»   » ದರ್ಶನ್ ಮನೆಯಂಗಳದಲ್ಲಿ ಮತ್ತೊಂದು ಹೊಸ ಕಾರು

ದರ್ಶನ್ ಮನೆಯಂಗಳದಲ್ಲಿ ಮತ್ತೊಂದು ಹೊಸ ಕಾರು

Posted By:
Subscribe to Filmibeat Kannada
ದರ್ಶನ್ ಮನೆಯಂಗಳದಲ್ಲಿ ಮತ್ತೊಂದು ಹೊಸ ಕಾರು | Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಳೆದ ಒಂದು ತಿಂಗಳ ಹಿಂದೆಯಷ್ಟೇ ಹೊಸ ಕಾರ್ ಖರೀದಿ ಮಾಡಿದ್ದರು. ಈಗಾಗಲೇ ಡಿ ಬಾಸ್ ಮನೆಯಲ್ಲಿ ಸಾಕಷ್ಟು ಕಾರ್ ಗಳಿವೆ. ದರ್ಶನ್ ಅವರ ಕಾರ್ ಕ್ರೇಜ್ ಎಷ್ಟರ ಮಟ್ಟಿಗಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ.

ದರ್ಶನ್ ಬಳಿ ವರ್ಲ್ಡ್ ಕ್ಲಾಸ್ ಕಾರುಗಳಿದ್ದು ಮೊನ್ನೆ ಮೊನ್ನೆಯಷ್ಟೇ ಲಂಬೋರ್ಗಿನಿ ಖರೀದಿ ಮಾಡಿ ಬೆಂಗಳೂರು, ಮೈಸೂರು ಸೇರಿದಂತೆ ಎಲ್ಲೆಡೆ ಸುತ್ತಾಡಿದ್ದರು. ಚಕ್ರವರ್ತಿ ಕಾರು ನೋಡಲು ಸ್ಯಾಂಡಲ್ ವುಡ್ ನಲ್ಲಿರುವ ದರ್ಶನ್ ಸ್ನೇಹಿತರೆಲ್ಲರೂ ಮನೆಗೆ ಭೇಟಿ ನೀಡಿ ಫೋಟೋಗಳನ್ನ ತೆಗೆಸಿಕೊಂಡಿದ್ದರು. ಬರೀ ದುಬಾರಿ ಕಾರ್ ಗಳು ಮಾತ್ರವಲ್ಲ ದರ್ಶನ್ ಅವರ ಮನಸ್ಸಿಗೆ ಇಷ್ಟವಾಯ್ತು ಅಂದ್ರೆ ಆಯ್ತು ಆ ಕಾರನ್ನ ಖರೀದಿ ಮಾಡುತ್ತಾರೆ.

'ಚಕ್ರವರ್ತಿ' ದರ್ಶನ್ ಬಳಿ ಇದೆ 'ವರ್ಲ್ಡ್ ಕ್ಲಾಸ್' ಕಾರ್ ಗಳು

ಲಂಬೋರ್ಗಿನಿ ನಂತರ ನಿರ್ಮಾಪಕ ರಾಮಮೂರ್ತಿ ದರ್ಶನ್ ಅವರಿಗೆ ಮಾರುತಿ 800 ಉಡುಗೊರೆಯಾಗಿ ನೀಡಿದ್ದರು. ಹೊಸ ಕಾರಿನ ಬಗ್ಗೆ ಜನರು ಅಭಿಮಾನಿಗಳು ಮಾತನಾಡುತ್ತಿರುವಾಗಲೇ ದರ್ಶನ್ ಮನೆ ಅಂಗಳಕ್ಕೆ ಹೊಸ ಕಾರು ಬಂದಿದೆ. ಹೇಗಿದೆ ದರ್ಶನ್ ಕೊಂಡುಕೊಂಡಿರುವ ಕಾರು? ಈ ಬಾರಿ ಚಾಲೆಂಜಿಂಗ್ ಸ್ಟಾರ್ ಆಯ್ಕೆ ಮಾಡಿಕೊಂಡಿದ್ದು ಯಾವ ಕಂಪನಿಯ ಕಾರ್? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

ಡಿ ಬಾಸ್ ಮನೆಯಲ್ಲಿ ಹೊಸ ಕಾರ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆಯಂಗಳಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಸಾಕಷ್ಟು ದುಬಾರಿ ಕಾರುಗಳನ್ನ ಹೊಂದಿರುವ ಡಿ ಬಾಸ್ ಮತ್ತೊಂದು ಕಾರ್ ಖರೀದಿ ಮಾಡಿದ್ದಾರಂತೆ.

ಜಿಪ್ಸಿ ಕೊಂಡುಕೊಂಡರಾ ಚಕ್ರವರ್ತಿ

ದರ್ಶನ್ ಹೊಸ ಜಿಪ್ಸಿ ತೆಗೆದುಕೊಂಡಿದ್ದಾರೆ ಎನ್ನುವ ಸುದ್ದಿ ಕೇಳಿರುತ್ತಿದ್ದು. ಮಾಡಿಫಿಕೇಷನ್ ಮಾಡಿಸಿರುವ ಜಿಪ್ಸಿ ದರ್ಶನ್ ಅವರ ಬಳಿ ಕಾಣಿಸಿಕೊಂಡಿದೆ. ಅಭಿಮಾನಿಗಳು ಈಗಾಗಲೇ ಜಿಪ್ಸಿಯ ಪೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.

ಡಿ ಬಾಸ್ ಬಳಿ ಇರುವ ಕಾರ್ ಗಳು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಳಿ ಸಾಕಷ್ಟು ಕಾರ್ ಕಲೆಕ್ಷನ್ಸ್ ಗಳಿವೆ. ಜಾಗ್ವಾರ್, Porsche ,ಆಡಿ ,i 20 ಕಾರ್, ರೇಂಜ್ ರೋವರ್, ದುಬಾರಿ ಫಾರ್ಚೂನರ್, ಮಿನಿಕೂಪರ್, ಹಮ್ಮರ್ ಹೀಗೆ ಇನ್ನೂ ಅನೇಕ ಕಾರ್ ಗಳ ಲೀಸ್ಟ್ ನಲ್ಲಿ ಈಗ ಜಿಪ್ಸಿ ಸೇರಿಕೊಳ್ಳಲಿದೆ.

ಯಜಮಾನ ಸೆಟ್ ನಲ್ಲಿ ಜಿಪ್ಸಿ

ದರ್ಶನ್ ಯಜಮಾನ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಮೈಸೂರಿನಲ್ಲಿ ಶೂಟಿಂಗ್ ನಡೆಯುತ್ತಿದ್ದು ಸೆಟ್ ನಲ್ಲಿ ಜಿಪ್ಸಿ ಕಾಣಿಸಿಕೊಂಡಿದೆ. ಆದ್ದರಿಂದ ಜಿಪ್ಸಿ ಚಿತ್ರೀಕರಣದ್ದೂ ಅಥವಾ ದರ್ಶನ್ ಖರೀದಿ ಮಾಡಿರುವುದೋ ಎನ್ನುವ ಅನುಮಾನಗಳು ಕಾಡುತ್ತಿದೆ.

ವಿಜಿ ಜೊತೆ ಪೊಲೀಸ್ ಠಾಣೆಗೆ ಆಗಮಿಸಿದ ಲಕ್ಷ್ಮೀ- ಸುಂದರ್

English summary
Kannada actor Darshan has bought a new gypsy, recently he bought a Lamborghini car. Darshan has taken new Gypsy to Yajamana movie shooting place.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada