಾಣ ಮಾಡುತಿದ್ದು ವಿ ಹರಿಕೃಷ್ಣ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.


Click it and Unblock the Notifications











