For Quick Alerts
  ALLOW NOTIFICATIONS  
  For Daily Alerts

  ಗಾಳಿ ಸುದ್ದಿ ಹಬ್ಬಿಸಬೇಡಿ, ಎಲ್ಲ ವದಂತಿಗಳಿಗೆ ಬ್ರೇಕ್ ಹಾಕಿದ ಡಿ-ಬಾಸ್.!

  By Bharath Kumar
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50ನೇ ಚಿತ್ರ 'ಕುರುಕ್ಷೇತ್ರ' ಘೋಷಣೆ ಆದಾಗನಿಂದಲೂ, ತಮ್ಮ ಮುಂದಿನ ಚಿತ್ರಗಳ ಬಗ್ಗೆ ಗೊಂದಲ ಹೆಚ್ಚಾಗಿದೆ.

  50ನೇ ಚಿತ್ರದ ನಂತರ 51 ಮತ್ತು 52ನೇ ಚಿತ್ರ ಯಾರು ನಿರ್ಮಾಣ ಮಾಡಲಿದ್ದಾರೆ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ. ಹೀಗಿರುವಾಗ, ಈ ಚರ್ಚೆಗೆ ಮತ್ತೊಂದು ಚಿತ್ರ ಸೇರಿಕೊಂಡಿದೆ.

  ಇದನ್ನೆಲ್ಲಾ ಗಮನಿಸಿರುವ ದಾಸ ಈಗ ಎಲ್ಲರಿಗೂ ಖಡಕ್ ಸೂಚನೆ ಕೊಟ್ಟಿದ್ದಾರೆ. ಯಾವ ಚಿತ್ರ ಮೊದಲು, ಯಾವ ಚಿತ್ರ ನೆಕ್ಸ್ಟ್ ಎಂಬುದರ ಬಗ್ಗೆ ಗಾಳಿ ಸುದ್ದಿ ಹಬ್ಬಿಸುತ್ತಿರುವರಿಗೆ ದರ್ಶನ್ ಉತ್ತರಿಸಿದ್ದಾರೆ. ಮುಂದೆ ಓದಿ....

  'ತಾರಕ್' ಯಶಸ್ಸಿಗೆ ಚಿರಋಣಿ

  'ತಾರಕ್' ಯಶಸ್ಸಿಗೆ ಚಿರಋಣಿ

  ''ತಾರಕ್ ಚಿತ್ರವನ್ನು ಇಷ್ಟು ಪ್ರೀತಿಯಿಂದ ದೊಡ್ಡ ಮಟ್ಟದ ಯಶಸ್ಸು ನೀಡಿ ಒಪ್ಪಿಕೊಂಡಿರುವುದಕ್ಕೆ ಎಲ್ಲರಿಗೂ ನಮ್ಮ ತಂಡದಿಂದ ಕೃತಜ್ಞತೆಗಳು. ನಿಮ್ಮ ಪ್ರೀತಿ-ಪ್ರೋತ್ಸಾಹ ನಮ್ಮಂಥ ಚಿಕ್ಕ ಕಲಾವಿದರ ಮೇಲೆ ಸದಾ ಇರಲಿ'' - ದರ್ಶನ್, ನಟ

  'ತಾರಕ್' ಸಿನಿಮಾ ಗೆದ್ದ ಖುಷಿಯನ್ನು ಹಂಚಿಕೊಂಡ ದಾಸ ದರ್ಶನ್

  ಸದ್ಯಕ್ಕೆ 'ಕುರುಕ್ಷೇತ್ರ' ಮಾತ್ರ

  ಸದ್ಯಕ್ಕೆ 'ಕುರುಕ್ಷೇತ್ರ' ಮಾತ್ರ

  ''ತಾರಕ್' ಆದಮೇಲೆ ನನ್ನ 50ನೇ ಚಿತ್ರ 'ಕುರುಕ್ಷೇತ್ರ'. ಅದರ ವಿವರ ಕೆಲ ತಿಂಗಳ ನಂತರ ನಾನೇ ತಿಳಿಸುವೆ'' ಎಂದು ಹೇಳುವ ಮೂಲಕ ಮುಂದಿನ ಚಿತ್ರಗಳ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.

  ತಮಿಳು ನಟ ಅಜಿತ್ ಚಿತ್ರದ ರೀಮೇಕ್ ನಲ್ಲಿ ದರ್ಶನ್ ನಟನೆ.!

  ಎಲ್ಲ ಗಾಳಿ ಸುದ್ದಿಗಳು

  ಎಲ್ಲ ಗಾಳಿ ಸುದ್ದಿಗಳು

  ''ನಾನು ಕಂಡ ಹಾಗೆ ಮೀಡಿಯಾದಲ್ಲಿ, ಸಾಮಾಜಿಕ ತಾಣಗಳಲ್ಲಿ ನನ್ನ 51, 52, 53ನೇ ಚಿತ್ರಗಳ ಬಗ್ಗೆ ಅನವಶ್ಯಕ ಚರ್ಚೆಗಳು ಮತ್ತು ಗಾಳಿ ಸುದ್ದಿಗಳು ಸದ್ಯಕ್ಕೆ ಬೇಡ'' ಎಂದು ದಾಸ ಎಲ್ಲ ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ

  ಎಲ್ಲ ವಿವರ ನಾನೇ ಕೊಡ್ತೀನಿ

  ಎಲ್ಲ ವಿವರ ನಾನೇ ಕೊಡ್ತೀನಿ

  ಇನ್ನು ಉಳಿದಂತೆ 'ಕುರುಕ್ಷೇತ್ರ' ಚಿತ್ರದ ನಂತರ ಮುಂದಿನ ಚಿತ್ರಗಳ ಬಗ್ಗೆ ಎಲ್ಲ ವಿವರಗಳನ್ನ ನಾನೇ ಕೊಡ್ತೀನಿ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಪಷ್ಟಪಡಿಸಿದ್ದಾರೆ.

  3 ಚಿತ್ರಗಳು ಕಾಯುತ್ತೀವೆ

  3 ಚಿತ್ರಗಳು ಕಾಯುತ್ತೀವೆ

  'ಕುರುಕ್ಷೇತ್ರ' ಚಿತ್ರದ ನಂತರ ದರ್ಶನ್ ಮೂರು ಸಿನಿಮಾಗಳನ್ನ ಒಪ್ಪಿಕೊಂಡಿದ್ದಾರೆ. ಶೈಲಜಾ ನಾಗ್ ನಿರ್ಮಾಣದ ಸಿನಿಮಾ ಮತ್ತು ಸಂದೇಶ್ ನಾಗರಾಜ್ ಅವರ ನಿರ್ಮಾಣದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ. ಇದರ ಮಧ್ಯೆ ಎಂ.ಡಿ.ಶ್ರೀಧರ್ ನಿರ್ದೇಶನದ ಚಿತ್ರ ಕೂಡ ಟೇಕ್ ಆನ್ ಆಗಲಿದೆ. ಹೀಗಾಗಿ, ಈ ಮೂರು ಚಿತ್ರಗಳಲ್ಲಿ ಯಾವುದು ಮೊದಲು, ಯಾವುದು ನೆಕ್ಸ್ಟ್ ಎಂಬುದು ದೊಡ್ಡ ಚರ್ಚೆಯಾಗಿದೆ.

  English summary
  Challenging Star Darshan thoogudeep Has Give Clarification About His Upcoming Movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X